ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಅಗ್ರ ಐದು ಕಿರಿಯ ಪುರುಷ ಆಟಗಾರರ ಪಟ್ಟಿಯಲ್ಲಿ ವೈಭವ್ ಅಗ್ರಸ್ಥಾನಕ್ಕೇರಿದ್ದಾರೆ. ವೈಭವ್ ಸೂರ್ಯವಂಶಿ ತಮ್ಮ 15 ವರ್ಷ 121 ದಿನಗಳಲ್ಲಿ (ಜಿಂಬಾಬ್ವೆ, ಟಿ20) ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 17 ವರ್ಷ 112 ದಿನಗಳಲ್ಲಿ (ಇಂಗ್ಲೆಂಡ್ ವಿರುದ್ಧ, ಟೆಸ್ಟ್), ರವಿಶಾಸ್ತ್ರಿ 18 ವರ್ಷ 295 ದಿನಗಳಲ್ಲಿ (ನ್ಯೂಜಿಲೆಂಡ್ ವಿರುದ್ಧ, ಏಕದಿನ), ಯುವರಾಜ್ ಸಿಂಗ್ 18 ವರ್ಷ 300 ದಿನಗಳಲ್ಲಿ (ಆಸ್ಟ್ರೇಲಿಯಾ ವಿರುದ್ಧ, ಏಕದಿನ) ವಯಸ್ಸಿನಲ್ಲಿ ಹಾಗೂ ಪೃಥ್ವಿ ಶಾ 18 ವರ್ಷ 331 ದಿನಗಳು (ವೆಸ್ಟ್ ಇಂಡೀಸ್ ವಿರುದ್ಧ, ಟೆಸ್ಟ್) ವಯಸ್ಸಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.














