Last Updated:
ಅಮೆರಿಕದ ಯುದ್ಧಕ್ಕೆ ಸಿದ್ಧತೆಯ ಜೊತೆಗೆ, ಇಂದು ಟ್ರಂಪ್ ನೀಡಿರುವ ಹೇಳಿಕೆಯು ಇರಾನ್‌ಗೂ ಆಕ್ರೋಶವನ್ನುಂಟು ಮಾಡಿದೆ. ಇದು ಅತ್ಯಂತ ಆಕ್ರಮಣಕಾರಿ ಪ್ರತಿದಾಳಿಗೆ ಸಿದ್ಧವಾಗಿದೆ ಎನ್ನುವುದನ್ನ ಸೂಚಿಸಿದೆ. ಇರಾನ್‌ನ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿ ಮತ್ತು ಮುಖ್ಯಸ್ಥ ಅಡ್ಮಿರಲ್ ಹಬಿಬೊಲ್ಲಾ ಸಯ್ಯರಿ ಅಮೆರಿಕಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಜೊತೆಗಿನ ಕದನ (US-Iran Ceasefire) ವಿರಾಮ ಮುರಿದ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಟ್ರಂಪ್ (Donald Trump) ಈಗ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಇಂದು ರಾತ್ರಿ ಅಮೆರಿಕದ ಸೇನೆ ಇರಾನ್ ಮೇಲೆ ದಾಳಿ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಅಮೆರಿಕ ಇರಾನ್ ಮೇಲೆ ಮತ್ತೊಂದು ಮಾರಕ ದಾಳಿ ನಡೆಸುವ ಸಾಧ್ಯತೆ ಇದೆ. ಈ ಭಯಾನಕ ಹೇಳಿಕೆಯ ನಂತರ, ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಯುದ್ಧವಿಮಾನಗಳ ಭಾರೀ ಚಲನೆ ಪ್ರಾರಂಭವಾಗಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ನಡೆಸು ಸಾವು ನೋವಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಐಡಿಎಫ್ ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಇಸ್ರೇಲ್ ಈಗಾಗಲೇ ಘೋಷಿಸಿದೆ. ಅತ್ತ ಇರಾನ್ ಕೂಡ ನಾವು ಯಾವುದಕ್ಕೂ ಹೆದರುವುದಿಲ್ಲ ಎಂಬ ಮನೋಭಾವವನ್ನು ಪ್ರದರ್ಶಿಸುತ್ತಿದೆ.
ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣವು ಯುದ್ದ ಸಂಬಂಧಿತ ಚಟುವಟಿಕೆ ಶುರುವಾಗಿವೆ. ವರದಿಗಳ ಪ್ರಕಾರ, ಯುದ್ಧದ ಸಮಯದಲ್ಲಿ ಇಸ್ರೇಲ್‌ಗೆ ಆಗಮಿಸಿದ ಅಮೇರಿಕನ್ ಫೈಟರ್ ಜೆಟ್‌ಗಳ ದೊಡ್ಡ ಫ್ಲೀಟ್ ಇನ್ನೂ ಈ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ. ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರನ್ನು ಈ ಬಗ್ಗೆ ನೇರವಾಗಿ ಪ್ರಶ್ನಿಸಿದಾಗ, ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಯುದ್ಧದ ಉತ್ತುಂಗದಲ್ಲಿ ಇದ್ದ ಸಮಯದಲ್ಲಿದ್ದ ಅಮೆರಿಕದ ವಿಮಾನಗಳಲ್ಲಿ ಶೇ.50 ರಷ್ಟು ಇನ್ನೂ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿಯೇ ಇವೆ ಎಂದು ಪ್ರಾಧಿಕಾರದ ಅಧ್ಯಕ್ಷರು ಬಹಿರಂಗಪಡಿಸಿದ್ದಾರೆ. ಮತ್ತೆ ಯುದ್ದ ನಡೆಸುವುದರ ಬಗ್ಗೆ ಮೊದಲೇ ಟ್ರಂಪ್ ನಿರ್ಧರಿಸಿದ್ದು, ಅದಕ್ಕಾಗಿ ವಿಮಾನಗಳನ್ನ ಇಸ್ರೇಲ್ನಲ್ಲಿಯೇ ಇರಿಸಿದ್ದರು ಎಂಬುದು ಬೆಳಕಿಗೆ ಬಂದಿವೆ. ಟ್ರಂಪ್ ಇರಾನ್ ಅನ್ನು ಸಂಪೂರ್ಣವಾಗಿ ಸುತ್ತುವರೆದಿದ್ದಾರೆ ಮತ್ತು ಅನಿರೀಕ್ಷಿತ ದಾಳಿಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ ಇದು ಪುರಾವೆಯಾಗಿದೆ.
ಅಮೆರಿಕದ ಯುದ್ಧಕ್ಕೆ ಸಿದ್ಧತೆಯ ಜೊತೆಗೆ, ಇಂದು ಟ್ರಂಪ್ ನೀಡಿರುವ ಹೇಳಿಕೆಯು ಇರಾನ್‌ಗೂ ಆಕ್ರೋಶವನ್ನುಂಟು ಮಾಡಿದೆ. ಇದು ಅತ್ಯಂತ ಆಕ್ರಮಣಕಾರಿ ಪ್ರತಿದಾಳಿಗೆ ಸಿದ್ಧವಾಗಿದೆ ಎನ್ನುವುದನ್ನ ಸೂಚಿಸಿದೆ. ಇರಾನ್‌ನ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿ ಮತ್ತು ಮುಖ್ಯಸ್ಥ ಅಡ್ಮಿರಲ್ ಹಬಿಬೊಲ್ಲಾ ಸಯ್ಯರಿ ಅಮೆರಿಕಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಪಡೆಗಳು ಇರಾನ್‌ನ ದಕ್ಷಿಣ ಕರಾವಳಿಯಲ್ಲಿ ಕಾಲಿಡಲು ಧೈರ್ಯ ಮಾಡಿದರೆ, ಪರಿಣಾಮಗಳು ಭೀಕರವಾಗಿರುತ್ತವೆ ಎಂದು ಅಡ್ಮಿರಲ್ ಸಯ್ಯರಿ ಗುಡುಗಿದ್ದಾರೆ. “ಇರಾನಿನ ನೆಲ ಅಥವಾ ಅದರ ತೀರದಲ್ಲಿ ಕಾಲಿಡುವ ಯಾವುದೇ ಸೈನ್ಯವು ಭಯಾನಕ ನರಕವನ್ನು ಪ್ರವೇಶಿಸಿದಂತೆ, ಅಲ್ಲಿಂದ ಜೀವಂತವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಘೋಷಿಸಿದ್ದಾರೆ.
ಇರಾನ್‌ನ ಈ ವರ್ತನೆ, ಅಮೆರಿಕ ಇಂದು ರಾತ್ರಿ ದಾಳಿ ಮಾಡಿದರೆ, ಈ ಯುದ್ಧವು ಕೇವಲ ಏಕಪಕ್ಷೀಯವಾಗಿರದೆ, ಇಡೀ ಜಗತ್ತನ್ನೇ ಆವರಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.
ತನ್ನ ಮಿಲಿಟರಿ ಶಕ್ತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಇರಾನಿನ ಅಡ್ಮಿರಲ್ ಹಬಿಬೊಲ್ಲಾ ಸಯಾರಿ, ಟ್ರಂಪ್ ರನ್ನು ಅಪಹಾಸ್ಯ ಮಾಡುವ ಮತ್ತು ಕೆಣಕುವಲ್ಲಿ ಅವಕಾಶವನ್ನ ತಪ್ಪಿಸಿಕೊಂಡಿಲ್ಲ. ಡೊನಾಲ್ಡ್ ಟ್ರಂಪ್ ಈ ಹಿಂದೆ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುತ್ತೇವೆ, ಇರಾನಿನ ತೀರಗಳ ಮೇಲೆ ತನ್ನ ಭಯವನ್ನ ಹೇರುವ ಬಗ್ಗೆ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಅಪಾಯಕಾರಿ ಯುದ್ಧನೌಕೆಗಳನ್ನು ನಿಯೋಜಿಸುವ ಬಗ್ಗೆ ಬೆದರಿಕೆ ನೀಡಿದ್ದರು. ಆದರೆ ಈ ಹಕ್ಕುಗಳು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದರು. ಟ್ರಂಪ್ ನಮ್ಮನ್ನ ಹತ್ತಿಕ್ಕುತ್ತೇವೆ ಎಂಬ ಕಲ್ಪನೆಯಲ್ಲಿ ಬದುಕುತ್ತಿರಬಹುದು ಮತ್ತು ಇರಾನ್ ವೆನೆಜುವೆಲಾ ಅಥವಾ ಇತರ ದುರ್ಬಲ ದೇಶಗಳಂತೆ ಭಾವಿಸುತ್ತಿರಬಹುದು, ಆದರೆ ಇರಾನ್ ಅವರ ಊಹಿಸುವಂತಿಲ್ಲ ಎಂದು ವಾರ್ನಿಂಗ್ ನೀಡಿದ್ದಾರೆ.













