Vijay: ಸಿಎಂ ವಿಜಯ್​​ಗೆ ಬೆದರಿಕೆ, DMK ಶಾಸಕನ ವಶಕ್ಕೆ ಪಡೆದ ಪೊಲೀಸ್ | dmk mla held for defamatory speech against tamil nadu cm Vijay | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಡಿಎಂಕೆ ಶಾಸಕ ವಶಕ್ಕೆ


Last Updated:

Vijay: ಸಿಎಂ ವಿಜಯ್​ಗೆ ಬೆದರಿಕೆ ಹಾಕಿದ ಡಿಎಂಕೆ ಶಾಸಕನನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರು ಶಾಸಕರ ಮನೆಗೆ ಬಂದು ಅವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಡಿಎಂಕೆ ಶಾಸಕ ವಶಕ್ಕೆ
ಡಿಎಂಕೆ ಶಾಸಕ ವಶಕ್ಕೆ

ತಮಿಳುನಾಡು ಸಿಎಂಗೆ (Tamil Nadu CM) ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಡಿಎಂಕೆ ಶಾಸಕನನ್ನು (DMK MLA) ಅರೆಸ್ಟ್ ಮಾಡಿದ ಘಟನೆ ಡೆದಿದೆ. ಕೋವಿಲ್ಪಟ್ಟಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ವಿರುದ್ಧ ಬೆದರಿಕೆ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಡಿಎಂಕೆ ಶಾಸಕನನ್ನು ವಶಕ್ಕೆ ಪಡೆಯಲಾಯಿತು.

ಆರೋಪದ ಮೇಲೆ ವಿಲಾತಿಕುಲಂ ಡಿಎಂಕೆ ಶಾಸಕ ಜಿವಿ ಮಾರ್ಕಂಡೇಯನ್ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಭಾಷಣದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಶಾಸಕರ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ.

ಪೊಲೀಸರು ಬೆಳಗಿನ ಜಾವ ವಿಲಾತಿಕುಲಂನಲ್ಲಿರುವ ಮಾರ್ಕಂಡೇಯನ್ ಅವರ ಮನೆಗೆ ಬಂದು ಅವರನ್ನು ವಶಕ್ಕೆ ಪಡೆದರು.

ಶಾಸಕರ ಬೆಂಬಲಿಗರು ಬಂಧನವನ್ನು ಪ್ರತಿಭಟಿಸಿದರು. ಘೋಷಣೆಗಳನ್ನು ಕೂಗಿದರು. ಪೊಲೀಸ್ ವಾಹನವನ್ನು ತಡೆಯಲು ಪ್ರಯತ್ನಿಸಿದರು. ಪೊಲೀಸರು ಶಾಸಕರನ್ನು ಕರೆದುಕೊಂಡು ಹೋಗುವ ಮೊದಲು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಮಾರ್ಕಂಡೇಯನ್ ಅವರನ್ನು ವಿಚಾರಣೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ಯಲಾಯಿತು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.

ಮತದಾರರಿಗೆ ಧನ್ಯವಾದ ಸಭೆ

ವಿಧಾನಸಭಾ ಚುನಾವಣೆಯ ನಂತರ ಅಲ್ಲಿನ ಮತದಾರರಿಗೆ ಧನ್ಯವಾದ ಹೇಳಲು ಶನಿವಾರ ಜುಲೈ 18 ಈ ಸಭೆ ನಡೆದಿತ್ತು. ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಮತ್ತು ಮಾಜಿ ಸಚಿವೆ ಪಿ. ಗೀತಾ ಜೀವನ್ ಸೇರಿದಂತೆ ಹಲವಾರು ಡಿಎಂಕೆ ನಾಯಕರು ಉಪಸ್ಥಿತರಿದ್ದರು.

ತಮ್ಮ ಭಾಷಣದ ಸಮಯದಲ್ಲಿ, ಶ್ರೀ ಮಾರ್ಕಂಡಯನ್ ಅವರು ಶ್ರೀ ವಿಜಯ್ ವಿರುದ್ಧ ಕೆಲವು ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed