Last Updated:
ಫುಕೆಟ್ನಿಂದ ದೆಹಲಿಗೆ ಹಾರಾಡುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಡೆದ ಘಟನೆಯ ನಂತರ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ತಮ್ಮ ಎಲ್ಲಾ ಪೈಲಟ್ಗಳಿಗೂ ಮಾದಕ ವಸ್ತುಗಳ ಕಡ್ಡಾಯ ಪರೀಕ್ಷೆಯನ್ನು ಪ್ರಾರಂಭಿಸಿದ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ನವದೆಹಲಿ: ಕಳೆದ ವಾರ ಏರ್ ಇಂಡಿಯಾ ಗ್ರೂಪ್ (Air India Group) ಎಲ್ಲಾ ಪೈಲಟ್ಗಳಿಗೂ 100% ಡ್ರಗ್ ಪರೀಕ್ಷೆ ಕಡ್ಡಾಯ ಮಾಡುವುದಾಗಿ ಘೋಷಿಸಿದ ನಂತರ ಸುಮಾರು 350 ಪೈಲಟ್ಗಳ ಮೇಲೆ ನಡೆಸಿದ ಮಾದಕ ವಸ್ತು ಪರೀಕ್ಷೆಯಲ್ಲಿ (Drug Test) ಇಬ್ಬರು ಏರ್ ಇಂಡಿಯಾ ಪೈಲಟ್ಗಳು ಸೈಕೋಆಕ್ಟಿವ್ ವಸ್ತುಗಳಿಗೆ ‘ನಾನ್-ನೆಗೆಟಿವ್’ (Non-Negetive) ಫಲಿತಾಂಶ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.














