Rishab Shetty: ಬಿಗ್ ಬಾಸ್ ಕಿಚ್ಚ ಸುದೀಪ್‌ಗೆ ರಿಷಬ್ ಶೆಟ್ರ ವಿಶ್, ಏನಂದ್ರು ಗೊತ್ತಾ? | | ACTPnews

rishab shetty congratulates kichcha sudeep phone call bigg boss stage


ಕಿಚ್ಚನಿಗೆ ಕಾಲ್‌…

ಕಿಚ್ಚ ಸುದೀಪ್ ಅವರಿಗೆ ರಿಷಬ್ ಶೆಟ್ಟಿ ಕಾಲ್‌ ಮಾಡಿದ್ದಾರೆ. ಈ ಕಾಲ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. ನಾನು ನಿಮ್ಮ ಅಭಿಮಾನಿ ಆಗಿದ್ದೇನೆ. ನೀವು ಕನ್ನಡ ಇಂಡಸ್ಟ್ರಿಯಲ್ಲಿ 30 ವರ್ಷ ಪೂರೈಸಿದ್ದೀರಿ.

ಕಿಚ್ಚನಿಗೆ ಕಾಲ್‌…

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ನಿಮ್ಮ ಒಬ್ಬ ಅಭಿಮಾನಿ ಆಗಿ ನಾನು ನಿಮಗೆ ಅಭಿನಂದಿಸುತ್ತೇನೆ. ನೀವು ಹೊಸಬರಿಗೆ ಸಪೋರ್ಟ್ ಮಾಡ್ತೀರಾ. ಇದು ತುಂಬಾನೆ ಖುಷಿ ಕೊಡುತ್ತದೆ.

ನಾನು ಇಂಡಸ್ಟ್ರಿಗೆ ಬಂದಾಗಲೂ ನೀವು ಸಪೋರ್ಟ್ ಮಾಡಿದ್ದಿರಿ. ಈಗ ಬರ್ತಿರೋ ಹೊಸಬರಿಗೂ ನೀವು ಸಪೊರ್ಟ್ ಮಾಡ್ತಾನೇ ಇದ್ದೀರಿ. ಇದನ್ನ ನೋಡಿದರೆ ತುಂಬಾನೆ ಖುಷಿ ಆಗುತ್ತದೆ ಅಂತಲೂ ರಿಷಬ್ ಶೆಟ್ಟಿ ಹೇಳಿದ್ದಾರೆ.

ಸುದೀಪ್ ಸರ್ ಕೊಡುಗೆ

ಸುದೀಪ್ ಸರ್ ನೀವು ಭಾರತೀಯ ಚಿತ್ರರಂಗಕ್ಕೆ ಕೊಡುಗೆಯನ್ನ ಕೊಟ್ಟಿದ್ದೀರಿ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕರನಾಗಿ ನಿಮ್ಮ ಕೊಡುಗೆ ದೊಡ್ಡದೇ ಇದೆ.

30 ವರ್ಷ ಕಂಪ್ಲೀಟ್

ಕಿಚ್ಚ ಸುದೀಪ್ ಸಿನಿಮಾರಂಗಕ್ಕೆ ಕಾಲಿಟ್ಟು 30 ವರ್ಷ ಆಗಿದೆ. ಈ ಒಂದು ಯಶಸ್ವಿ ಜರ್ನಿಗೆ ಅನೇಕರು ಶುಭ ಕೋರಿದ್ದಾರೆ. ತಾಯವ್ವ ಚಿತ್ರದಿಂದ ಕಿಚ್ಚ ಸುದೀಪ್ ಕನ್ನಡ ಸಿನಿಮಾರಂಗದಲ್ಲಿ ಜರ್ನಿ ಶುರು ಮಾಡಿದರು.

