Vaishnavi Gowda: ಹೊಸ ಧಾರಾವಾಹಿಯಲ್ಲಿ ವೈಷ್ಣವಿ ಗೌಡ! ಈ ಬಾರಿ ಉದಯಟಿವಿ ಮೂಲಕ ಗ್ರ್ಯಾಂಡ್ ಎಂಟ್ರಿ! | | ACTPnews

ಸನ್ನಿಧಿ ಗೌಡ


Last Updated:

Vaishnavi Gowda: ‘ಸನ್ನಿಧಿ’, ‘ಸೀತಾ’ ಆಗಿ ಜನಮನ ಗೆದ್ದಿದ್ದ ನಟಿ ವೈಷ್ಣವಿ ಗೌಡ, ಇದೀಗ ‘ಗುಡ್ ನ್ಯೂಸ್’ ಕೊಟ್ಟಿದ್ದಾರೆ! ಮದುವೆಯಾಗಿ, ಗಂಡನ ಜೊತೆ ಸುಖವಾಗಿರುವ ವೈಷ್ಣವಿ ಗೌಡ ಕೊಟ್ಟಿದ್ದು, ‘ಆ ಗುಡ್ ನ್ಯೂಸ್’ ಅಲ್ಲ, ಬದಲಾಗಿ ಹೊಸ ಧಾರಾವಾಹಿಯ ಗುಡ್ ನ್ಯೂಸ್!   

ಸನ್ನಿಧಿ ಗೌಡ
ಸನ್ನಿಧಿ ಗೌಡ

ವೈಷ್ಣವಿ ಗೌಡ… ಹೀಗಂತ ಹೇಳಿದ್ರೆ ಬಹುತೇಕರಿಗೆ ಗೊತ್ತಾಗಲಿಕ್ಕಿಲ್ಲ. ಖುದ್ದು ನಟಿ ವೈಷ್ಣವಿ ಗೌಡ (Vaishnavi Gowda) ಅವರ ಫ್ಯಾನ್ಸ್ ಕೂಡ ಒಂದು ಕ್ಷಣ ಯೋಚ್ನೆ ಮಾಡಬಹುದು, ಯಾರಿದು ಅಂತ! ಆದ್ರೆ ‘ಅಗ್ನಿಸಾಕ್ಷಿ’ಯ (Agnisakshi) ‘ಸನ್ನಿಧಿ’, ‘ಸೀತಾರಾಮ’ನ (Sitaram) ‘ಸೀತಾ’ ಅಂದ್ರೆ ಥಟ್ ಅಂತ ಗೊತ್ತಾಗುತ್ತೆ! ಹೌದು, ಸನ್ನಿಧಿ, ಸೀತಾ ಆಗಿ ಜನಮನ ಗೆದ್ದಿದ್ದ ನಟಿ ವೈಷ್ಣವಿ ಗೌಡ, ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಯಾಗಿ, ಗಂಡನ ಜೊತೆ ಸುಖವಾಗಿರುವ ವೈಷ್ಣವಿ ಗೌಡ ಕೊಟ್ಟಿದ್ದು, ‘ಆ ಗುಡ್ ನ್ಯೂಸ್’ ಅಲ್ಲ, ಬದಲಾಗಿ ಹೊಸ ಧಾರಾವಾಹಿಯ (serial) ಗುಡ್ ನ್ಯೂಸ್!

ಸನ್ನಿಧಿಯಾಗಿ ಮನೆ ಮನ ಗೆದ್ದಿದ್ದ ವೈಷ್ಣವಿ ಗೌಡ

ದೇವಿಯಾಗಿ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ವೈಷ್ಣವಿ ಗೌಡ, ಅಲ್ಲಿಂದಲೇ ಮಹಿಳೆಯರ ಮನಗೆದ್ದಿದ್ದರು. ಆದಾದ ಬಳಿಕ ಅವ್ರಿಗೆ ಬ್ರೇಕ್ ಕೊಟ್ಟಿದ್ದು ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಸೀರಿಯಲ್. ಸನ್ನಿಧಿಯಾಗಿ ನಟಿಸಿದ್ದ ವೈಷ್ಣವಿ ಗೌಡ, ಕರ್ನಾಟಕದ ಮನೆಮಗಳೇ ಆಗಿದ್ದರು. ಸಿದ್ಧಾರ್ಥ್ ಆಗಿ ನಟಿಸಿದ್ದ ವಿಜಯ್ ಸೂರ್ಯ ಹಾಗೂ ವೈಷ್ಣವಿ ಗೌಡ ಜೋಡಿ ಕರ್ನಾಟಕದ ಮನೆಮಾತಾಗಿತ್ತು.

ಸೀತಾ ರಾಮ ಮೂಲಕ ಕಿರುತೆರೆಗೆ ರೀ ಎಂಟ್ರಿ

ಅದಾದ ಬಳಿಕ ಬಿಗ್‌ ಬಾಸ್‌ಗೆ ಬಂದು, ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದ ವೈಷ್ಣವಿ ಗೌಡ, ಒಳ್ಳೆ ಹುಡ್ಗಿ ಅಂತ ಫುಲ್ ಮಾರ್ಕ್ಸ್ ಪಡೆದಿದ್ದರು. ಅದಾದ ಮೇಲೆ ಕನ್ನಡ ಕಿರುತೆರೆ ವೀಕ್ಷಕರು ಅವ್ರನ್ನು ಮಿಸ್ ಮಾಡಿಕೊಳ್ಳೋಕೆ ಶುರು ಮಾಡಿದ್ದರು. ಅದಾದ ಮೇಲೆ ಜೀ ಕನ್ನಡದಲ್ಲಿ ಸೀತಾರಾಮ ಧಾರಾವಾಹಿ ಮೂಲಕ ವೈಷ್ಣವಿ ಗೌಡ ರೀ ಎಂಟ್ರಿ ಆಗಿತ್ತು.

