Last Updated:
ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಸಿಎಂ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದಿದ್ದಾರೆ. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ (Joseph Vijay) ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಿ ದೇವಸ್ಥಾನಕ್ಕೆ (Kollur Mookambika Devi Temple) ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರು, ಅಲ್ಲಿಂದ ಕಾರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಸಿಎಂ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದಿದ್ದಾರೆ. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಹಾಗೆಯೇ ಸಿಎಂ ವಿಜಯ್ ಅವರು ದೇವಿಗೆ ಅರ್ಪಿಸಿದ 1 ಕೆಜಿ 600 ಗ್ರಾಂ ಖಡ್ಗದ ಹಿಂದೆ ಸಂಖ್ಯಾಶಾಸ್ತ್ರದ ಮಹತ್ವವಿದೆ ಹೇಳಲಾಗುತ್ತಿದೆ. 1+600= ಕೂಡಿಸಿದರೆ 7 ಬರುತ್ತದೆ. ಹೀಗಾಗಿ ಏಳು ಅಂದ್ರೆ ಸಪ್ತಮ ಸ್ಥಾನ. ಹೀಗಾಗಿ ಏಳು ಅಂದ್ರೆ ದಾಂಪತ್ಯದ ಸುಖ ಜೀವನ ಜೊತೆಗೆ ಔದ್ಯೋಗಿಕ ಜೀವನ ಗಟ್ಟಿಗೊಳಿಸಿಕೊಳ್ಳಲು ಈ ಏಳರ ಸಂಖ್ಯೆ ಸಹಕಾರಿಯಾಗಿದೆ . ಹೀಗಾಗಿಯೇ 1.6 ಕೆಜಿ ತೂಕದ ಖಡ್ಗವನ್ನು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ ಎಂದು ದೇಗುಲದ ಅರ್ಚಕರು ಮಾಹಿತಿ ನೀಡಿದ್ದಾರೆ.
ದೇವಸ್ಥಾನ ಪ್ರವೇಶ ಮಾಡುವುದಕ್ಕೂ ಮುನ್ನ ಸಿಎಂ ವಿಜಯ್ ದೇವಸ್ಥಾನದ ನಿಯಮ ಹಾಗೂ ಸಂಪ್ರದಾಯವನ್ನು ಗೌರವಿಸುವ ಸಲುವಾಗಿ ವಿಜಯ್ ಅವರು ತಮ್ಮ ಮಾಡರ್ನ್ ಬಟ್ಟೆಯನ್ನು ಬಿಟ್ಟು, ಪಕ್ಕಾ ಸಾಂಪ್ರದಾಯಿಕ ಉಡುಪನ್ನು ಧರಿಸಿದರು
ಪ್ರಧಾನ ಅರ್ಚಕ ರಾಮಚಂದ್ರ ಅಡಿಗರಿಂದ ಮೂಕಾಂಬಿಕೆಗೆ ದೀಪಾರಾಧನೆ ನಡೆದಿದ್ದು, ವಿಜಯ್ ಅವರು ಮುಕಾಂಬಿಕೆಯ ದರ್ಶನ ಮಾಡಿದ್ದಾರೆ. ಸಂಕಲ್ಪ ಮಾಡಿ ವಿಜಯ್ ಪೂಜೆ ಸಲ್ಲಿಸಿದ್ದಾರೆ. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರಿಂದ ಸಂಕಲ್ಪ ಮಾಡಿದ್ದು ದೇವಳದ ಮುಂಭಾಗದಲ್ಲಿರುವ ಧ್ವಜಕ್ಕೆ ನಮಿಸಿ ದೇಗುಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರ್ಚಕರ ಸಮ್ಮುಖದಲ್ಲಿ ಸಂಕಲ್ಪ ಮಾಡಿ ವಿಜಯ್ ಕೈಮುಗಿದಿದ್ದಾರೆ. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಉಪಸ್ಥಿತಿ ಇದ್ದರು.
ಜೊತೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೈಗೆ ಅರ್ಚಕರು ರಕ್ಷಾದಾರ ಕಟ್ಟಿದ್ದಾರೆ. ಒಳಗೆ ಬಂದು ದೇವರ ದರ್ಶನವನ್ನು ಮಾಡಿ ದೇವಸ್ಥಾನ ನೋಡಿ ತೆರಳಲಿದ್ದಾರೆ.
ಇಂದು ಶುಕ್ರವಾರ ಬಹಳ ವಿಶೇಷ ದಿನವೇನಲ್ಲ. ಆದರೆ ದೇವಿಗೆ ಸಂಜೆ ಪ್ರದೋಷ ಕಾಲಕ್ಕೂ ಮೊದಲು ಉತ್ಸವ ನಡೆಯಲಿದೆ. ಇದು ಸಿಎಂ ವಿಜಯ್ ಆಗಮನಕ್ಕೋಸ್ಕರ ಮಾಡಿರುವ ಸಿದ್ಧತೆಗಳೇನಲ್ಲ. ಎಂದಿನಂತೆ ನಡೆಯುವ ಉತ್ಸವ ಎಂದು ಅರ್ಚಕರು ತಿಳಿಸಿದ್ದಾರೆ.
Bangalore [Bangalore],Bangalore,Karnataka













