Last Updated:
11 ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದ್ದ ಆ ವ್ಯಕ್ತಿ, ಡೀಪ್ಫೇಕ್ AI-ರಚಿತ ವಿಡಿಯೋವನ್ನು ಬಳಸಿ ಪದೇ ಪದೇ ಈತನ ಬಳಿಯೇ ಹಣ ಕೇಳಿದ್ದಾನೆ.
ಬೆಂಗಳೂರು (ಸೆ.15): ಮೋಸ ಮಾಡೋರು ಇರುವವರೆಗೂ ಮೋಸ ಹೋಗೋರು ಇದ್ದೇ ಇರ್ತಾರೆ ಅನ್ನೋ ಮಾತು ಆಗಾಗ ನಿಜವಾಗ್ತಾನೆ ಇರುತ್ತೆ. ವಂಚಕರು ಕೂಡ ಮೋಸ ಮಾಡಲು ಹೊಸ ಹೊಸ ಜಾಲ ಎಣೆಯುತ್ತಿರುತ್ತಾರೆ. ಹಾಗೇ ತಮಿಳುನಾಡು ಸಿಎಂ ವಿಜಯ್ (CM Vijay) ಹೆಸರಲ್ಲಿ ಬೆಂಗಳೂರಿನ (Bengaluru) ವ್ಯಕ್ತಿ ಬಳಿ ಹಣ ಪಡೆದು ಪಂಗನಾಮ ಹಾಕಿರೋ ಘಟನೆ ಬೆಳಕಿಗೆ ಬಂದಿದೆ. ಸಿಎಂ ವಿಜಯ್ 11 ಲಕ್ಷ ಸಹಾಯ ಮಾಡ್ತಾರೆ ಎಂಬ ವಿಡಿಯೋ ಸಂದೇಶ ಕಳಿಸಿದವರು ಹಂತ ಹಂತವಾಗಿ ವಂಚಿಸಿದ್ದು ಹೇಗೆ ಗೊತ್ತಾ?














