Darshan-Dhanveer: ದರ್ಶನ್ ಭೇಟಿಯಾದ ಧನ್ವೀರ್ ಗೌಡ! ಮುನಿಸಿ ಮರೆತು ಮತ್ತೆ ಒಂದಾದ್ರಾ ಅಣ್ತಮ್ಮಾಸ್? | | ACTPnews

ದರ್ಶನ್ ಭೇಟಿಗೆ ಬಂದ ಧನ್ವೀರ್; ಎಲ್ಲ ಸುದ್ದಿಗೂ ತೆರೆ ಎಳೆದ ವಾಮನ!


Last Updated:

ದರ್ಶನ್ ಮತ್ತು ಧ್ವನೀರ್ ದೋಸ್ತಿ ನಡುವೆ ಬ್ರೇಕ್ ಬಿದ್ದಿದೆ. ಇವರು ದೂರ ಆಗಿದ್ದಾರೆ ಅನ್ನುವ ಸುದ್ದಿ ಕೇಳಿ ಬರ್ತಾನೇ ಇದ್ದವು. ಆದರೆ, ಧನ್ವೀರ್ ಅದನ್ನೆಲ್ಲ ಸುಳ್ಳು ಮಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

 ದರ್ಶನ್ ಭೇಟಿಗೆ ಬಂದ ಧನ್ವೀರ್; ಎಲ್ಲ ಸುದ್ದಿಗೂ ತೆರೆ ಎಳೆದ ವಾಮನ!
ದರ್ಶನ್ ಭೇಟಿಗೆ ಬಂದ ಧನ್ವೀರ್; ಎಲ್ಲ ಸುದ್ದಿಗೂ ತೆರೆ ಎಳೆದ ವಾಮನ!

ದರ್ಶನ್ (Darshan) ಮತ್ತು ಧನ್ವೀರ್ (Dhanveer) ದೋಸ್ತಿ ಬೇರೆ ಲೆವೆಲ್‌ಗೆ ಇದೆ. ಎಂದೂ ಅಣ್ಣನ ಬಿಟ್ಟುಕೊಡೋದೇ ಇಲ್ಲ. ಏನೇ ಆಗಲಿ, ಯಾರೆ ಬರಲಿ ನಾನು ದೂರ ಹೋಗಲ್ಲ. ಜೊತೆಗೆ ಇರ್ತೀನಿ ಅಂತ ಧನ್ವೀರ್ ಹೇಳಿಕೊಂಡಿದ್ದರು. ಹೇಳಿದಂತೇನೆ ಮಾಡಿರೋದು ಇದೆ. ಆದರೆ, ಇತ್ತೀಚಿಗೆ ಒಂದು ಸುದ್ದಿ ಇತ್ತು. ದರ್ಶನ್ (Darshan) ಮತ್ತು ಧನ್ವೀರ್ (Dhanveer) ನಡುವೆ ಏನೋ ಆಗಿದೆ. ದರ್ಶನ್‌ರಿಂದ ಧನ್ವೀರ್ ದೂರ ಹೋಗಿದ್ದಾರೆ. ದೂರವೇ ಉಳಿದಿದ್ದಾರೆ. ಈ ಒಂದು ಮಾತು ಕೇಳಿ ಬರ್ತಾನೆ ಇತ್ತು. ಇದಕ್ಕೆ ಪೂರಕ ಅನ್ನುವ ಹಾಗೆ ಧನ್ವೀರ್ ಪರಪ್ಪನ ಅಗ್ರಹಾರಕ್ಕೆ ಬಂದಿರಲೇ ಇಲ್ಲ ನೋಡಿ. ಆದರೆ, ಸ್ವತಃ ಧನ್ವೀರ್ ಇದೀಗ ಆ ಎಲ್ಲ ಸುದ್ದಿಗಳಿಗೆ ಬ್ರೇಕ್ ಆಗಿದ್ದಾರೆ. ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಈ ಕ್ಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ದರ್ಶನ್ ಭೇಟಿಗೆ ಬಂದ ಧನ್ವೀರ್

ದರ್ಶನ್ ಮತ್ತು ಧನ್ವೀರ್ ದೋಸ್ತಿ ಬೇರೇನೆ ಇದೆ. ಇದು ಎಂದೂ ಮುಗಿಯೋದಿಲ್ಲ. ಆ ರೀತಿನೇ ದರ್ಶನ್ ಮತ್ತು ಧನ್ವೀರ್ ಇದ್ದರು. ವಾಮನ ಚಿತ್ರಕ್ಕೂ ದರ್ಶನ್ ಸಪೋರ್ಟ್ ಮಾಡಿದ್ದರು.
actor dhanveer viral video at parappana agrahara meeting darshan

ಸುಳ್ಳು ಸುದ್ದಿಗೆ ಬ್ರೇಕ್

ದರ್ಶನ್ ಯಾವುದೇ ಕಾರ್ಯಕ್ರಮಕ್ಕೂ ಹೋದರೂ ಅಷ್ಟೆನೆ. ಜೊತೆಗೆ ಧನ್ವೀರ್ ಇರ್ತಾ ಇದ್ದರು. ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾಗಲೂ ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಧನ್ವೀರ್ ಇದ್ದರು. ಯಾವುದೇ ಕೆಲಸದಲ್ಲೂ ಸಾಥ್ ಕೊಟ್ಟಿದ್ದರು.

ದರ್ಶನ್-ಧನ್ವೀರ್ ದೂರ ದೂರ

ದರ್ಶನ್ ಮತ್ತು ಧನ್ವೀರ್ ದೂರ ಆದರು. ಇವರ ನಡುವೆ ಏನೋ ಆಗಿದೆ. ಈ ರೀತಿ ಸುದ್ದಿ ಹರಿದಾಡ್ತಾನೇ ಇತ್ತು. ಇದಕ್ಕೆ ಪೂರಕ ಅನ್ನುವ ಹಾಗೆ ಧನ್ವೀರ್ ಕೂಡ ಪರಪ್ಪನ ಅಗ್ರಹಾರಕ್ಕೆ ಬಂದಿರೋ ಸುದ್ದಿಗಳು ಇರಲಿಲ್ಲ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿರಲಿಲ್ಲ.

ಆದರೆ, ಧನ್ವೀರ್ ಇದೀಗ ಈ ಎಲ್ಲ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಸ್ವತಃ ಧನ್ವೀರ್ ಜುಲೈ-28 ರಂದು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಬಂದು ದರ್ಶನ್ ಅವರನ್ನ ಮೀಟ್ ಆಗಿದ್ದಾರೆ ಅನ್ನುವ ಸುದ್ದಿನೂ ಇದೆ.

ಧನ್ವೀರ್ ವಿಡಿಯೋ ವೈರಲ್

ಧನ್ವೀರ್ ಪರಪ್ಪನ ಅಗ್ರಹಾರಕ್ಕೆ ಬಂದಿರೋ ವಿಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದ ಇನ್‌ಸ್ಟಾಗ್ರಾಮ್ ಪೇಜ್ ಗಳಲ್ಲಿ ಧನ್ವೀರ್ ಪರಪ್ಪನ ಅಗ್ರಹಾರಕ್ಕೆ ಬಂದಿರೋ ವಿಡಿಯೋ ಶೇರ್ ಆಗಿವೆ.

actor dhanveer viral video at parappana agrahara meeting darshan

ದರ್ಶನ್ ಭೇಟಿಗೆ ಬಂದ ಧನ್ವೀರ್; ಎಲ್ಲ ಸುದ್ದಿಗೂ ತೆರೆ ಎಳೆದ ವಾಮನ!

ಧನ್ವೀರ್ ಹಾಗೂ ಅವರ ಸ್ನೇಹಿತರು ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಇಳಿದು ಪರಪ್ಪನ ಅಗ್ರಹಾರದ ಕಡೆಗೆ ಹೋಗುವ ದೃಶ್ಯದ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿವೆ.

ಸುಳ್ಳು ಸುದ್ದಿಗೆ ಬ್ರೇಕ್

ದರ್ಶನ್ ಮತ್ತು ಧನ್ವೀರ್ ದೂರ ಅನ್ನುವ ಸುದ್ದಿಗಳು ಹೆಚ್ಚಾಗಿಯೇ ಹರಿದಾಡಿದ್ದವು. ಆದರೆ, ಇದೆಲ್ಲ ಸುಳ್ಳು ಸುದ್ದಿ, ಇದರಲ್ಲಿ ನಿಜ ಇಲ್ವೆ ಇಲ್ಲ ಅನ್ನುವ ಅರ್ಥದಲ್ಲಿಯೇ ಧನ್ವೀರ್ ಈ ವಿಡಿಯೋದಲ್ಲಿ ಕಾಣಿಸಿಕೊಂಡಂತೆ ಇದೆ.

ಈ ಒಂದು ವಿಡಿಯೋ ಹಂಚಿಕೊಂಡವರು ಕೂಡ ಇದೇ ಅರ್ಥದಲ್ಲಿಯೇ ವಿಡಿಯೋಗಳಿಗೆ ಟೆಕ್ಸ್ಟ್ ಹಾಕಿದ್ದಾರೆ. ಇನ್ನುಳಿದಂತೆ ಧನ್ವೀರ್ ಮತ್ತು ದರ್ಶನ್ ನಡುವೆ ಎಲ್ಲವು ಚೆನ್ನಾಗಿದೆ ಅನ್ನುವ ಅರ್ಥದಲ್ಲಿಯೇ ವಿಡಿಯೋಗಳು ಈಗ ಹರಿದಾಡುತ್ತಿವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed