Last Updated:
Varalaxmi Sarathkumar: “ನಮ್ಮ ಮನೆಯಲ್ಲೇ ಇರುವ ನಾಯಿಗಳನ್ನು ನನ್ನ ಕುಟುಂಬದ ಭಾಗವೆಂದು ಪರಿಗಣಿಸುತ್ತೇನೆ. ನಮಗೆ ಎರಡು ನಾಯಿಮರಿಗಳಿವೆ, ಮತ್ತು ನಾನು ಅವುಗಳನ್ನು ನನ್ನ ಮಕ್ಕಳಂತೆ ಬೆಳೆಸುತ್ತೇನೆ” ಎಂದು ಸಂದರ್ಶನವೊಂದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಹೇಳಿದ್ದಾರೆ.
ತಮಿಳು ಚಿತ್ರರಂಗದ ನಟಿ ವರಲಕ್ಷ್ಮಿ ಶರತ್ ಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಉದ್ಯಮಿ ನಿಕೋಲೈ ಸಚ್‌ದೇವ್ ಎಂಬುವರನ್ನು ಮದುವೆಯಾಗಿರುವ ವರಲಕ್ಷ್ಮಿ, ನಮಗೆ ಮಕ್ಕಳು ಬೇಡವೇ ಬೇಡ ಅಂತ ಸ್ಪಷ್ಟಪಡಿಸಿದ್ದಾರೆ. “ನನಗೆ ಮಕ್ಕಳು ಬೇಡ ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನನಗೆ ಮಕ್ಕಳಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಅಲ್ಲ. ನನಗೆ ಮಕ್ಕಳು ಬೇಡ ಎಂಬ ಕಾರಣಕ್ಕಾಗಿ. ಇದು ನನಗೆ ಸ್ಪಷ್ಟ ಮತ್ತು ದೃಢವಾದ ನಿರ್ಧಾರವಾಗಿದೆ” ಅಂತ ಖಡಕ್ ಆಗಿ ಹೇಳಿದ್ದಾರೆ ವರಲಕ್ಷ್ಮಿ ಶರತ್ ಕುಮಾರ್.
ಬಿಹೈಂಡ್‌ವುಡ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವರಲಕ್ಷ್ಮಿ ಶರತ್‌ಕುಮಾರ್, ಪ್ರತಿ ವಿವಾಹಿತ ದಂಪತಿಗಳು ಮಕ್ಕಳನ್ನು ಹೊಂದಿರಲೇಬೇಕು ಎಂಬ ಭಾರತೀಯರ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. “ಮಗುವನ್ನು ಹೊಂದುವ ಮೊದಲು, ಆ ಮಗುವನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಸಿದ್ಧರಿದ್ದೀರಾ ಎಂದು ನೀವು ನಿಮ್ಮನ್ನು ಕೇಳಿಕೊಳ್ಳಬೇಕು. ನೀವು ಆ ಜವಾಬ್ದಾರಿಗೆ ಸಿದ್ಧರಿಲ್ಲದಿದ್ದರೆ, ಮಕ್ಕಳನ್ನು ಪಡೆಯದಿರಲು ನಿರ್ಧರಿಸುವುದು ಉತ್ತಮ. ಅದು ಜವಾಬ್ದಾರಿಯುತ ಪೋಷಕರ ನಿರ್ಧಾರವೂ ಆಗಿದೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದ್ದಾರೆ.

ನನಗೆ ಮಕ್ಕಳು ಬೇಡ ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನನಗೆ ಮಕ್ಕಳಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಅಲ್ಲ. ನನಗೆ ಮಕ್ಕಳು ಬೇಡ ಎಂಬ ಕಾರಣಕ್ಕಾಗಿ. ಇದು ನನಗೆ ಸ್ಪಷ್ಟ ಮತ್ತು ದೃಢವಾದ ನಿರ್ಧಾರವಾಗಿದೆ ಎಂದು ವರಲಕ್ಷ್ಮಿ ಶರತ್ ಕುಮಾರ್ ಹೇಳಿದ್ದಾರೆ.
2024 ರಲ್ಲಿ ಉದ್ಯಮಿ ನಿಕೋಲೈ ಸಚ್‌ದೇವ್ ಎಂಬುವರನ್ನು ವರಲಕ್ಷ್ಮಿ ವಿವಾಹವಾದರು. ನನಗೆ ಮಕ್ಕಳು ಬೇಡ ಅಂತ ನಿರ್ಧರಿಸಿದ್ದೇನೆ. ನನ್ನ ಪತಿಯೂ ಸಹ ಅದೇ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಎಂದು ಬಹಿರಂಗಪಡಿಸಿದರು. ಪೋಷಕರ ಜವಾಬ್ದಾರಿ ಒಂದು ದೊಡ್ಡ ಜವಾಬ್ದಾರಿ ಮತ್ತು ಸಮಾಜವು ಅದನ್ನು ನಿರೀಕ್ಷಿಸುತ್ತದೆ ಅಂತ ನಟಿ ಸಂದರ್ಶನದಲ್ಲಿ ಹೇಳಿದ್ದಾರೆ.

ಪತಿ ನಿಕೋಲೈ ಸಚ್‌ದೇವ್ ಹಾಗೂ ಅವರ ಹಿರಿಯ ಹೆಂಡತಿಯ ಮಗಳ ಬಗ್ಗೆ ಮಾತನಾಡುತ್ತಾ, ನಿಕೋಲೈ ಅವರ ಮೊದಲ ಮದುವೆಯ ಮಗಳನ್ನು ತನ್ನ ಸ್ವಂತ ಮಗುವಿಗೆ ನೀಡುವ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ ಎಂದು ವರಲಕ್ಷ್ಮಿ ಹೇಳಿದ್ದಾರೆ. ನಮಗೆ ಈಗಾಗಲೇ ನಿಕೋಲೈ ಅವರ ಹಿಂದಿನ ಮದುವೆಯಿಂದ ಒಬ್ಬ ಮಗಳಿದ್ದಾಳೆ. ನಾನು ಅವಳನ್ನು ಯಾವಾಗಲೂ ನನ್ನ ಸ್ವಂತ ಮಗಳ ಹಾಗೆಯೇ ನೋಡುತ್ತೇನೆ ಎಂದಿದ್ದಾರೆ. ಅಲ್ಲದೇ ನಮ್ಮ ಮನೆಯಲ್ಲೇ ಇರುವ ನಾಯಿಗಳನ್ನು ನನ್ನ ಕುಟುಂಬದ ಭಾಗವೆಂದು ಪರಿಗಣಿಸುತ್ತೇನೆ. ನಮಗೆ ಎರಡು ನಾಯಿಮರಿಗಳಿವೆ, ಮತ್ತು ನಾನು ಅವುಗಳನ್ನು ನನ್ನ ಮಕ್ಕಳಂತೆ ಬೆಳೆಸುತ್ತೇನೆ ಎಂದು ಅವರು ಹೇಳಿದ್ದಾರೆ.

ವರಲಕ್ಷ್ಮಿ ಶರತ್‌ಕುಮಾರ್ ಮತ್ತು ನಿಕೋಲೈ ಸಚ್‌ದೇವ್ ಮಾರ್ಚ್ 2024 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದಕ್ಕೂ ಮೊದಲು ಕೆಲ ವರ್ಷಗಳ ಕಾಲ ಇಬ್ಬರೂ ಸ್ನೇಹಿತರಾಗಿದ್ದರು. ನಂತರ ಜುಲೈ 2024 ರಲ್ಲಿ ಥೈಲ್ಯಾಂಡ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು, ನಂತರ ಚೆನ್ನೈನಲ್ಲಿ ವಿವಾಹ ಆರತಕ್ಷತೆ ನಡೆಯಿತು.
ವರಲಕ್ಷ್ಮಿ ಅವರು ಶರತ್ ಕುಮಾರ್ ಅವರ ಮೊದಲ ಹೆಂಡತಿ ಛಾಯಾರ ಪುತ್ರಿ. ಬೆಂಗಳೂರಿನಲ್ಲಿ ಜನಿಸಿದ ವರಲಕ್ಷ್ಮಿ, ಓದಿದ್ದೆಲ್ಲಾ ಚೆನ್ನೈನಲ್ಲಿ. ಬಳಿಕ 2012ರಲ್ಲಿ ಪೋಡಾ ಪೋಡಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳು, ತೆಲುಗು, ಮಲಯಾಳಂ, ಕನ್ನಡ, ಇಂಗ್ಲಿಷ್ ಹಾಗೂ ಅರೇಬಿಕ್ ಭಾಷೆಯ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಕನ್ನಡದಲ್ಲಿ ಸುದೀಪ್ ಜೊತೆ ಮಾಣಿಕ್ಯ ಸಿನಿಮಾದಲ್ಲಿ ಅಭಿನಯಿಸಿದ್ದರು.














