Last Updated:
ಸಂಪತ್ತಿಗೆ ಸವಾಲ್ ಚಿತ್ರದ ವಜ್ರಮುನಿ ಅವರ ಮಕ್ಕಳು ಕನ್ನಡ ಇಂಡಸ್ಟ್ರಿಗೆ ಯಾಕೆ ಬರಲಿಲ್ಲ.? ತಂದೆ ವಜ್ರಮುನಿ ಅವರು ಮಕ್ಕಳಿಗೆ ಏನು ಅಂತ ಹೇಳಿದ್ದರು? ಆ ವಿವರ ಇಲ್ಲಿದೆ ಓದಿ.
ವಜ್ರಮುನಿ (Vajramuni) ಅವರ ಮಕ್ಕಳು ಸಿನಿಮಾರಂಗಕ್ಕೆ ಬರಲೇ ಇಲ್ಲ. ಇವರಿಗೆ ಒಬ್ಬರಲ್ಲ ಇಬ್ಬರಲ್ಲ, ಮೂವರು ಗಂಡು ಮಕ್ಕಳು. ಆದರೆ, ಒಬ್ಬರೂ ಸಿನಿಮಾರಂಗಕ್ಕೆ ಬರಲೇ ಇಲ್ಲ. ಇದಕ್ಕೆ ಕಾರಣ ಕೂಡ ಇದೆ. ಅದೇನಂದ್ರೆ ಸಿನಿಮಾರಂಗಕ್ಕೆ ಬಂದ ವಜ್ರಮುನಿ (Vajramuni) ಅವರು ಸಾಕಷ್ಟು ತೊಂದರೆ ಪಟ್ಟಿದ್ದರು. ಇದು ತಮ್ಮ ಮಕ್ಕಳಿಗೂ ಬೇಡ್ವೇ ಬೇಡ ಅಂತಲೆ ನಿರ್ಧರಿಸಿದ್ದರು. ಅದನ್ನ ತಮ್ಮ ಮಕ್ಕಳಿಗೂ ಹೇಳಿದ್ದರು. ಹಾಗಾಗಿಯೇ ಅಪ್ಪನ ಮಾತುಗಳಿಗೆ ಗೌರವ ಕೊಟ್ಟು ಮಕ್ಕಳು ಸಿನಿಮಾರಂಗಕ್ಕೆ ಬರಲಿಲ್ಲ. ಆದರೆ, ಈಗ ವಜ್ರಮುನಿ ಮಕ್ಕಳು (Vajramuni Children’s) ಮಾಧ್ಯಮಗಳಿಗೂ ಮಾತನಾಡುತ್ತಿದ್ದಾರೆ. ಹಾಗೆ ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ (Vishwanath Vajramuni) ಒಂದಷ್ಟು ಮಾತನಾಡಿದ್ದಾರೆ. ಅವರ ಮಾತುಗಳ ವಿವರ ಮುಂದೆ ಇದೆ.
ಅಪ್ಪನ ಮಾತಿಗೆ ತಪ್ಪದ ಮಕ್ಕಳು
ಯಲಾಕುನ್ನಿ ಚಿತ್ರದ ಮೂಲಕವೇ ಆಕರ್ಶ್ ವಜ್ರಮುನಿ ಇಂಡಸ್ಟ್ರಿಗೆ ಬಂದಿದ್ದಾನೆ. ಈ ಒಂದು ಚಿತ್ರದಲ್ಲಿ ಕೋಮಲ್ ಕುಮಾರ್ ಇದ್ದಾರೆ. ವಜ್ರಮುನಿ ರೀತಿನೇ ಇವರು ಕಾಣಿಸಿದ್ದಾರೆ. ಈ ಚಿತ್ರದಲ್ಲಿಯೇ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ವಜ್ರಮುನಿ ಬಾಲ ನಟನಾಗಿ ಅಭಿನಯಿಸಿದ್ದಾರೆ. ಆಕರ್ಶ್ಗೆ ನಟನೆ ಬಗ್ಗೆ ಆಸಕ್ತಿ ಇದೆ.
ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ಅವರು ಈಗೆಲ್ಲ ಮಾಧ್ಯಮಗಳಿಗೆ ಮಾತನಾಡುತ್ತಿದ್ದಾರೆ. ಇವರು ತೋಟಗಾರಿಕೆಯಲ್ಲಿಯೇ ಬ್ಯುಸಿ ಇದ್ದಾರೆ.
ಆದರೆ, ಎಲ್ಲೂ ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಲಿಲ್ಲ. ವಜ್ರಮುನಿ ಅವರ ಇನ್ನಿಬ್ಬರು ಮಕ್ಕಳು ಕೂಡ ಸಿನಿಮಾರಂಗದಿಂದ ದೂರವೇ ಉಳಿದಿದ್ದಾರೆ.
ವಜ್ರಮುನಿ ಅವರು ತಮ್ಮ ಮಕ್ಕಳಿಗೆ ಒಂದು ಮಾತು ಹೇಳಿದ್ದರು. ಸಿನಿಮಾರಂಗದ ನಂಟು ಮತ್ತು ಕಷ್ಟ ನನಗೆ ಇರಲಿ, ಮಕ್ಕಳಾರು ಸಿನಿಮಾರಂಗಕ್ಕೆ ಬರೋದೇ ಬೇಡ ಅಂತ ಹೇಳಿದ್ದರು.
ಈ ಮಾತಿಗೆ ಇಂದಿಗೂ ಗೌರವ ಕೊಡುವ ಮಕ್ಕಳು ಸಿನಿಮಾರಂಗಕ್ಕೆ ಬರಲೇ ಇಲ್ಲ. ಯಾವ ಅರ್ಥದಲ್ಲೂ ಚಿತ್ರರಂಗದಲ್ಲಿ ತೊಡಗಿಕೊಂಡಿಲ್ಲ.
ವಿಶ್ವನಾಥ್ ವಜ್ರಮುನಿ ಹೇಳೋದೇನು
ವಜ್ರಮುನಿ ಅವರ ಹಿರಿಯ ಮಗ ವಿಶ್ವನಾಥ್ ಹೇಳೋದೇನು ಗೊತ್ತಾ? ಹೌದು, ನಾವು ಸಿನಿಮಾರಂಗಕ್ಕೆ ಬರದೆ ಇರಲು ಕಾರಣ ಬೇರೆ ಏನೂ ಇಲ್ಲ. ನಮ್ಮ ತಂದೆ ಸಿನಿಮಾರಂಗಕ್ಕೆ ಬರಬೇಡಿ. ಬೇರೆ ಕ್ಷೇತ್ರದಲ್ಲಿ ತೊಡಗಿಕೊಳ್ಳಿ ಅಂತಲೇ ಹೇಳಿದ್ದರು.
ಹಾಗಾಗಿಯೆ ನಾವು ಯಾರೂ ಸಿನಿಮಾರಂಗಕ್ಕೆ ಬರಲಿಲ್ಲ ಅಂತಲೇ ವಿಶ್ವನಾಥ್ ವಜ್ರಮುನಿ ಹೇಳಿಕೊಂಡಿದ್ದಾರೆ. ಸುದ್ದಿ ಮನೆ ಯುಟ್ಯೂಬ್ ಚಾನೆಲ್ಗೆ ಕೊಟ್ಟ ಸಂದರ್ಶನದಲ್ಲಿಯೆ ಈ ವಿಚಾರವನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
ವಜ್ರಮುನಿ ಅವರನ್ನ ನಟಭಯಂಕರ ಅಂತಲೆ ಕರೆಯುತ್ತಿದ್ದರು. ನಟಭೈರವ ಅಂತಲೂ ಹೇಳುತ್ತಿದ್ದರು. ಇವರು ತಮ್ಮ ಅದ್ಭುತ ಅಭಿನಯ ಹಾಗೂ ಕಂಚಿನ ಕಂಠದಿಂದಲೂ ಹೆಸರಾಗಿದ್ದರು.
ವಜ್ರಮುನಿ ಅವರು ಸಂಪತ್ತಿಗೆ ಸವಾಲ್, ಮಯೂರ, ಪ್ರೇಮದ ಕಾಣಿಕೆ, ಆಕಸ್ಮಿಕ, ನಾಗರಹಾವು, ಸಾಹಸ ಸಿಂಹ ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ವಜ್ರಮುನಿ ಅವರು ನಟಿಸಿದ್ದರು. ಇದು ಇವರ ಅದ್ಭುತ ಅಭಿನಯದ ಚಿತ್ರವೇ ಆಗಿದೆ. ಸಾಹುಕಾರ ಸಿದ್ದಪ್ಪನಾಗಿಯೇ ಅಬ್ಬರಿಸಿದ್ದರು. ಇಂದಿಗೂ ವಜ್ರಮುನಿ ಅಂದ್ರೆ ಮೊದಲು ನೆನಪಾಗುವ ಚಿತ್ರ ಅದು ಇದೇ ಸಂಪತ್ತಿಗೆ ಸವಾಲ್ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