ಮತ್ತೆ ಕಿರುತೆರೆಗೆ ವೈಷ್ಣವಿ ಗೌಡ ಗ್ರ್ಯಾಂಡ್ ಎಂಟ್ರಿ

ಸೀತಾ ಆಗಿ ಎಲ್ಲಾ ಅಮ್ಮಂದಿರ ಫೇವರೇಟ್ ಆದ ವೈಷ್ಣವಿ ಗೌಡ, ಆ ಸೀರಿಯಲ್ ಮುಗಿಯುತ್ತಿದ್ದಂತೆ ಮದುವೆಯಾದರು. ಇದೀಗ ಗಂಡ, ಸಂಸಾರ ಅಂತ ಸುಖವಾಗಿರುವಾಗಲೇ ಮತ್ತೆ ಕಿರುತೆರೆಗೆ ವೈಷ್ಣವಿ ಗೌಡ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ಗೆಳತಿ ಗಾಯತ್ರಿ ಜೊತೆ ಬರುತ್ದಿದ್ದಾರೆ ವೈಷ್ಣವಿ ಗೌಡ

ಹೌದು, ಹೊಸ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ. ‘ಗೆಳತಿ ಗಾಯತ್ರಿ’ ಎಂಬ ಮಹಿಳಾ ಪ್ರಧಾನ ಕಥೆ ಹೊಂದಿರುವ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಅಂದಹಾಗೆ ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಪಾತ್ರದ ಹೆಸರು ಗಾಯತ್ರಿಯಲ್ಲ, ಪಾರ್ವತಿ!

ಪಾರ್ವತಿ ಎಂಬ ಶ್ರೀಮಂತ ಮಹಿಳೆ ಪಾತ್ರ

ಗೆಳತಿ ಗಾಯತ್ರಿ ಧಾರಾವಾಹಿಯಲ್ಲಿ ‘ಪಾರ್ವತಿ’ ಎಂಬ ಪಾತ್ರ ಮಾಡುತ್ತಿದ್ದು, ಶ್ರೀಮಂತ ಮನೆಯ ಹೆಣ್ಮಗಳಾಗಿ ವೈಷ್ಣವಿ ಕಾಣಿಸಿಕೊಂಡಿದ್ದಾರಂತೆ. ಇದೇ ಮೊದಲ ಬಾರಿಗೆ ಧಾರಾವಾಹಿಯ ಪ್ರಾರಂಭದಲ್ಲೇ ಈ ಪಾತ್ರ ಮದುವೆ ಆಗಲಿದ್ದು, ಇದೊಂದು ಸಂಪೂರ್ಣ ವಿಭಿನ್ನ ಪಾತ್ರ ಮತ್ತು ಕಥೆಯಾಗಿದೆ ಎನ್ನಲಾಗುತ್ತಿದೆ.

ಏನಿದೆ ಗೆಳತಿಯ ಕಥೆ?

ಈ ಧಾರಾವಾಹಿಯಲ್ಲಿ ನಾಯಕಿ ಪಾರ್ವತಿಗೆ ಮದುವೆ ಆಗಿದೆ. ಒಳ್ಳೆಯ ಗುಣವಂತೆ. ಚಂದದ ಕುಟುಂಬದ ಒಡತಿ, ಮೇಲಾಗಿ ಶ್ರೀಮಂತೆ. ಇಷ್ಟೆಲ್ಲಾ ಸೌಕರ್ಯಗಳು ಇದ್ದರೂ ಕೂಡ ಅವಳಿಗೆ ಕಾಡುತ್ತಿರುವ ಕೊರತೆ ಅಂದರೆ ಆಕೆಯ ಗೆಳತನವಂಚೆ. ಪಾರ್ವತಿ ತನ್ನ ಬಾಲ್ಯದ ಗೆಳತಿ ಗಾಯತ್ರಿಯನ್ನು ಹುಡುಕುತ್ತಿರುತ್ತಾಳಂತೆ. ಸ್ನೇಹಿತೆ ಗಾಯತ್ರಿಯ ಹುಡುಕಾಟದ ಸುತ್ತ ನಡೆಯುವ ಏಳುಬೀಳುಗಳ ಕಥೆಯೇ ‘ಗೆಳತಿ ಗಾಯತ್ರಿ’ ಅಂತ ವಿಜಯ ಕರ್ನಾಟಕ ವರದಿ ಮಾಡಿದೆ.

ಗಾಯತ್ರಿ ಪಾತ್ರ ಮಾಡುತ್ತಿರೋದು ಯಾರು?

ಗಾಯತ್ರಿ ಪಾತ್ರ ಮಾಡುತ್ತಿರೋದು ಮತ್ತೋರ್ವ ಖ್ಯಾತ ನಟಿ ಕೃತಿಕಾ ರವೀಂದ್ರ. ‘ರಾಧಾ ಕಲ್ಯಾಣ’, ‘ಭೂಮಿಗೆ ಬಂದ ಭಗವಂತ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾದ ಕೃತಿಕಾ ರವೀಂದ್ರ ಗಾಯತ್ರಿ ಪಾತ್ರ ಮಾಡುತ್ತಿದ್ದಾರೆ. ಅಂದ ಹಾಗೆ ಸನ್ ಉದಯ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ದಿನಾಂಕ ಹಾಗೂ ಸಮಯ ಇನ್ನಷ್ಟೇ ಘೋಷಣೆಯಾಗಬೇಕಿದೆ.



Source link

Leave a Reply

Your email address will not be published. Required fields are marked *