Last Updated:
Vande Mataram: ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ (Imran Masood), ನಾನು ವಂದೇ ಮಾತರಂ ಗೀತೆಯನ್ನು ಗೌರವಿಸುತ್ತೇನೆ, ಆದರೆ ಎಂದಿಗೂ ಹಾಡುವುದಿಲ್ಲ ಎಂದಿದ್ದಾರೆ. ತಮ್ಮ ಧರ್ಮವನ್ನು ಆಚರಿಸಲು ಸಾಂವಿಧಾನಿಕ ಹಕ್ಕಿದೆ ಎಂದು ಪ್ರತಿಪಾದಿಸಿರುವ ಅವರು, ನಾನು ಅಲ್ಲಾಹನನ್ನು (Allah) ಹೊರತುಪಡಿಸಿ ಯಾರನ್ನೂ ಪೂಜಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶ: ವಂದೇ ಮಾತರಂ (Vande Mataram) ಕುರಿತು ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವೆ ರಾಜಕೀಯ ಘರ್ಷಣೆ ಹೆಚ್ಚುತ್ತಿರುವ ಮಧ್ಯೆ, ಕಾಂಗ್ರೆಸ್ ಸಂಸದರೊಬ್ಬರು (Congress MP) ನಾನು ರಾಷ್ಟ್ರೀಯ ಗೀತೆ ಹಾಡೋದಿಲ್ಲ ಎಂದಿದ್ದಾರೆ. ಉತ್ತರ ಪ್ರದೇಶದ (Uttar Pradesh) ಸಹರಾನ್ಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ (Imran Masood), ನಾನು ವಂದೇ ಮಾತರಂ ಗೀತೆಯನ್ನು ಗೌರವಿಸುತ್ತೇನೆ, ಆದರೆ ಎಂದಿಗೂ ಹಾಡುವುದಿಲ್ಲ ಎಂದಿದ್ದಾರೆ. ತಮ್ಮ ಧರ್ಮವನ್ನು ಆಚರಿಸಲು ಸಾಂವಿಧಾನಿಕ ಹಕ್ಕಿದೆ ಎಂದು ಪ್ರತಿಪಾದಿಸಿರುವ ಅವರು, ನಾನು ಅಲ್ಲಾಹನನ್ನು (Allah) ಹೊರತುಪಡಿಸಿ ಯಾರನ್ನೂ ಪೂಜಿಸಲು ಸಾಧ್ಯವಿಲ್ಲ ಎಂದಿದ್ದಾರೆ.














