ರಾಕಿಂಗ್ ಸ್ಟಾರ್ ಯಶ್ ಇಲ್ಲಿ ಅಷ್ಟೆ ಅಲ್ಲ. ನಮ್ಮಲ್ಲೂ ದೊಡ್ಡ ಸ್ಟಾರ್ ಆಗಿದ್ದಾರೆ. ಇವರ ಸಿನಿಮಾಗಳ ಬೇಡಿಕೆ ಅಲ್ಲೂ ಇದೆ. ರಾಕಿಂಗ್ ಸ್ಟಾರ್ ಯಶ್ ಅಲ್ಲದೆ ಸುದೀಪ್ ನನ್ನ ಸ್ನೇಹಿತರಾಗಿದ್ದಾರೆ.
ಸುದೀಪ್ ನನ್ನ ಸ್ನೇಹಿತ; ಬೋನಿ ಕಪೂರ್
(ಚಿತ್ರ ಕೃಪೆ: ಬೋನಿ ಕಪೂರ್ ಇನ್ಸ್ಟಾಗ್ರಾಮ್)
ನನ್ನ ನಿರ್ಮಾಣದ ಹಮ್ ಪಾಂಚ್ ಚಿತ್ರ ಪುಟ್ಟಣ್ಣ ಅವರ ಪಡವಾರಳ್ಳಿ ಪಾಂಡವರು ಚಿತ್ರದ ರೀಮೇಕ್ ಆಗಿದೆ. ಪುಟ್ಟಣ್ಣ ಅವರನ್ನ ಮೀಟ್ ಆಗಿದ್ದೇನೆ. ಇವರು ತುಂಬಾನೆ ಸಿಂಪಲ್ ಆಗಿದ್ದರು.
ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅನಂತ್ ನಾಗ್ ಅವರು ಏನು ಕಡಿಮೇನೆ. ಇತ್ತೀಚಿಗೆ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಶಂಕರ್ ನಾಗ್ ಕೂಡ ಪ್ರತಿಭಾವಂತರೇ ಆಗಿದ್ದರು. ಹೀಗೆ ಕರ್ನಾಕಟದಲ್ಲಿ ಸಾಕಷ್ಟು ಪ್ರತಿಭಾವಂತರು ಇದ್ದಾರೆ.
ನಾನು ಎಲ್ಲ ಭಾಷೆಯಲ್ಲಿ ಚಿತ್ರ ಮಾಡುತ್ತೇನೆ. 100 ಚಿತ್ರಗಳನ್ನ ನಿರ್ಮಿಸುವ ದೊಡ್ಡ ಕನಸಿದೆ. ಈ 100 ಚಿತ್ರಗಳಲ್ಲಿ ಕನ್ನಡ ಸಿನಿಮಾ ಕೂಡ ಇರುತ್ತದೆ.
ನನ್ನ ಸಹೋದರ ಅನಿಲ್ ಮೊದಲ ಚಿತ್ರವು ಕನ್ನಡ ಅಲ್ಲವೇ? ಮಣಿರತ್ನಂ ಅವರ ಜೊತೆಗೆ ಅನಿಲ್ ಮೊದಲು ಪಲ್ಲವಿ ಅನು ಪಲ್ಲವಿ ಕನ್ನಡ ಚಿತ್ರವನ್ನೆ ಮಾಡಿದ್ದಾರೆ.
ನನ್ನ ಚಿತ್ರವನ್ನ ಕರ್ನಾಟಕದಲ್ಲಿಯೇ ಚಿತ್ರೀಕರಣ ಮಾಡಿದ್ದೇವೆ. ಇಲ್ಲಿ ನ್ಯಾಚುರಲ್ ಲೋಕೇಷನ್ ಇವೆ. ಇದು ನಿಜಕ್ಕೂ ಖುಷಿ ಕೊಡುತ್ತದೆ.
ರಾಕಿಂಗ್ ಸ್ಟಾರ್ ಯಶ್ ನಮ್ಮಲ್ಲೂ ದೊಡ್ಡ ಸ್ಟಾರ್
(ಚಿತ್ರ ಕೃಪೆ: ಬೋನಿ ಕಪೂರ್ ಇನ್ಸ್ಟಾಗ್ರಾಮ್)
ಮಾಮ್-2 ಚಿತ್ರ ನನ್ನ 53ನೇ ಚಿತ್ರವಾಗಿದೆ. ಇಷ್ಟು ಚಿತ್ರಗಳನ್ನ ಮಾಡಿದ್ದೇನೆ. ಬೇರೆ ಭಾಷೆಯಲ್ಲೂ ಸಿನಿಮಾ ಮಾಡಿದ್ದೇನೆ. ಕನ್ನಡ ಮತ್ತು ಮಲೆಯಾಳಂ ಸಿನಿಮಾ ಕೂಡ ಮಾಡುವೆ.
ಬೋನಿ ಕಪೂರ್ ಬೆಂಗಳೂರಿಗೆ ಯಾಕೆ ಬಂದಿದ್ದರು? ಈ ಪ್ರಶ್ನೆಗೆ ಉತ್ತರ ಇದೆ. ಬೋನಿ ಕಪೂರ್ ಇಲ್ಲಿಯ ಕೂದಲು ಮತ್ತು ಚರ್ಮದ ಚಿಕಿತ್ಸ ಕ್ಲಿನಿಕ್ ಉದ್ಧಾಟನೆಗೆ ಬಂದಿದ್ದರು.
ಇದರ ಉದ್ಘಾಟನೆಯ ಬಳಿಕ ಬೋನಿ ಕಪೂರ್ ಮಾಧ್ಯಮದ ಜೊತೆಗೂ ಮಾತನಾಡಿದರು. ಈ ಮಾತುಗಳಲ್ಲಿಯೇ ಕನ್ನಡ ಇಂಡಸ್ಟ್ರಿ ಬಗ್ಗೆ ತಮಗಿರೋ ಅಭಿಪ್ರಾಯವೇನು ಅನ್ನೋದನ್ನು ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.













