Last Updated:
ಭಾರತ ಪರ 12 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದ ವಿಜಯ್ ಶಂಕರ್ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 35 ವರ್ಷದ ವಿಜಯ್ ಶಂಕರ್ 2019 ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದರು.
3D ಆಟಗಾರ ಎಂದೂ ಕರೆಯಲ್ಪಡುವ ಭಾರತ ತಂಡದ ಸ್ಟಾರ್ ಆಲ್ರೌಂಡರ್ ವಿಜಯ್ ಶಂಕರ್ ಮೇ 22 ರಂದು ನಿವೃತ್ತಿ ಘೋಷಿಸಿದರು. ಶಂಕರ್ ತಮ್ಮ ನಿವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳಿಗೆ ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಪೋಸ್ಟ್ನಲ್ಲಿ ಅವರು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಶಂಕರ್ 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ 2019 ರ ಏಕದಿನ ವಿಶ್ವಕಪ್ಗಾಗಿ ಭಾರತ ತಂಡದ ಭಾಗವಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ಶಂಕರ್ ತಮ್ಮ ನೋವನ್ನು ಸಹ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಭಾವನಾತ್ಮಕ ಪೋಸ್ಟ್ನಲ್ಲಿ ವಿಜಯ್ ಶಂಕರ್, “ಕ್ರಿಕೆಟ್ ನನ್ನ ಜೀವನ, ನಾನು 10 ವರ್ಷ ವಯಸ್ಸಿನಿಂದಲೂ ಅದನ್ನು ಆಡುತ್ತಿದ್ದೇನೆ. 25 ವರ್ಷಗಳ ನಂತರ, ಎಲ್ಲರೂ ಕನಸು ಕಾಣುವ ಮಟ್ಟದಲ್ಲಿ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಅಂದುಕೊಂಡಿದ್ದೇನೆ. ಕ್ರೀಡೆಯಲ್ಲಿ ಹೊಸ ಅವಕಾಶಗಳನ್ನು ಪಡೆಯಲು ದೇಶೀಯ ಮತ್ತು ಐಪಿಎಲ್ ಕ್ರಿಕೆಟ್ ಎರಡರಿಂದಲೂ ನಿವೃತ್ತಿ ಹೊಂದಲು ನಾನು ನಿರ್ಧರಿಸಿದ್ದೇನೆ.
ನನ್ನ ದೇಶಕ್ಕಾಗಿ ಆಡುವುದು ನನ್ನ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿಗೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಬಿಸಿಸಿಐ, ನನ್ನ ಎಲ್ಲಾ ತರಬೇತುದಾರರು, ಸಹಾಯಕ ಸಿಬ್ಬಂದಿ, ಫಿಸಿಯೋಗಳು ಮತ್ತು ತರಬೇತುದಾರರು ಹಾಗೂ ನನ್ನ ಕ್ರಿಕೆಟ್ ಪ್ರಯಾಣಕ್ಕೆ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ” ಎಂದು ಬರೆದಿದ್ದಾರೆ.
Vijay Shankar: ಐಪಿಎಲ್ ಸೇರಿ ಭಾರತೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಪ್ಲೇಯರ್! ಬೇರೆ ದೇಶದ ಪರ ಆಡ್ತಾರಾ ತಮಿಳುನಾಡು ಕ್ರಿಕೆಟರ್?













