Last Updated:
ರೇಸ್ಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಜಿತ್ ಕುಮಾರ್, ವಿಜಯ್ ಬಗ್ಗೆ ಅತ್ಯಂತ ಗೌರವದಿಂದ ಮಾತನಾಡಿದ್ದಾರೆ.
ತಮಿಳು ಚಿತ್ರರಂಗದ ಇಬ್ಬರು ಬಹುದೊಡ್ಡ ಸ್ಟಾರ್ಗಳಾದ ಅಜಿತ್ ಕುಮಾರ್ (Ajith Kumar) ಮತ್ತು ದಳಪತಿ ವಿಜಯ್ (Thalapathy Vijay) ರನ್ನ ಒಂದೇ ಸಂದರ್ಭದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಹಲವು ವರ್ಷಗಳಿಂದ ಇಬ್ಬರ ಅಭಿಮಾನಿಗಳ ನಡುವೆ ಪೈಪೋಟಿ ಮತ್ತು ವಾಗ್ವಾದಗಳು ನಡೆಯುತ್ತಲೇ ಬಂದಿದ್ದರೂ, ಇದೀಗ ಈ ಇಬ್ಬರು ನಟರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ವಿಜಯ್ ಬಗ್ಗೆ ಅಜಿತ್ ಕುಮಾರ್ ಆಡಿರುವ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.














