[ad_1]
Last Updated:
ಕೇಂದ್ರವಲಯ ನೀಡಿರುವ 159 ರನ್ ಗಳ ಗುರಿ ಬೆನ್ನಟ್ಟಿದ ಪೂರ್ವ ವಲಯಕ್ಕೆ ವೈಭವ್ ಸೂರ್ಯವಂಶಿ ಅದ್ಭುತ ಆರಂಭ ನೀಡಿದರು. ಪಿಚ್ ಬ್ಯಾಟಿಂಗ್ಗೆ ಅನನುಕೂಲವಾಗಿದ್ದರಿಂದ ವೈಭವ್ ಸೂರ್ಯವಂಶಿ ಆರಂಭದಿಂದಲೇ ಅಬ್ಬರಿಸಿದರಾದರೂ, ಅರ್ಧಶತಕದಿಂದ ಸ್ವಲ್ಪದರಲ್ಲೇ ವಂಚಿತರಾದರು.
ಟೀಂ ಇಂಡಿಯಾದ ಯುವ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಮ್ಮೆ ವಿಧ್ವಂಸಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ ತಮ್ಮ ಹಿಂದಿನ ತಪ್ಪುಗಳನ್ನೇ ಪುನರಾವರ್ತಿಸಿ ಮತ್ತೆ ತಮ್ಮ ಅರ್ಧಶತಕವನ್ನು ತಪ್ಪಿಸಿಕೊಂಡರು. ವೈಭವ್ ಸೂರ್ಯವಂಶಿ 2026ರ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯದ (East zone) ಉಪನಾಯಕರಾಗಿದ್ದಾರೆ. ಸೆಂಟ್ರಲ್ ಝೋನ್ (Central Zone) ವಿರುದ್ಧದ ಪಂದ್ಯದಲ್ಲಿ ಅವರು ರನ್ ಗಳ ಸುನಾಮಿಯನ್ನು ಸೃಷ್ಟಿಸಿದರು. ಬೆಂಗಳೂರಿನ ಸಿಒಇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ವೈಭವ್ ಸೂರ್ಯವಂಶಿ 8 ರನ್ಗಳಿಂದ ಶತಕದಿಂದ ವಂಚಿತರಾದರು. ಎರಡನೇ ಇನ್ನಿಂಗ್ಸ್ ನಲ್ಲಿ, ಅದೇ ರೀತಿ ಬ್ಯಾಟಿಂಗ್ ಮಾಡಿ ಅರ್ಧಶತಕ ತಪ್ಪಿಸಿಕೊಂಡರು.
[ad_2]
Source link














