Summer Salad: ಕೊಹ್ಲಿ ಸ್ಪೆಷಲ್ ಸೂಪರ್‌ಫುಡ್ ಸಮ್ಮರ್ ಸಲಾಡ್! ನೀವೂ ಮನೆಯಲ್ಲಿ ಟ್ರೈ ಮಾಡಿ, ಫಿಟ್ ಆಗಿ | ಲೈಫ್‌ಸ್ಟೈಲ್ | ACTPnews

ವಿರಾಟ್ ಕೊಹ್ಲಿ


Last Updated:

ವಿರಾಟ್ ಕೊಹ್ಲಿ ಮೈದಾನದಲ್ಲಿ ಚಿರತೆಯಂತಹ ವೇಗ ಮತ್ತು ಸಖತ್ ಫಿಟ್‌ನೆಸ್‌ಗೆ ಪ್ರಮುಖ ಕಾರಣ ಅವರು ಅನುಸರಿಸುವ ಕಟ್ಟುನಿಟ್ಟಿನ ಆಹಾರಕ್ರಮ. ಕೊಹ್ಲಿ ಫಿಟ್‌ನೆಸ್‌ಗೆ ಕಾರಣವಾಗಿರುವ ಅವರ ನೆಚ್ಚಿನ ‘ಸೂಪರ್‌ಫುಡ್ ಸಮ್ಮರ್ ಸಲಾಡ್’ ಮಾಡುವುದು ಹೇಗೆ ಗೊತ್ತಾ?

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಕ್ರಿಕೆಟ್ (Cricket) ಮೈದಾನದಲ್ಲಿ ಮಾತ್ರವಲ್ಲದೆ ಫಿಟ್ನೆಸ್ (Fitness) ವಿಷಯದಲ್ಲೂ ವಿರಾಟ್ ಕೊಹ್ಲಿ (Virat Kohli) ಲಕ್ಷಾಂತರ ಜನರಿಗೆ ರೋಲ್ ಮಾಡೆಲ್. ಫುಡ್ (Food) ವಿಷಯದಲ್ಲೂ ಕೊಹ್ಲಿ ಬಹಳ ಶಿಸ್ತುಬದ್ಧರು. ವಿವಿಧ ಸಲಾಡ್‌ಗಳು (Salads), ಸೂಪ್‌ಗಳು (Soups) ಮತ್ತು ಎನರ್ಜಿ ಡ್ರಿಂಕ್ಸ್ ಅವರ ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ. ಕೊಹ್ಲಿ ಆಗಾಗ್ಗೆ ತಮ್ಮ ದೇಹವನ್ನು ಫ್ರೆಶ್ ಮತ್ತು ಹೈಡ್ರೀಕರಿಸಿಟ್ಟುಕೊಳ್ಳಲು ವಿಶೇಷ ಸಲಾಡ್ ತೆಗೆದುಕೊಳ್ಳುತ್ತಾರೆ.

ಟಿವಿ9 ವರದಿ ಪ್ರಕಾರ, ದೆಹಲಿಯಲ್ಲಿರುವ ಅವರ ಸ್ವಂತ ರೆಸ್ಟೋರೆಂಟ್ ‘ಒನ್ 8 ಕಮ್ಯೂನ್’ ನ ಮೆನುವಿನಲ್ಲಿ ಈ ವಿಶೇಷ ಸಲಾಡ್​​ಗೆ ಭಾರೀ ಬೇಡಿಕೆಯಿದೆ. ಈ ಸೂಪರ್‌ಫುಡ್ ಸಮ್ಮರ್ ಸಲಾಡ್ ಅನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಮತ್ತು ಅದರಲ್ಲಿ ಬಳಸುವ ಕ್ವಿನೋವಾದ ಪ್ರಾಮುಖ್ಯತೆ ಏನು ಎಂದು ಈಗ ನೋಡೋಣ ಬನ್ನಿ.

ಕೊಹ್ಲಿ ಸ್ಪೆಷಲ್ ಸೂಪರ್‌ಫುಡ್ ಸಮ್ಮರ್ ಸಲಾಡ್ ಮಾಡಲು ಬೇಕಾದ ಪದಾರ್ಥಗಳು

  • ರಾಕೆಟ್ ಎಲೆಗಳು: 1 ಕಪ್
  • ಪಫ್ಡ್ ಕ್ವಿನೋವಾ: 1/4 ಕಪ್
  • ಕತ್ತರಿಸಿದ ಕ್ಯಾಪ್ಸಿಕಂ: 1/4 ಕಪ್
  • ಕತ್ತರಿಸಿದ ಕಲ್ಲಂಗಡಿ: 1 ಸಣ್ಣ ಬಟ್ಟಲು
  • ಕುಂಬಳಕಾಯಿ ಬೀಜಗಳು: 2 ಚಮಚ
  • ಗೋಡಂಬಿ: 2 ಚಮಚ

ಸಲಾಡ್ ಡ್ರೆಸ್ಸಿಂಗ್‌ಗೆ: ಆಲಿವ್ ಎಣ್ಣೆ (2 ಚಮಚ), ವಿನೆಗರ್ (1 ಚಮಚ), ಜೇನುತುಪ್ಪ (1 ಚಮಚ), ಸಾಸಿವೆ ಸಾಸ್ (1 ಚಮಚ), ಚಿಲ್ಲಿ ಸಾಸ್ (1/4 ಚಮಚ), ರುಚಿಗೆ ತಕ್ಕಷ್ಟು ಉಪ್ಪು.

ಸಲಾಡ್ ತಯಾರಿಸುವ ವಿಧಾನ

ಮೊದಲು ಒಂದು ದೊಡ್ಡ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಸ್ವಚ್ಛಗೊಳಿಸಿದ ರಾಕೆಟ್ ಎಲೆಗಳು ಮತ್ತು ಬೇಯಿಸಿದ ಕ್ವಿನೋವಾ ಸೇರಿಸಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿದ ಕ್ಯಾಪ್ಸಿಕಂ ಅನ್ನು ಸ್ವಲ್ಪ ಹುರಿದು, ಮಿಕ್ಸಿಂಗ್ ಬೌಲ್​​ಗೆ ಹಾಕಿ. ಇವುಗಳಿಗೆ ಕಲ್ಲಂಗಡಿ ಪೀಸ್ ಸೇರಿಸಿ. ಈಗ, ಒಂದು ಸಣ್ಣ ಬಟ್ಟಲಿನಲ್ಲಿ ಆಲಿವ್ ಎಣ್ಣೆ, ವಿನೆಗರ್, ಜೇನುತುಪ್ಪ, ಸಾಸಿವೆ ಸಾಸ್, ಚಿಲ್ಲಿ ಸಾಸ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ‘ಸಲಾಡ್ ಡ್ರೆಸ್ಸಿಂಗ್’ ತಯಾರಿಸಿ.

ಈ ಡ್ರೆಸ್ಸಿಂಗ್ ಮಿಶ್ರಣವನ್ನು ಮಿಕ್ಸಿಂಗ್ ಬೌಲ್​​ನಲ್ಲಿರುವ ಎಲ್ಲಾ ಪದಾರ್ಥಗಳ ಮೇಲೆ ಸುರಿಯಿರಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಅಂತಿಮವಾಗಿ, ಕುಂಬಳಕಾಯಿ ಬೀಜಗಳು ಮತ್ತು ಪುಡಿಮಾಡಿದ ಗೋಡಂಬಿಗಳನ್ನು ಮೇಲೆ ಹಾಕಿ. ಈಗ ತುಂಬಾ ರುಚಿಕರವಾದ ಕೊಹ್ಲಿ ಸ್ಪೆಷಲ್ ಸೂಪರ್‌ಫುಡ್ ಸಮ್ಮರ್ ಸಲಾಡ್ ಸಿದ್ಧವಾಗಿದೆ.

ಕ್ವಿನೋವಾ ಪ್ರಾಮುಖ್ಯತೆ ಏನು?

ಕ್ವಿನೋವಾವನ್ನು ಸೂಪರ್‌ಫುಡ್ ಎಂದು ಏಕೆ ಕರೆಯುತ್ತಾರೆ ಗೊತ್ತಾ? ಈ ಸಲಾಡ್‌ನಲ್ಲಿ ಬಳಸಲಾಗುವ ಕ್ವಿನೋವಾ ಒಂದು ಬೀಜ, ಆದರೆ ಇದನ್ನು ಧಾನ್ಯಗಳ ರೂಪದಲ್ಲಿ ತಿನ್ನಲಾಗುತ್ತದೆ. ಇದು ದೇಹಕ್ಕೆ ಅಗತ್ಯವಿರುವ ಎಲ್ಲಾ 9 ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಇದನ್ನು ಸಂಪೂರ್ಣ ಪ್ರೋಟೀನ್ ಎಂದು ಕರೆಯಲಾಗುತ್ತದೆ. ಸಸ್ಯಾಹಾರಿಗಳಿಗೆ ಪ್ರೋಟೀನ್ ಪಡೆಯಲು ಇದು ಅತ್ಯುತ್ತಮ ಪರ್ಯಾಯವಾಗಿದೆ.

ಸಲಾಡ್ ಆರೋಗ್ಯ ಪ್ರಯೋಜನಗಳು

ಈ ಸಲಾಡ್ ಫೈಬರ್, ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಉತ್ತಮ ಕೊಲೆಸ್ಟ್ರಾಲ್‌ ಹೊಂದಿದೆ. ಇದು ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್, ರಂಜಕ ಮತ್ತು ಸತುವುಗಳಂತಹ ಅಗತ್ಯ ಮಿನರಲ್​​​ಗಳಲ್ಲಿಯೂ ಸಮೃದ್ಧವಾಗಿದೆ. ಕ್ವಿನೋವಾದಲ್ಲಿರುವ ಬಿ ಜೀವಸತ್ವಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ. ಇದು ದಿನವಿಡೀ ನಿಮಗೆ ಆಕ್ಟೀವ್ ಆಗಿರಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಕಲ್ಲಂಗಡಿ ನಿಮ್ಮ ದೇಹದ ನೀರಿನ ಅಂಶವನ್ನು ಸಮತೋಲನಗೊಳಿಸಲು ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports