Retirement: ಕ್ರಿಕೆಟ್ ಜಗತ್ತಿಗೆ ಆಘಾತ! ನಿವೃತ್ತಿ ಘೋಷಣೆ ಮಾಡಿದ ಭಾರತೀಯರ ನೆಚ್ಚಿನ ಆಟಗಾರ | ಕ್ರೀಡಾ ಸುದ್ದಿ | ACTPnews

ನಿವೃತ್ತಿ


Last Updated:

ಕ್ರಿಕೆಟ್ ಜಗತ್ತಿನಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಭಾರತೀಯರ ನೆಚ್ಚಿನ ಆಟಗಾರರ ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ನಿವೃತ್ತಿ
ನಿವೃತ್ತಿ

ನ್ಯೂಜಿಲೆಂಡ್ (New Zealand) ತಂಡ ಪ್ರಸ್ತುತ ಇಂಗ್ಲೆಂಡ್ (England) ಪ್ರವಾಸದಲ್ಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ (Test Series) ನಡೆಯುತ್ತಿದೆ. ನ್ಯೂಜಿಲೆಂಡ್ ಸರಣಿಯ ಮೊದಲ ಪಂದ್ಯದಲ್ಲಿ ಸೋತಿದೆ. ಇದರ ನಡುವೆ ಭಾರತೀಯರ (Indians) ನೆಚ್ಚಿನ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್‌(Cricket)ಗೆ ನಿವೃತ್ತಿ (Retirement) ಘೋಷಿಸಿದ್ದಾರೆ. ಹೌದು, ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ (Kane Williamson) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಅವರು ಈಗ ತಮ್ಮ 16 ವರ್ಷಗಳ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ. 

ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರ ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ 48 ಶತಕಗಳು ಸೇರಿದಂತೆ 19,346 ರನ್ ಗಳಿಸಿದ್ದಾರೆ. ವಿಲಿಯಮ್ಸನ್ ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಈಗ, ಟೆಸ್ಟ್ ಕ್ರಿಕೆಟ್ ಅನ್ನು ತ್ಯಜಿಸುವ ಮೂಲಕ, ಅವರು ಅಂತಿಮವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

16 ವರ್ಷಗಳ ಜರ್ನಿ ಅಂತ್ಯ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಬಗ್ಗೆ ಕೇನ್ ವಿಲಿಯಮ್ಸನ್ ಪೋಸ್ಟ್ ಹಂಚಿಕೊಂಡಿದ್ದಾರೆ.  “ನಾನು ಸ್ವಲ್ಪ ಸಮಯದಿಂದ ಇದರ ಬಗ್ಗೆ ಯೋಚಿಸುತ್ತಿದ್ದೆ. ಕಳೆದ ಕೆಲವು ದಿನಗಳಿಂದ, ಸಮಯ ಸರಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ನಾನು ಯಾವಾಗಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಬಯಸುತ್ತೇನೆ.

ಇದನ್ನೂ ಓದಿ: Vaibhav Sooryavanshi: ಭಾರತದ ಐರ್ಲೆಂಡ್ ಟೂರ್ ಕ್ಯಾನ್ಸಲ್? ವೈಭವ್ ಸೂರ್ಯವಂಶಿಯ ಆ ಒಂದು ಕನಸು ನನಸಾಗಲ್ವಾ?

ನ್ಯೂಜಿಲೆಂಡ್‌ಗಾಗಿ ಆಡಿದ ಪ್ರತಿಯೊಂದು ಪಂದ್ಯದಲ್ಲೂ ನನ್ನ 100% ನೀಡಿದ್ದೇನೆ ಎಂದು ಸಂತೋಷಪಡುತ್ತೇನೆ. ನನ್ನ ಸ್ವಂತ ನಿಯಮಗಳ ಪ್ರಕಾರ ನಿವೃತ್ತಿ ಹೊಂದಲು ನಾನು ಅದೃಷ್ಟಶಾಲಿ ಅಂದುಕೊಂಡಿದ್ದೇನೆ. ನ್ಯೂಜಿಲೆಂಡ್ ತಂಡವು ಪ್ರತಿಭಾನ್ವಿತ ತಂಡದೊಂದಿಗೆ ಮುಂದೆ ಉಜ್ವಲ ಭವಿಷ್ಯವನ್ನು ಹೊಂದಿದೆ. ಇಷ್ಟು ದಿನ ಈ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಇದು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎಂದು ವಿಲಿಯಮ್ಸನ್ ಬರೆದುಕೊಂಡಿದ್ದಾರೆ.

ಈಡೇರದ ಕೇನ್ಸ್ ಕನಸು 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇನ್ ವಿಲಿಯಮ್ಸನ್ ಅವರ ಪ್ರದರ್ಶನದ ಬಗ್ಗೆ ನೋಡುವುದಾರೆ, ಅವರ ನಾಯಕತ್ವದಲ್ಲಿ, ಕಿವೀಸ್ ಪಡೆ 2019 ರ ಏಕದಿನ ವಿಶ್ವಕಪ್‌ನ ಫೈನಲ್ ತಲುಪಿತು. ಆದರೆ, ಇಂಗ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತ್ತು. ಟೂನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಕೇನ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದರು. ವಿಲಿಯಮ್ಸನ್ 2019 ರಲ್ಲಿ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಸಹ ಗೆದ್ದರು. ಆದರೆ, ಅವರಿಗೆ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.

ವಿಲಿಯಮ್ಸನ್ ಅವರ ಹೆಸರಿನಲ್ಲಿ 9,515 ಟೆಸ್ಟ್ ರನ್‌ಗಳು, 7,256 ಏಕದಿನ ರನ್‌ಗಳು ಮತ್ತು 2,575 ಟಿ20 ಅಂತಾರಾಷ್ಟ್ರೀಯ ರನ್‌ಗಳು ಇವೆ. ಇದಲ್ಲದೆ, ಅವರ ನಾಯಕತ್ವದಲ್ಲಿ, ನ್ಯೂಜಿಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಸಹ ಗೆದ್ದಿದೆ.

ನಾಯಕನಾಗಿಯೂ ವಿಲಿಯಮ್ಸನ್ ಮೇಲುಗೈ

ನಾಯಕನಾಗಿಯೂ ವಿಲಿಯಮ್ಸನ್ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ.  ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಮೂರು ಸ್ವರೂಪಗಳಲ್ಲಿ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಕಿವೀಸ್ ಪಡೆ ಆಡಿದ 40 ಟೆಸ್ಟ್ ಪಂದ್ಯಗಳಲ್ಲಿ 22 ಗೆದ್ದಿದೆ, ಕೇವಲ 10 ಸೋಲು ಕಂಡಿದೆ. 8 ಪಂದ್ಯಗಳು ಡ್ರಾಗೊಂಡಿವೆ. ವಿಲಿಯಮ್ಸನ್ ಅವರ ನಾಯಕನಾಗಿ 91 ಏಕದಿನ ಪಂದ್ಯಗಳಲ್ಲಿ 46 ಗೆದ್ದು 40 ಸೋಲು ಕಂಡಿದ್ದಾರೆ. ಆದರೆ ಒಂದು ಟೈ ಆದರೆ, 4 ಪಂದ್ಯಗಳು ರದ್ದಾಗಿವೆ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು 75 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಅವುಗಳಲ್ಲಿ 39 ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 34 ಸೋಲು ಕಂಡಿದ್ದಾರೆ. ಒಂದು ಟೈ ಆಗಿದ್ದು, ಒಂದು ಪಂದ್ಯ ಫಲಿತಾಂಶವನ್ನು ನೀಡಿಲ್ಲ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports