Vaibhav Sooryavanshi: ‘ಇದೇ ಕಾರಣಕ್ಕೆ ವೈಭವ್ ಸೂರ್ಯವಂಶಿನ ಆಡಿಸಲಿಲ್ಲ’! ಅಚ್ಚರಿಯ ಕಾರಣ ಕೊಟ್ಟ ಭಾರತದ ಕೋಚ್! | | ACTPnews

ವೈಭವ್ ಸೂರ್ಯವಂಶಿ


Last Updated:

ವೈಭವ್ ಸೂರ್ಯವಂಶಿಗೆ ಐರ್ಲೆಂಡ್ ಪ್ರವಾಸದಲ್ಲಿ ಏಕೆ ಅವಕಾಶ ನೀಡಲಿಲ್ಲ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಆದ್ರೆ, ಈ ಬಗ್ಗೆ ತಂಡದ ಮ್ಯಾನೇಜ್ಮೆಂಟ್ ವೈಭವ್ನ ಕಣಕ್ಕಿಳಿಸುವುದಕ್ಕೆ ಯಾವುದೇ ಆತುರವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಐಪಿಎಲ್​ (IPL) ಮತ್ತು ಭಾರತ ಎ ಪರ ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ (Vaibhav Sooryavanshi) ಐರ್ಲೆಂಡ್ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡುತ್ತಾರೆಂದು ಕೋಟ್ಯಾಂತರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದ್ರೆ ವೈಭವ್​ ಸೂರ್ಯವಂಶಿಯ ಪಾದಾರ್ಪಣೆಯ ಶುಭ ಗಳಿಗೆ ಇನ್ನು ಬಂದೇ ಇಲ್ಲ. ಟೀಂ ಇಂಡಿಯಾದ ಹಿರಿಯರ ತಂಡದಲ್ಲಿ ವೈಭವ್​ ಸೂರ್ಯವಂಶಿಯನ್ನು ನೋಡಲು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ರು. ಆದ್ರೆ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಭಾರತದ ಸಹಾಯಕ ಕೋಚ್​ 15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ನಿರಾಕರಿಸಿದರ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಐರ್ಲೆಂಡ್ ಮೊದಲ ಪಂದ್ಯವನ್ನು ಗೆದ್ದಿದ್ದಲ್ಲದೆ, ಸರಣಿಯ ಎರಡೂ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿ, ಕ್ಲೀನ್ ಸ್ವೀಪ್ ಮಾಡಿತು. ಇಂತಹ ಅವಮಾನಕರ ಸೋಲಿನ ನಂತರ, ವೈಭವ್ ಸೂರ್ಯವಂಶಿಗೆ ಐರ್ಲೆಂಡ್ ಪ್ರವಾಸದಲ್ಲಿ ಏಕೆ ಅವಕಾಶ ನೀಡಲಿಲ್ಲ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಆದ್ರೆ, ಈ ಬಗ್ಗೆ ತಂಡದ ಮ್ಯಾನೇಜ್​ಮೆಂಟ್​ ವೈಭವ್​​ನ ಕಣಕ್ಕಿಳಿಸುವುದಕ್ಕೆ ಯಾವುದೇ ಆತುರವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ರಿಯಾನ್ ಟೆನ್ ಡಾಸ್ಚೇಟ್ ಹೇಳಿದ್ದೇನು?

ಮುಂದುವರೆದು ಮಾತನಾಡಿರುವ ಅವರು, ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ರೆ, ನೀವು ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಬೇಕೆಂದು ಹೇಳುವುದು ಸುಲಭವಲ್ಲ, ಈ ಹೊಸ ತಂಡದಲ್ಲಿ ಆಟಗಾರರಿಗೆ ದೀರ್ಘಾವಧಿಯ ಅವಕಾಶವನ್ನು ನೀಡಲು ಮ್ಯಾನೇಜ್‌ಮೆಂಟ್ ಬಯಸುತ್ತದೆ ಎಂದು ​ ರಿಯಾನ್ ಟೆನ್ ಡಾಸ್ಚೇಟ್ ಹೇಳಿದರು.

ವೈಭವ್​​ ತಮ್ಮ ಸಮಯಕ್ಕಾಗಿ ಕಾಯಬೇಕು

ಆಟಗಾರರಿಗೆ ಆತ್ಮವಿಶ್ವಾಸವನ್ನು ನೀಡುವುದು ಮತ್ತು ಅವರಿಗೆ ಸರಿಯಾದ ಸಂದೇಶವನ್ನು ಕಳುಹಿಸುವುದು ನಮಗೆ ಮುಖ್ಯವಾಗಿದೆ. ಅವರು ತಂಡದಲ್ಲಿ ದೀರ್ಘಾವಧಿಯ ಓಟವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ. ವೈಭವ್ ಎಷ್ಟೇ ಸಿದ್ಧರಾಗಿದ್ದರೂ ಮತ್ತು ಅವರ ಆಟವನ್ನು ನೋಡಲು ನಾವೆಲ್ಲರೂ ಎಷ್ಟೇ ಉತ್ಸುಕರಾಗಿದ್ದರೂ ಅವರು ಇತರ ಆಟಗಾರರಂತೆ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ. ಹಾಗಾಗೀ ವೈಭವ್​​ ಅವರು ತಮ್ಮ ಸಮಯಕ್ಕಾಗಿ ಕಾಯಬೇಕಾಗುತ್ತದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಸೋಲಿಗೆ ಅಚ್ಚರಿ ಕಾರಣ ಕೊಟ್ಟ ಕ್ಯಾಪ್ಟನ್!

ಬ್ಯಾಟಿಂಗ್ ವೈಫಲ್ಯವೇ ನಮ್ಮ ಸೋಲಿಗೆ ಕಾರಣವಾಯ್ತು ಎಂದು ಟೀಂ ಇಂಡಿಯಾ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಅಲ್ಲದೇ ಐರ್ಲೆಂಡ್ ತಮಗಿಂತ ಚೆನ್ನಾಗಿ ಆಡ್ತು ಎಂದು ಒಪ್ಪಿಕೊಂಡಿದ್ದಾರೆ.  ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಐರ್ಲೆಂಡ್ ತಮಗಿಂತ ಉತ್ತಮ ಪ್ರದರ್ಶನ ನೀಡಿದೆ. ನಿಜ ಹೇಳಬೇಕು ಎಂದರೇ ಇದು ನಮಗೆ ಉತ್ತಮ ಸರಣಿ ಅಲ್ಲ. ಆದರೆ ಐರ್ಲೆಂಡ್ ಟೀಂ ಅದ್ಭುತವಾಗಿ ವೃತ್ತಿಪರ ಕೌಶಲ್ಯಗಳನ್ನು ತೋರಿದೆ. ಪಿಚ್ ಹೇಗೆ ವರ್ತಿಸುತ್ತದೆ ಎಂದು ಅರ್ಥ ಮಾಡಿಕೊಂಡಿದ್ದರು. ಅದೇ ರೀತಿ ಫೀಲ್ಡಿಂಗ್ ಕೂಡ ಅತ್ಯುತ್ತಮವಾಗಿ ಮಾಡಿದೆ. ತಂಡದ ಒಟ್ಟು ಪ್ರದರ್ಶನದಿಂದ ಇಂದು ಗೆಲುವು ಸಿಕ್ಕಿದೆ. ಅವರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed