INDW vs PAKW, WT20I WC: ಅಬ್ಬರಿಸಿದ ಮಂಧಾನ, ರಿಚಾ ಘೋಷ್​! ಪಾಕಿಸ್ತಾನಕ್ಕೆ 171 ರನ್​​ಗಳ ಸವಾಲಿನ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews

INDW vs PAKW, WT20I WC: ಅಬ್ಬರಿಸಿದ ಮಂಧಾನ, ರಿಚಾ ಘೋಷ್​! ಪಾಕಿಸ್ತಾನಕ್ಕೆ 171 ರನ್​​ಗಳ ಸವಾಲಿನ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ


ಕಳಪೆ ಆರಂಭ ಪಡೆದ ಭಾರತ

ಟಾಸ್ ಗೆದ್ದ ಭಾರತ ಮಹಿಳಾ ತಂಡ ನಿರೀಕ್ಷಿಸಿದ ಆರಂಭ ಪಡೆಯಲಿಲ್ಲ. ಆರಂಭಿಕರಾದ ಶಫಾಲಿ ವರ್ಮಾ ಸಾದಿಯಾ ಇಕ್ಬಾಲ್ ಎಸೆದ ಇನ್ನಿಂಗ್ಸ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರೂ, ಅದೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಜೇಮೀಮಾ ರೋಡ್ರಿಗಸ್ 6 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ತಸ್ಮಿಯಾ ರುಬಾಬ್ ಬೌಲಿಂಗ್‌ನಲ್ಲಿ ಪರ್ವೇಜ್‌ಗೆ ಕ್ಯಾಚ್ ನೀಡಿ ಔಟ್ ಆದರು.

ಮಂಧಾನ ಅರ್ಧಶತಕ, ರಿಚಾ ಅಬ್ಬರ

ಈ ಹಂತದಲ್ಲಿ ಒಂದಾದ ಉಪನಾಯಕಿ ಸ್ಮೃತಿ ಮಂಧಾನ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 3ನೇ ವಿಕೆಟ್ ಜೊತೆಯಾಟದಲ್ಲಿ 91 ರನ್‌ಗಳ ಜೊತೆಯಾಟ ನೀಡಿದರು. ಸ್ಮೃತಿ ಮಂಧಾನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳ ಸಹಿತ 68 ರನ್ ಗಳಿಸಿದರು.

ಮಂಧಾನ ಬೆನ್ನಲ್ಲೆ ಭಾರತ ಸತತ ಎರಡು ವಿಕೆಟ್ ಕಳೆದುಕೊಂಡಿತು. ಭಾರತಿ ಫುಲ್ಮಾಲಿ 3 ಎಸೆತಗಳಲ್ಲಿ 1 ರನ್ ಗಳಿಸಿ ಸ್ಟಂಪ್ ಔಟ್ ಆದರೆ, ಹರ್ಮನ್ ಪ್ರೀತ್ ಕೌರ್ 35 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ ಕೇವಲ 36 ರನ್ ಗಳಿಸಿ ನಿರಾಶಾದಾಯಕ ಪ್ರದರ್ಶನ ತೋರಿ ನಿರ್ಗಮಿಸಿದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್ 17 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 34 ರನ್ ಚಚ್ಚಿದರು. ದೀಪ್ತಿ ಶರ್ಮಾ ಅಜೇಯ 12, ಶ್ರೇಯಾಂಕ ಅಜೇಯ 1 ರನ್ ಗಳಿಸಿದರು.

ಪಾಕಿಸ್ತಾನ ಪರ ಸಾದಿಯಾ ಇಕ್ಬಾಲ್ 41ಕ್ಕೆ2, ಫಾತಿಮಾ ಸನಾ 33ಕ್ಕೆ2, ತಸ್ಮಿಯಾ ರುಬಾಬ್ 41ಕ್ಕೆ1, ರಮೀನ್ ಶಮಿಮ್ 30ಕ್ಕೆ1 ವಿಕೆಟ್ ಪಡೆದರು.

ಹೆಡ್  ಟು ಹೆಡ್ ದಾಖಲೆ

ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ 16 ಪಂದ್ಯಗಳು ನಡೆದಿವೆ. ಇದರಲ್ಲಿ, ಭಾರತ ತಂಡ ಪ್ರಾಬಲ್ಯ ಸಾಧಿಸಿ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಇನ್ನು ವಿಶ್ವಕಪ್ ವಿಚಾರದಲ್ಲಿ ಎರಡೂ ತಂಡಗಳು 8 ಬಾರಿ  ಮುಖಾಮುಖಿಯಾಗಿವೆ.  ಭಾರತ 6 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 2 ಪಂದ್ಯಗಳನ್ನು ಗೆದ್ದುಕೊಂಡಿದೆ. ಆದ್ದರಿಂದ, ಇಂದಿನ ಪಂದ್ಯದಲ್ಲೂ ಭಾರತ ಮುನ್ನಡೆ ಸಾಧಿಸುವ ಸಾಧ್ಯತೆಗಳಿವೆ.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ ಮಹಿಳಾ ಪ್ಲೇಯಿಂಗ್ XI: ಸ್ಮೃತಿ ಮಂಧಾನ , ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕ), ರಿಚಾ ಘೋಷ್ (ವಿಕೆ), ದೀಪ್ತಿ ಶರ್ಮಾ, ಭಾರತಿ ಫುಲ್ಮಾಲಿ, ಶ್ರೀ ಚರಣಿ, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ

ಪಾಕಿಸ್ತಾನದ ಮಹಿಳಾ ಪ್ಲೇಯಿಂಗ್ XI: ಗುಲ್ ಫಿರೋಜಾ, ಮುನೀಬಾ ಅಲಿ (ವಿಕೀ), ಆಯೇಶಾ ಜಾಫರ್, ಸೈರಾ ಜಬೀನ್, ನತಾಲಿಯಾ ಪರ್ವೈಜ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕ), ರಮೀನ್ ಶಮೀಮ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ತಸ್ಮಿಯಾ ರುಬಾಬ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed