Vaibhav Sooryavanshi: 15 ವರ್ಷಕ್ಕೆ ವಿಶ್ವವನ್ನ ತನ್ನತ್ತಾ ತಿರುಗಿಸಿಕೊಂಡಿದ್ದಾನೆ, ಆ ನಡವಳಿಕೆ ಬಿಟ್ಟರೆ ಸೂಪರ್ ಸ್ಟಾರ್ ಆಗ್ತಾನೆ: ವಿಶ್ವಶ್ರೇಷ್ಠ ನಾಯಕನಿಂದಲೇ ಪ್ರಶಂಸೆ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

15 ವರ್ಷದ ಬಾಲಕ ತನ್ನ ಅಸಾಧಾರಣ ಬ್ಯಾಟಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವುದಕ್ಕಾಗಿ ಶ್ಲಾಘಿಸಿದ್ದಾರೆ. ಲಾಯ್ಡ್ ವೈಭವ್​​​ ಅವರ ಶಾಟ್ ಸೆಲಕ್ಷನ್​ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರು ಭವಿಷ್ಯದ ಸೂಪರ್‌ಸ್ಟಾರ್ ಆಗುತ್ತಾರೆ ಎಂದು ಖಚಿತವಾಗಿ ಭವಿಷ್ಯ ನುಡಿದಿದ್ದಾರೆ.

ವೈಭವ್  ಸೂರ್ಯವಂಶಿ
ವೈಭವ್ ಸೂರ್ಯವಂಶಿ

ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ದಂತಕಥೆ ಕ್ಲೈವ್ ಲಾಯ್ಡ್ ಅವರು ಟೀಮ್ ಇಂಡಿಯಾದ ಯುವ ಸೆನ್ಷೇಷನ್​​, ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ್ದಾರೆ. 15 ವರ್ಷದ ಬಾಲಕ ತನ್ನ ಅಸಾಧಾರಣ ಬ್ಯಾಟಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವುದಕ್ಕಾಗಿ ಶ್ಲಾಘಿಸಿದ್ದಾರೆ. ಲಾಯ್ಡ್ ವೈಭವ್​​​ ಅವರ ಶಾಟ್ ಸೆಲಕ್ಷನ್​ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರು ಭವಿಷ್ಯದ ಸೂಪರ್‌ಸ್ಟಾರ್ ಆಗುತ್ತಾರೆ ಎಂದು ಖಚಿತವಾಗಿ ಭವಿಷ್ಯ ನುಡಿದಿದ್ದಾರೆ.

ತಮ್ಮ ಅದ್ಭುತ ಪ್ರದರ್ಶನಗಳಿಂದಾಗಿ ಭಾರತೀಯ ಕ್ರಿಕೆಟ್‌ನ ಹೊಸ ಮುಖವಾಗಿ ಏರುತ್ತಿರುವ ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಶುಕ್ರವಾರ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಇತ್ತೀಚಿನ ಶ್ರೀಲಂಕಾ ಪ್ರವಾಸದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿದ ವೈಭವ್, ಬಿಸಿಸಿಐನಿಂದ ತಮ್ಮ ಟೀಮ್ ಇಂಡಿಯಾ ಜೆರ್ಸಿಯನ್ನು ಪಡೆದಿದ್ದಾರೆ. ಜೆರ್ಸಿ ಸಂಖ್ಯೆ 3 ಅನ್ನ ಧರಿಸಿ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಸ್ಲಾಗರ್ ಅಲ್ಲ ಎಂದ ದಿಗ್ಗಜ

ಕ್ಲೈವ್ ಲಾಯ್ಡ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅನ್ನು ಹೊಗಳಿದ್ದು, ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. 1975 ಮತ್ತು 1979 ರಲ್ಲಿ ವಿಶ್ವಕಪ್ ವಿಜೇತ ಲಾಯ್ಡ್, ವೈಭವ್ ಕೇವಲ ಚೆಂಡನ್ನು ಬಲವಾಗಿ ಹೊಡೆಯುವುದಲ್ಲದೆ, ಅತ್ಯುತ್ತಮ ಟೈಮಿಂಗ್​​ನಲ್ಲಿ ಕ್ಲಾಸಿಕ್ ಹೊಡೆತಗಳನ್ನು ಸಹ ಆಡುತ್ತಾರೆ ಎಂದು ಗಮನಿಸಿದ್ದಾರೆ.

“ವೈಭವ್ ಸೂರ್ಯವಂಶಿ ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಅಸಾಧಾರಣ ಆಟಗಾರ. ಅವರು ಚೆಂಡನ್ನು ಬಹಳ ಸುಲಭವಾಗಿ ಬೌಂಡರಿಗೆ ಹೊಡೆಯುತ್ತಾರೆ. ಅವರು ಕಣ್ಣುಮುಚ್ಚಿ ಹೊಡೆಯಿವ ಆಟಗಾರನಲ್ಲ, ಬದಲಾಗಿ, ಅವರು ಸರಿಯಾದ ಟೆಕ್ನಿಕ್ ಮತ್ತು ಟೈಮಿಂಗ್ ಮೂಲಕ ದೊಡ್ಡ ಶಾಟ್ ಮಾಡುತ್ತಾರೆ. ತರಬೇತುದಾರರು ಸಾಮಾನ್ಯವಾಗಿ ಯುವ ಆಟಗಾರರ ನೈಸರ್ಗಿಕ ಶೈಲಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ, ಆದರೆ ವೈಭವ್​ಗೆ ಆ ತಪ್ಪನ್ನು ಮಾಡಬಾರದು. ಅವರಿಗೆ ಮುಕ್ತವಾಗಿ ಆಡಲು ಅವಕಾಶ ನೀಡಬೇಕು” ಎಂದು ಕ್ಲೈವ್ ಲಾಯ್ಡ್ ಸಲಹೆ ನೀಡಿದ್ದಾರೆ.

ಅತ್ಯುತ್ತಮ ಸ್ಪರ್ಧೆ ಇರುತ್ತಿತ್ತು

ಮೈಕೆಲ್ ಹೋಲ್ಡಿಂಗ್, ಜೋಯಲ್ ಗಾರ್ನರ್, ಆಂಡಿ ರಾಬರ್ಟ್ಸ್ ಮತ್ತು ಕಾಲಿನ್ ಕ್ರಾಫ್ಟ್‌ರಂತಹ ಬೌಲರ್‌ಗಳನ್ನು ಒಳಗೊಂಡ ಅವರ ಯುಗದ ಭಯಾನಕ ವೆಸ್ಟ್ ಇಂಡೀಸ್ ವೇಗದ ದಾಳಿಯ ವಿರುದ್ಧ ವೈಭವ್ ಹೇಗೆ ಆಡುತ್ತಿದ್ದರು ಎಂದು ಕೇಳಿದಾಗ, ಇದು ಯುವ ಆಟಗಾರನಿಗೆ ಕಠಿಣ ಪರೀಕ್ಷೆಯಾಗುತ್ತಿತ್ತು ಎಂದು ಲಾಯ್ಡ್ ಅಭಿಪ್ರಾಯಪಟ್ಟರು. “ಇದು ಖಂಡಿತವಾಗಿಯೂ ವೈಭವ್ ಸೂರ್ಯವಂಶಿಗೆ ಒಂದು ದೊಡ್ಡ ಪರೀಕ್ಷೆಯಾಗುತ್ತಿತ್ತು. ಅದು ಅವರ ಮಾನಸಿಕ ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರಶ್ನಿಸುತ್ತಿತ್ತು. ವೈಭವ್ ಅತ್ಯುತ್ತಮ ದೃಷ್ಟಿ ಮತ್ತು ಚೆಂಡನ್ನು ಹೊಡೆಯುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ. ನಮ್ಮ ಬೌಲರ್‌ಗಳ ವಿರುದ್ಧದ ಸ್ಪರ್ಧೆಯು ಆಕರ್ಷಕ ಪಂದ್ಯವಾಗುತ್ತಿತ್ತು” ಎಂದು ಲಾಯ್ಡ್ ಅಭಿಪ್ರಾಯಪಟ್ಟಿದ್ದಾರೆ.

ಮೈದಾನದ ನಡವಳಿಕೆಯಲ್ಲಿ ಬದಲಾವಣೆ ಅಗತ್ಯ

ವೈಭವ್ ಸೂರ್ಯವಂಶಿ ಶ್ರೀಲಂಕಾದ ಆಟಗಾರರೊಂದಿಗೆ ವಾಗ್ವಾದಕ್ಕೆ ಇಳಿದ ನಡೆಯನ್ನ ಲಾಯ್ಡ್ ಟೀಕಿಸಿದ್ದಾರೆ. ಎದುರಾಳಿಗಳೊಂದಿಗೆ ಘರ್ಷಣೆ ಮಾಡುವ ಬದಲು, ಆಟಗಾರ ಅಂಪೈರ್‌ಗಳಿಗೆ ದೂರು ನೀಡಬೇಕಿತ್ತು ಎಂದು ಅವರು ಭಾವಿಸಿದರು. “ಸ್ಲೆಡ್ಜಿಂಗ್ ಮತ್ತು ಮಾತಿನ ಚಕಮಕಿ ಆಟದ ಭಾಗವಾಗಿದ್ದರೂ, ಕ್ರೀಡೆಯ ಸಮಗ್ರತೆ ಅತ್ಯುನ್ನತವಾಗಿದೆ. ಎದುರಾಳಿಗಳಿಂದ ಪ್ರಚೋದಿಸಲ್ಪಟ್ಟರೆ, ಆಟಗಾರರು ಹಠಾತ್ತನೆ ಪ್ರತಿಕ್ರಿಯಿಸುವ ಬದಲು ಅಂಪೈರ್‌ಗಳಿಗೆ ವಿಷಯವನ್ನು ವರದಿ ಮಾಡಬೇಕು. ಪಂದ್ಯದ ರೆಫರಿಗಳು ಸಹ ದೃಢವಾದ ನಿಲುವನ್ನು ತೆಗೆದುಕೊಂಡು ದಂಡ ವಿಧಿಸಬೇಕು. ವೈಭವ್ ಸೂರ್ಯವಂಶಿ ಕೂಡ ಎದುರಾಳಿ ಆಟಗಾರನೊಂದಿಗೆ ವಾಗ್ವಾದಕ್ಕೆ ಇಳಿಯುವ ಬದಲು ಅಂಪೈರ್‌ಗಳಿಗೆ ಸಮಸ್ಯೆಯನ್ನು ವರದಿ ಮಾಡಬೇಕಾಗಿತ್ತು” ಎಂದು ಲಾಯ್ಡ್ ಅಭಿಪ್ರಾಯಪಟ್ಟರು.

ವೈಭವ್ ವಿವಾದಗಳಿಂದ ದೂರವಿದ್ದು ದೀರ್ಘ ವೃತ್ತಿಜೀವನವನ್ನು ನಿರ್ಮಿಸಬಹುದೆಂದು ಮತ್ತು ಈ ಯುವ ಆಟಗಾರನನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುವಂತೆ ಬಿಸಿಸಿಐಗೆ ಒತ್ತಾಯಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Vaibhav Sooryavanshi: 15 ವರ್ಷಕ್ಕೆ ವಿಶ್ವವನ್ನ ತನ್ನತ್ತಾ ತಿರುಗಿಸಿಕೊಂಡಿದ್ದಾನೆ, ಆ ನಡವಳಿಕೆ ಬಿಟ್ಟರೆ ಸೂಪರ್ ಸ್ಟಾರ್ ಆಗ್ತಾನೆ: ವಿಶ್ವಶ್ರೇಷ್ಠ ನಾಯಕನಿಂದಲೇ ಪ್ರಶಂಸೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed