Last Updated:
ಬೆಂಗಳೂರು ಯುವ ವೃತ್ತಿಪರರ ಖರ್ಚು ಸಮಸ್ಯೆ ವೈರಲ್, ಅಕ್ಷಯ್ ಸಿಎನ್ bangalore_viral ನಲ್ಲಿ ಲೊಕೇಶನ್ ಆಯ್ಕೆ, ಸ್ವಿಗ್ಗಿ ಝೊಮಾಟೊ ಕಡಿತ, ಮನೆ ಊಟ, ಸಾಮಾಜಿಕ ಪ್ರೆಶರ್ ತಪ್ಪಿಸಿ ಉಳಿತಾಯ ಸಲಹೆ ನೀಡಿದ್ದಾರೆ
ಬೆಂಗಳೂರು (Bengaluru) ಎಂದರೆ ಬರೀ ಕೆಲಸದ ಒತ್ತಡ ಮತ್ತು ಟ್ರಾಫಿಕ್ ಮಾತ್ರವಲ್ಲ, ಇಲ್ಲಿ ಹಣ (Money) ಖರ್ಚಾಗುವ ವೇಗವೂ ಅಷ್ಟೇ ಜೋರು. ಕಷ್ಟಪಟ್ಟು ದುಡಿದ ಹಣ ತಿಂಗಳಾಂತ್ಯಕ್ಕೆ ಕೈಗೆ ಬಾರದಿರುವುದು ಬಹಳಷ್ಟು ಯುವ ವೃತ್ತಿಪರರ ಸಮಸ್ಯೆ. ಇದೀಗ ‘bangalore_viral’ ಪುಟದ ಅಕ್ಷಯ್ ಸಿಎನ್, ತಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಹಣ ಉಳಿಸುವುದು ಹೇಗೆ ಎಂಬುದನ್ನು ವೈರಲ್ (Viral) ಮಾಡಿದ್ದಾರೆ. ಅವರ ಪ್ರಕಾರ, ಜೀವನದ ಗುಣಮಟ್ಟವನ್ನು ಬಿಟ್ಟುಕೊಡದೆಯೇ ನಾವು ದೊಡ್ಡ ಉಳಿತಾಯ ಮಾಡಬಹುದು.
ಅನಗತ್ಯ ಖರ್ಚುಗಳಿಗೆ ಗುಡ್ ಬೈ: ಸ್ವಿಗ್ಗಿ/ಝೊಮಾಟೊದಂತಹ ತ್ವರಿತ ವಾಣಿಜ್ಯ ಸೇವೆಗಳು, ಸಣ್ಣ-ಪುಟ್ಟ ಆನ್‍ಲೈನ್ ಶಾಪಿಂಗ್ ಮತ್ತು ಪೇಯ್ಡ್ ಸಬ್‍ಸ್ಕ್ರಿಪ್ಶನ್‍ಗಳು ನಿಮ್ಮ ಅರಿವಿಲ್ಲದೆಯೇ ಹಣವನ್ನು ನುಂಗಿಹಾಕುತ್ತವೆ. ಇವುಗಳ ಮೇಲೆ ಹದ್ದಿನ ಕಣ್ಣಿರಲಿ.
ಹೊರಗಿನ ಊಟ vs ಮನೆ ಊಟ: ಪ್ರತಿದಿನ ಹೊರಗೆ ತಿನ್ನುವುದು ಹಣದ ಜೊತೆಗೆ ಆರೋಗ್ಯವನ್ನೂ ಹಾಳು ಮಾಡುತ್ತದೆ. ಮನೆಯಲ್ಲೇ ಅಡುಗೆ ಮಾಡಿ, ಅದು ಆರೋಗ್ಯಕ್ಕೂ ಒಳ್ಳೆಯದು, ಜೇಬಿಗೂ ಹಿತ.
ಅಕ್ಷಯ್ ಅವರ ಪ್ರಕಾರ, ಕೇವಲ ಸಂಬಳ ಹೆಚ್ಚಾಗುವುದು ಮಾತ್ರ ಹಣದ ಸಮಸ್ಯೆಗೆ ಪರಿಹಾರವಲ್ಲ. ಎಷ್ಟೇ ದುಡಿದರೂ ಹಣಕಾಸಿನ ಅಭ್ಯಾಸಗಳು ಸರಿಯಿಲ್ಲದಿದ್ದರೆ ಬಡತನ ತಪ್ಪಿದ್ದಲ್ಲ. ಅಕ್ಷಯ್ ನೀಡಿರುವ ಈ ಸಲಹೆಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Bangalore [Bangalore],Bangalore,Karnataka
May 26, 2026 10:07 AM IST













