Last Updated:
CM Vijay: ಆಕೆ ರಸ್ತೆ ಮಧ್ಯೆ ಮಲಗಿದ್ದಳು. ಏಳಮ್ಮಾ ಟ್ರಾಫಿಕ್ ಜಾಮ್ ಆಗ್ತಿದೆ ಅಂದ್ರೂ ಡೋಂಟ್ ಕೇರ್. ಸಿಎಂ ಬರಬೇಕು, ಹಗ್ ಮಾಡ್ಬೇಕು ಅಷ್ಟೇ ಎಂದ ದೆಹಲಿ ಲೇಡಿಯ ಹುಚ್ಚಾಟಕ್ಕೆ ಎಲ್ಲರೂ ಸುಸ್ತು.
ಅಭಿಮಾನಿಯೊಬ್ಬರ ವಿಚಿತ್ರ ವರ್ತನೆ ಈಗ ವೈರಲ್ ಆಗಿಬಿಟ್ಟಿದೆ. ಜಂತರ್ ಮಂತರ್ ಬಳಿ ದೆಹಲಿ (Delhi) ರಸ್ತೆಯ ಮಧ್ಯದಲ್ಲಿ ಮಹಿಳೆಯೊಬ್ಬರು (Woman) ಮಲಗಿದ್ದು, ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ದಳಪತಿ ವಿಜಯ್ (Vijay) ಬಂದು ತಮ್ಮನ್ನು ಅಪ್ಪಿಕೊಳ್ಳುವವರೆಗೂ ಇಲ್ಲಿಂದ ಕದಲೋದೇ ಇಲ್ಲ ಎಂದು ರಂಪ ಮಾಡಿದರು.
ಸೆಪ್ಟೆಂಬರ್ 29, 2026 ರಂದು ರೆಕಾರ್ಡ್ ಮಾಡಲಾಗಿದೆ ಎನ್ನಲಾದ ಇನ್‌ಸ್ಟಾಗ್ರಾಮ್ ವೀಡಿಯೊ ಅಂದಿನಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಲಕ್ಷಣ ವರ್ತನೆಗೆ ವಿಭಿನ್ನ ಪ್ರತಿಕ್ರಿಯೆಯೂ ಬಂದಿದೆ.
ಕಂಟೆಂಟ್ ಕ್ರಿಯೇಟರ್ ಸೈಯದ್ ಕಮರ್ ಅಲಿ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಶೇರ್ ಮಾಡಿದ್ದಾರೆ. ವೀಡಿಯೊದಲ್ಲಿ, ಜಂತರ್ ಮಂತರ್‌ನಲ್ಲಿ ನೀವು ಯಾಕೆ ಹೀಗೆ ಮಲಗಿ ಪೊಲೀಸರು ಮತ್ತು ಜನರಿಗೆ ತೊಂದರೆ ನೀಡುತ್ತಿದ್ದೀರಿ ಎಂದು ಅವರು ಮಹಿಳೆಯನ್ನು ಕೇಳುವುದನ್ನು ಕಾಣಬಹುದು.
ಅದಕ್ಕೆ ಅವರು ತಮಿಳುನಾಡು ಸಿಎಂ ವಿಜಯ್ ಬಂದು ಅವರನ್ನು ಅಪ್ಪಿಕೊಳ್ಳುವವರೆಗೂ ಕದಲುವುದಿಲ್ಲ ಎಂದು ಪ್ರತಿಕ್ರಿಯಿಸುತ್ತಾರೆ. ಮಹಿಳೆಯನ್ನು ರಸ್ತೆಯಿಂದ ದೂರ ಸರಿಸಲು ಪ್ರಯತ್ನಿಸುವ ಇಬ್ಬರು ಮಹಿಳಾ ಪೊಲೀಸರು ಸಾಕಷ್ಟು ಪ್ರಯತ್ನಿಸಿದರೂ ಇದು ಸಾಧ್ಯವಾಗಿಲ್ಲ.
“ನನ್ನನ್ನು ಮುಟ್ಟಬೇಡಿ, ಇದು ನನ್ನ ಹಕ್ಕು” ಎಂದು ಮಹಿಳೆ ಪೊಲೀಸ್ ಸಿಬ್ಬಂದಿಯ ಜೊತೆ ಗಲಾಟೆ ಮಾಡಿದ್ದು ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಮಹಿಳೆ ರಸ್ತೆಯ ಮಧ್ಯದಲ್ಲಿ ಮೊದಲು ಕುಳಿತು ನಂತರ ಮಲಗಿರುವುದನ್ನು ತೋರಿಸಲಾಗಿದೆ.
ದಳಪತಿ ವಿಜಯ್ ಘಟನಾ ಸ್ಥಳದಲ್ಲಿ ನಿಜವಾಗಿಯೂ ಇದ್ದಾರೆಯೇ? ಅಥವಾ ಆ ಮಹಿಳೆಯೊಂದಿಗೆ ಮಾತನಾಡಿದ್ದಾರಾ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ನೆಟ್ಟಿಗರು ಮಾತ್ರ ಇದಕ್ಕೆ ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಯ್ಯೋ ಇದೇನು ನೋಡ್ತಿದ್ದೀವಿ ಎಂದರೆ ಮತ್ತೊಬ್ಬರು, “ಇದು ನಿಮ್ಮ ಹಕ್ಕು, ನೀವು ಹೇಳಿದ್ದು ಸರಿ” ಎಂದು ನಗುವ ಎಮೋಜಿ ಹಾಕಿದ್ದಾರೆ. ಮತ್ತೊಬ್ಬರು ವ್ಯಂಗ್ಯವಾಗಿ, ವಿಜಯ್‌ಗಾಗಿ ಕಾಯುತ್ತಾ ಮಲಗಲು ಬಯಸಿದರೆ, ದೆಹಲಿಗಿಂತ ಚೆನ್ನೈನಲ್ಲಿ ಕಾಯೋದು ಬೆಸ್ಟ್ ಎಂದು ಸೂಚಿಸಿದರು. ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಲು ಪ್ರಯತ್ನಿಸುತ್ತಿರುವ ಪೊಲೀಸ್ ಅಧಿಕಾರಿಗಳ ಬಗ್ಗೆ ಕೆಲವು ನೆಟ್ಟಿಗರು ಅಯ್ಯೋ ಎಂದರು.
ಕಾಲಿವುಡ್ನಲ್ಲಿ ವಿಜಯ್ ಸ್ಟಾರ್ ನಟ. ಈಗ ಸಿಎಂ ಆದ ನಂತರ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ತಮಿಳು ಸಿನಿಮಾದ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾಗಿದ್ದ ಅವರು ತಮಿಳು ರಾಜಕೀಯದಲ್ಲಿಯೂ ದೊಡ್ಡ ಹೆಸರಾಗಿ ಬೆಳೆಯುತ್ತಿದ್ದಾರೆ.














