Varsha Bollamma: ಮಹಾನ್ ಚಿತ್ರದಲ್ಲಿ ವರ್ಷ ಬೋಳಮ್ಮ, ದುರ್ಗಾ ಪಾತ್ರದಲ್ಲಿ ಯುವ ರೈತರಿಗೆ ಸ್ಪೂರ್ತಿ | | ACTPnews

Varsha Bollamma Mahaan movie First Look Officially Released


ರೈತ ಯುವತಿ ದುರ್ಗಾ

ವರ್ಷ ಬೋಳಮ್ಮ ಹೆಚ್ಚಾಗಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೇ ನಟಿಸಿದ್ದಾರೆ. ಆದರೆ, ಫಸ್ಟ್ ಟೈಮ್ ವರ್ಷ ಬೋಳಮ್ಮ ಕನ್ನಡ ಸಿನಿಮಾ ಮಾಡಿದ್ದಾರೆ.

ದುರ್ಗಾ ಪಾತ್ರದಲ್ಲಿ ಯುವ ರೈತರಿಗೆ ಸ್ಪೂರ್ತಿ
ಮಹಾನ್ ಹೆಸರಿನ ಈ ಚಿತ್ರದಲ್ಲಿ ದುರ್ಗಾ ಅನ್ನುವ ರೋಲ್ ನಿರ್ವಹಿಸಿದ್ದಾರೆ. ವಿದ್ಯಾವಂತ ಈ ದುರ್ಗಾ ರೈತ ಯುವತಿನೆ ಆಗಿದ್ದಾಳೆ. ಆಧುನಿಕ ತಂತ್ರಜ್ಞಾನವನ್ನು ಕೃಷ್ಣಯಲ್ಲಿ ಬಳಕೆ ಮಾಡೋದು ತಿಳಿದಿದೆ.
ಹೋರಾಟದ ಯುವತಿ

ದುರ್ಗಾ ಪಾತ್ರ ಇಲ್ಲಿ ಕೇವಲ ಕೃಷಿ ಮಾಡೋದಿಲ್ಲ. ಕೃಷ್ಣಿ ಕೆಲಸದಲ್ಲಿ ತೊಡಗಿಕೊಳ್ಳುವ ಮಹಿಳೆಯರ ಹಕ್ಕಿಗೂ ಹೋರಾಡುವ ಪಾತ್ರ ಇದಾಗಿದೆ.

ಇದು ನನಗೆ ಮೊದಲ ಚಿತ್ರ

ವರ್ಷ ಬೋಳಮ್ಮ ಕನ್ನಡದವರೇ ಆಗಿದ್ದಾರೆ. ಕೊಡಗಿನ ಈ ಕುವರಿ ತಮಿಳ ಮತ್ತು ತೆಲುಗು ಚಿತ್ರಗಳಲ್ಲಿಯೇ ಮಿಂಚಿದ್ದಾರೆ. ತಮಿಳುನಾಡಿನ ಸಿ.ಎಂ.ವಿಜಯ್ ಅವರ ಬಿಗಿಲ್ ಚಿತ್ರದಲ್ಲೂ ನಟಿಸಿದ್ದಾರೆ.

Varsha Bollamma Mahaan movie First Look Officially Released

ಮಹಾನ್ ಚಿತ್ರದಲ್ಲಿ ವರ್ಷ ಬೋಳಮ್ಮ

ಫುಟ್‌ಬಾಲ್ ಆಟಗಾರ್ತಿ ಗಾಯತ್ರಿ ಅನ್ನುವ ರೋಲ್ ಈ ಚಿತ್ರದಲ್ಲಿ ಮಾಡಿದ್ದಾರೆ. ತಮಿಳು ಅಲ್ಲದೆ ತೆಲುಗು ಚಿತ್ರಗಳಲ್ಲು ವರ್ಷ ಅಭಿನಯಿಸಿದ್ದಾರೆ.

ಆರಂಭದಲ್ಲಿಯೇ ಪರ ಭಾಷೆಯ ಅವಕಾಶಗಳು ಬಂದಿವೆ. ಅದಕ್ಕೇನೆ ಅಲ್ಲಿಯ ಚಿತ್ರಗಳನ್ನ ಮಾಡಿದ್ದೇನೆ. ಇದೀಗ ಮಹಾನ್ ಬಂದಿದೆ. ಇದರಲ್ಲಿ ಒಳ್ಳೆ ಪಾತ್ರ ಮಾಡಿದ್ದೇನೆ ಅಂತಲೇ ವರ್ಷ ಹೇಳಿಕೊಂಡಿದ್ದಾರೆ.

ಶಿವಣ್ಣನ ಜೊತೆ ನಟಿಸಿದ ಖುಷಿ

ಈ ಮಹಾನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಇದ್ದಾರೆ. ವಿಜಯ್ ರಾಘವೇಂದ್ರ ನಟಿಸಿದ್ದಾರೆ. ಇವರಂತಹ ಕಲಾವಿದರ ಜೊತೆಗೆ ನಟಿಸಿರೋ ಖುಷಿ ತುಂಬಾನೆ ಇದೆ.

ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾನೆ ವಿಶೇಷವಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರ ಕೊಟ್ಟ ಡೈರೆಕ್ಟರ್ ಪಿ.ಸಿ.ಶೇಖರ್ ಅವರಿಗೆ ಥ್ಯಾಂಕ್ಸ್ ಅಂತಲೂ ವರ್ಷ ಬೋಳಮ್ಮ ಹೇಳಿಕೊಂಡಿದ್ದಾರೆ.

ಮಹಾನ್ ಚಿತ್ರದ ಮಹಾನ್

ಮಹಾನ್ ಚಿತ್ರದಲ್ಲಿ ಮಹಾನ್ ಯಾರು ಅನ್ನುವ ಕುತೂಹಲ ಇತ್ತು. ಅದು ಈಗ ರಿವೀಲ್ ಆಗಿದೆ. ಶಿವರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ಲಾಯರ್ ಆಗಿದ್ದಾರೆ.

Varsha Bollamma Mahaan movie First Look Officially Released

ಮಹಾನ್ ಚಿತ್ರದಲ್ಲಿ ವರ್ಷ ಬೋಳಮ್ಮ; ದುರ್ಗಾ ಪಾತ್ರದಲ್ಲಿ ಯುವ ರೈತರಿಗೆ ಸ್ಪೂರ್ತಿ!

ಆದರೆ, ಇವರೇ ಈ ಚಿತ್ರದಲ್ಲಿ ಮಹಾನ್ ಅನ್ನೋದನ್ನ ಡೈರೆಕ್ಟರ್ ಪಿ.ಸಿ.ಶೇಖರ್ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಮನೆಯಲ್ಲಿ ತಪ್ಪಾದರೆ ಅಮ್ಮ-ಅಪ್ಪ ತಿದ್ದಿ ಬುದ್ಧಿ ಹೇಳುತ್ತಾರೆ.

ಸಮಾಜದಲ್ಲಿ ತಪ್ಪುಗಳಾದ್ರೆ ಯಾರು ತಿದ್ದುತ್ತಾರೆ? ಆ ಕೆಲಸವನ್ನ ಇಲ್ಲಿ ಮಹಾನ್ ಮಾಡುತ್ತಾರೆ ಅನ್ನೋದನ್ನೆ ಪಿ.ಸಿ.ಶೇಖರ್ ಹೇಳಿಕೊಂಡಿದ್ದಾರೆ.

ಚಿತ್ರದ ಇತರ ವಿಚಾರಗಳೇನು

ಈ ಚಿತ್ರದಲ್ಲಿ ಕನ್ನಡ ಕಲಾವಿದರ ದಂಡೇ ಇದೆ. ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ರಾಧಿಕಾ ಚೇತನ್, ಕಿರಣ್ ಶ್ರೀನಿವಾಸ್, ದೇವರಾಜ್, ರಂಗಾಯಣ ರಘು, ಮಿತ್ರ, ಶರತ್ ಲೋಹಿತಾಶ್ವ, ಅವಿನಾಶ್, ನಮ್ರತಾ ಗೌಡ, ರಮೇಶ್ ಇಂದಿರ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರವನ್ನ ಪಿ.ಸಿ.ಶೇಖರ್ ಡೈರೆಕ್ಷನ್ ಮಾಡಿದ್ದಾರೆ. ಪ್ರಕಾಶ್ ಎಸ್.ಬೂದೂರು ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಮಹಾನ್ ರೈತರ ಬಗೆಗಿನ ಚಿತ್ರವೇ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports