[ad_1]
Last Updated:
Vijay: ಚುನಾವಣಾ ಪ್ರಚಾರ ರೋಡ್ ಶೋ ವೇಳೆ ವಿಜಯ್ನ ಟೀಕಿಸಿದ ತಮಿಳುನಾಡು ಮಾಜಿ ಸಿಎಂ, ಎಂಕೆ ಸ್ಟಾಲಿನ್ ವಾಗ್ದಾಳಿ, ಹೇಳಿದ್ದೇನು?
ಡಿಎಂಕೆ ಮುಖ್ಯಸ್ಥ (DMK) ಮಾಜಿ ಸಿಎಂ ಎಂಕೆ ಸ್ಟಾಲಿನ್ (MK Stalin) ಅವರು ತಮಿಳುನಾಡು ಸಿಎಂ ವಿಜಯ್ (CM C Joseph Vijay) ಅವರ ವಿರುದ್ಧ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದಾರೆ. ಎಸ್ಐಆರ್ (SIR) ಹಾಗೂ ಮುಖ್ಯ ಎಲೆಕ್ಷನ್ ಕಮಿಷನರ್ (CEC) ಗ್ಯಾನೇಶ್ ಕುಮಾರ್ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ವಿಜಯ್ ಮೌನವನ್ನು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ತಮಿಳುನಾಡಿನ ಧರಪುರಂನಲ್ಲಿ ಅಕ್ಟೋಬರ್ 6ರಂದು ನಡೆಯಲಿರೋ ಉಪ ಚುನಾವಣೆಗೆ ಪ್ರಚಾರ ರೋಡ್ ಶೋ ಮಾಡಿ ಮಾತನಾಡಿದ ಸ್ಟಾಲಿನ್ ಅವರು, ಟಿವಿಕೆ ಮುಖ್ಯಸ್ಥರು ಬಿಜೆಪಿಗೆ ಹೆದರಿದ್ದಾರಾ ಎಂದು ಪ್ರಶ್ನಿಸಿ ಎಸ್ಐಆರ್ ಹಾಗೂ ಸಿಇಸಿ ವಿವಾದದ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ.
ನೀವು ಹೆದರುತ್ತಿರುವುದು ಯಾರನ್ನು? ಸಿಎಂ ಸರ್ ನಿಮ್ಮ ಭಯ ಏನು? ಇಡೀ ದೇಶಾದ್ಯಂತ ಇರುವ ರಾಜಕೀಯ ಮುಖಂಡರು ಮಾತನಾಡುತ್ತಿರುವ ಒಂದು ವಿಚಾರದ ಬಗ್ಗೆಯೂ ನಿಮಗೆ ಮಾತನಾಡೋಕೆ ಆಗುತ್ತಿಲ್ಲ ಎಂದಾದರೆ ಅದರ ಹಿಂದಿನ ಕಾರಣ ಏನು? ಸಿಎಂ ಸಾರ್ ನೀವು ಬಿಜೆಪಿಗೆ ಅಷ್ಟು ಭಯ ಪಡ್ತೀರಾ? ಎಂದು ಸ್ಟಾಲಿನ್ ಪ್ರಶ್ನೆ ಮಾಡಿದ್ದಾರೆ.
ವಿಜಯ್ ಅವರು ಸತ್ಯ ಹೇಳಿದ್ದಾರೆ. ಟಿವಿಕೆ ಬಿಜೆಪಿಯ ಒಂದು ಭಾಗ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಮತ್ತಷ್ಟು ಟಾರ್ಗೆಟ್ ಮಾಡಿದ ಸ್ಟಾಲಿನ್, ವಿಜಯ್ ಅವರು ಸಿಎಂನಂತೆ ವರ್ತಿಸಬೇಕು. ಸಿಎಂ ನಂತೆ ವರ್ತಿಸಿ, ಚೀಪ್ ಮಿನಿಸ್ಟರ್ನಂತೆ ಆಡಬೇಡಿ ಎಂದು ಸ್ಟಾಲಿನ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಟಿವಿಕೆ ಹಾಗೂ ಡಿಎಂಕೆ ಸದ್ಯ ತಮಿಳುನಾಡು ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿವೆ. 6ನೇ ತಾರೀಕಿಗೆ ಚುನಾವಣೆ ನಡೆಯಲಿದ್ದು, ವಿಜಯ್ ಅವರು ಮಧುರಾಂತಕಂನಲ್ಲಿ ಪ್ರಚಾರ ಮಾಡಿ ಟಿವಿಕೆ ಅಭ್ಯರ್ಥಿ ಮರಗತಂ ಕುಮಾರವೇಲ್ ಪರ ಪ್ರಚಾರ ಮಾಡಿದರು. ಸ್ಟಾಲಿನ್ ಧರಪುರಂನಲ್ಲಿ ರೋಡ್ ಶೋ ಮಾಡಿದ್ದಾರೆ.
ಅಕ್ಟೋಬರ್ 6 ರಂದು ಧಾರಾಪುರಂ ಮತ್ತು ಮಧುರಾಂತಕಂ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ದ್ರಾವಿಡ ಪ್ರಮುಖ ಪಕ್ಷಗಳ ವಿರುದ್ಧ ಬ್ಲಾಕ್ಬಸ್ಟರ್ ಚೊಚ್ಚಲ ಪ್ರವೇಶದ ನಂತರ ಟಿವಿಕೆಯ ಕ್ರೇಜ್ಗೆ ಇದು ದೊಡ್ಡ ಪರೀಕ್ಷೆ. ಸದ್ಯ ನಟ ವಿಜಯ್ ಅವರು ಅದರ ಕೆಲಸಗಳಲ್ಲಿಯೇ ಬ್ಯುಸಿಯಾಗಿದ್ದಾರೆ.
[ad_2]
Source link