ಇಲ್ಲಿಂದ ಕನ್ನಡ, ತೆಲುಗು,ತಮಿಳು, ಹಿಂದಿ ಹೀಗೆ ಎಲ್ಲ ಭಾಷೆಯ ಚಿತ್ರಗಳನ್ನ ಮಾಡಿದರು. ಆದರೆ, ಮಲೆಯಾಳಂ ಭಾಷೆಯ ಚಿತ್ರಗಳನ್ನ ಮಾತ್ರ ಮಾಡಿಲ್ಲ ನೋಡಿ.

ದೇವರಾಯ

ಕಿಚ್ಚ ಸುದೀಪ್ ಈಗೊಂದು ಸಿನಿಮಾ ಮಾಡ್ತಿದ್ದಾರೆ. ಇದಕ್ಕೆ ದೇವರಾಯ ಅಂತಲೇ ಹೆಸರಿದೆ. ಇದು ವಿಜಯನಗರ ಶ್ರೇಷ್ಠ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಕತೆ ಹೇಳುತ್ತದೆ. ಇದರಲ್ಲಿ ದೇವರಾಯನ ಪಾತ್ರವನ್ನ ಸುದೀಪ್ ಮಾಡುತ್ತಿದ್ದಾರೆ.
rishab shetty congratulates kichcha sudeep phone call bigg boss stage

ಕಿಚ್ಚನಿಗೆ ಕಾಲ್‌…

(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್​ಸ್ಟಾಗ್ರಾಮ್)

ಸೆಪ್ಟೆಂಬರ್-2 ರಂದು ಸುದೀಪ್ ಜನ್ಮ ದಿನ ಇತ್ತು. ಆ ದಿನವೇ ಈ ಚಿತ್ರ ಅನೌನ್ಸ್ ಆಗಿದೆ. ಆದರೆ, ಡೈರೆಕ್ಟರ್ ಯಾರು ಅನ್ನುವ ಕುತೂಹಲ ಹಾಗೆ ಇದೆ. ತಮಿಳು ಡೈರೆಕ್ಟರ್ ಸಮುದ್ರಕಣಿ ಅವರ ಡೈರೆಕ್ಷನ್ ಅಲ್ಲಿ ಸುದೀಪ್ ಸಿನಿಮಾ ಮಾಡ್ತಿದ್ದಾರೆ. ಇದಕ್ಕೆ ಸ್ಕೂಲ್ ಬಸ್ ಅಂತ ಹೆಸರಿಟ್ಟಿದ್ದಾರೆ.

ಜೋಗಿ ಪ್ರೇಮ್

ಜೋಗಿ ಪ್ರೇಮ್ ಜೊತೆಗೂ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಹೆಸರು ಏನು ಅನ್ನೋದು ಇನ್ನು ರಿವೀಲ್ ಆಗಿಲ್ಲ. ಆದರೆ, ಇದು ಅನೌನ್ಸ್ ಆಗಿದೆ. ದಿ ವಿಲನ್ ಆದ್ಮೇಲೆ ಈ ಚಿತ್ರ ಮಾಡುತ್ತಿದ್ದಾರೆ.

ಆದರೆ, ಕೆಡಿ ಸಿನಿಮಾದಲ್ಲಿ ಸುದೀಪ್ ಒಂದು ಗೆಸ್ಟ್ ರೋಲ್ ಮಾಡಿದ್ದಾರೆ. ಇದಾದ್ಮೇಲೆ ಈ ಚಿತ್ರ ಅನೌನ್ಸ್ ಆಗಿದೆ. ಈ ಎಲ್ಲ ಚಿತ್ರಗಳ ನಡುವೆ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಮೂರು ಪಾತ್ರಗಳನ್ನ ಮಾಡುತ್ತಿದ್ದಾರೆ.

ಇದು ಅತಿ ದೊಡ್ಡ ಚಿತ್ರವೇ ಆಗಿದೆ. ಅನೂಪ್ ಭಂಡಾರಿ ಈ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ. ಇದರ ಶೂಟಿಂಗ್ ನಡೀತಿದೆ. ಇದರ ಜೊತೆಗೆ ಸುದೀಪ್ ಈಗ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed