Last Updated:
ದಳಪತಿ ವಿಜಯ್ (Vijay) ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕ್ಷಣ ಇದೀಗ ಬಂದೇ ಬಿಟ್ಟಿದೆ. ಹೌದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಭಿನಯದ ಕೊನೆಯ ಸಿನಿಮಾ ಜನ ನಾಯಗನ್ (Jana Nayagan) ಮುಂದಿನ ವಾರವೇ ಭರ್ಜರಿಯಾಗಿ ರಿಲೀಸ್ ಆಗಲಿದೆ.
ದೇಶಾದ್ಯಂತ ದಳಪತಿ ವಿಜಯ್ (Vijay) ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕ್ಷಣ ಇದೀಗ ಬಂದೇ ಬಿಟ್ಟಿದೆ. ಹೌದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಭಿನಯದ ಕೊನೆಯ ಸಿನಿಮಾ ಜನ ನಾಯಗನ್ (Jana Nayagan) ಮುಂದಿನ ವಾರವೇ ಭರ್ಜರಿಯಾಗಿ ರಿಲೀಸ್ ಆಗಲಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳ (Fans) ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.
ವಿಜಯ್ ಅವರ ಕೊನೆ ಚಿತ್ರ ‘ಜನ ನಾಯಗನ್’ ಜನವರಿ 23ರಂದು ತೆರೆಕಾಣಲಿದೆ. ಹಾಗೆಯೇ ಟಿಕೆಟ್ ಬುಕ್ಕಿಂಗ್ ಪ್ಲಾಟ್ ಫಾರ್ಮ್ ಆಗಿರುವ ಡಿಸ್ಟ್ರಿಕ್ ಮೂವೀಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು, ಜನ ನಾಯಗನ್ ಮುಂದಿನ ಗುರುವಾರ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಜೊತೆಗೆ ಶೀಘ್ರದಲ್ಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದ್ದು, ಅಭಿಮಾನಿಗಳು ಆ್ಯಪ್ನಲ್ಲಿ ರಿಮೈಂಡರ್ ಸೆಟ್ ಮಾಡಿಕೊಳ್ಳುವಂತೆ ತಿಳಿಸಿದೆ.
Annan varaar🔥
34 varusham. 68 padangal. 68 First Days.
Idhellam oru One Last First Day-kaga.July 23. Thalapathy thirumba periya thiraikku varaar.
District-la ticket reminders live.
Tickets opening soon. Ready ah? ❤️🔥Notification link: https://t.co/aOM4ULdpwV pic.twitter.com/ToOB99XqnJ
— District Southside (@District_SS) July 15, 2026
ಹಾಗೆಯೇ ಹಂಚಿಕೊಂಡಿರುವ ಪೋಸ್ಟ್ನಲ್ಲಿ 34 ವರ್ಷ, 68 ಸಿನಿಮಾಗಳು, 68 ಫಸ್ಟ್ ಡೇ… ಈಗ ಒಂದು ಕೊನೆಯ ಫಸ್ಟ್ ಡೇ. ವಿಜಯ್ ಮತ್ತೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ. ಟಿಕೆಟ್ಗಳು ಶೀಘ್ರದಲ್ಲೇ ಲಭ್ಯವಾಗಲಿವೆ ಎಂದು ಬರೆಯಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಹಾಗೆಯೇ ಸೆನ್ಸಾರ್ ಮಂಡಳಿ ಸೂಚಿಸಿದ್ದ 12 ತಿದ್ದುಪಡಿಗಳನ್ನು ಚಿತ್ರತಂಡ ಪಾಲಿಸಿದ ನಂತರವೇ ಅಂತಿಮವಾಗಿ ಎ ಪ್ರಮಾಣಪತ್ರ ದೊರಕಿದೆ. ಈ ಪ್ರಕ್ರಿಯೆಯೇ ಚಿತ್ರದ ಬಿಡುಗಡೆಯನ್ನು ಹಲವು ತಿಂಗಳುಗಳ ಕಾಲ ಮುಂದೂಡಲು ಕಾರಣವಾಯಿತು.
ಇದೀಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಸಿನಿಮಾ ಬಿಡುಗಡೆಯ ಹಾದಿ ಸುಗಮವಾಗಿದೆ.
ಹೆಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಜೊತೆಗೆ ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೈನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಾರೆಯಾಗಿ ಜನ ನಾಯಗನ್ ಕೇವಲ ಒಂದು ಸಿನಿಮಾ ಮಾತ್ರವಲ್ಲ, ವಿಜಯ್ ಅವರ ದೀರ್ಘ ಸಿನಿ ಪಯಣಕ್ಕೆ ಭಾವನಾತ್ಮಕ ವಿದಾಯ ಎನ್ನುವ ಕಾರಣಕ್ಕೂ ವಿಶೇಷ ಮಹತ್ವ ಪಡೆದುಕೊಂಡಿದೆ. ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗುತ್ತಿರುವ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
Bangalore [Bangalore],Bangalore,Karnataka














