Last Updated:
Urfi Javed: ನಟಿ ಉರ್ಫಿ ಜಾವೇದ್ ಅವರು ನಟನ ವಿರುದ್ಧ ಗರಂ ಆಗಿದ್ದು ಯಾಕೆ? ಡಾಲಿ ಜಾವೇದ್ಗೆ ಬೆದರಿಕೆ ಹಾಕಿದ್ಯಾರು? ಆಟ ಫೈಟ್ ಆಯ್ತಾ?
ಅಲೈಯನ್ಸ್ನ ಹಿಂದಿನ ಎಪಿಸೋಡ್ನಲ್ಲಿ ಟಾಸ್ಕ್ಗಳ ಸಮಯದಲ್ಲಿ ಕುಶಾಲ್ ಟಂಡನ್ (Kushal Tondon) ಉರ್ಫಿ ಜಾವೇದ್ನ (Urfi Javed) ತಂಗಿ ಡಾಲಿ ಜಾವೇದ್ಳನ್ನು ಟಾರ್ಗೆಟ್ ಮಾಡಿದ್ದರು. ಆಕೆಯ ವಿರುದ್ಧ ಸಂಚು ರೂಪಿಸುತ್ತಿದ್ದರು. ನಿಯಂತ್ರಿಸುತ್ತಿದ್ದರು. ಆಕೆಯನ್ನು ಆಟದಿಂದ ಹೊರಹಾಕುವುದಾಗಿಯೂ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಕುಶಾಲ್ ಅವರ ಶಾಕಿಂಗ್ ಹೇಳಿಕೆಗಳ ನಂತರ, ಉರ್ಫಿ ನಟನ ಕೆಲವೊಂದು ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪ್ರಸ್ತುತ ರಿಯಾಲಿಟಿ ಶೋ ಅಲೈಯನ್ಸ್ನಲ್ಲಿ ಭಾಗವಹಿಸುವವರಲ್ಲಿ ಒಬ್ಬರಾಗಿರುವ ಡಾಲಿ ಜಾವೇದ್, ಇತ್ತೀಚೆಗೆ ತನ್ನನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡಿದ್ದಾರೆಂದು ಹೇಳುವ ಸ್ಪರ್ಧಿಗಳ ವಿರುದ್ಧ ಮಾತನಾಡುವ ಮೂಲಕ ಸುದ್ದಿಯಾಗಿದ್ದರು.
ಇತ್ತೀಚಿನ ಎಪಿಸೋಡ್ನಲ್ಲಿ, ಕುಶಾಲ್ ಟಂಡನ್ ಮಾತಿನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಅವರ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಒಳಸಂಚು ರೂಪಿಸುತ್ತಿದ್ದಾರೆ, ಕಾರ್ಯಕ್ರಮದಿಂದ ಹೊರದಬ್ಬುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಘಟನೆಗಳು ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಯಿತು. ಉರ್ಫಿ ಈಗ ತನ್ನ ತಂಗಿಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.
ಕುಶಾಲ್ ಅವರ ವರ್ತನೆ ಮತ್ತು ಹಕ್ಕು ಸಾಧಿಸುವ ಸ್ವಭಾವನ್ನು ಉರ್ಫಿ ಬಲವಾಗಿ ಪ್ರಶ್ನಿಸಿದರು. ಅವರ ಸಹೋದರಿಯ ವಿರುದ್ಧ ನಟನ ಇತ್ತೀಚಿನ ನಡವಳಿಕೆಯನ್ನು ಉರ್ಫಿ ಪ್ರಶ್ನಿಸಿದರು.
“ಕುಶಾಲ್ ಅವನು ಈ ಕಾರ್ಯಕ್ರಮದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಅವನು ಏನು ಹೇಳಿದರೂ ಅದು ನಡೆಯುತ್ತದೆ ಎಂದು ಭಾವಿಸುತ್ತಾನೆ. ನಾನು ಅವಳನ್ನು ಹೊರಹಾಕುತ್ತೇನೆ ಅಂತಾನೆ. ಇದು ನಿನ್ನ ಚಿಕ್ಕಪ್ಪನ ಶೋನಾ ಇದು? ನೀನು ಹೇಗೆ ಯಾರನ್ನೋ ಹೊರಹಾಕುತ್ತಿ? ನೀನು ಹೇಗೆ ಇತರರನ್ನು ಹೆದರಿಸುತ್ತಿ? ಏನೇ ಇರಲಿ ಅವನಿಗೆ ಸ್ವಲ್ಪ ಅಹಂಕಾರ ಇದೆ ಎಂದು ಉರ್ಫಿ ಹೇಳಿದ್ದಾರೆ.
ಮನೆಯೊಳಗೆ ಅವನ ಡಾಮಿನೇಟಿಂಗ್ ಸ್ವಭಾವ ತುಂಬಾ ಇದೆ. “ನಾನು ಇಡೀ ಜಗತ್ತನ್ನು ಆಳುತ್ತೇನೆ ಎಂದು ಅವನು ಭಾವಿಸುತ್ತಾನೆ. ಎಲ್ಲವನ್ನೂ ಮಾಡುವವನು ತಾನೇ ಎಂದುಕೊಳ್ಳುತ್ತಾನೆ ಎಂದು ಹೇಳಿದರು.
ಮೊದಲನೆಯದಾಗಿ, ಮಿಸ್ಟರ್ ಕುಶಾಲ್, ನಿಮ್ಮ ಬಾಯಿಯಿಂದ ಮೊದಲು ವೀಳ್ಯದ ಎಲೆಯನ್ನು ಉಗುಳಿ ಮಾತನಾಡಿ. ನನಗೆ ಏನೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ವಾಸ್ತವವಾಗಿ, ಅವನು ತುಂಬಾ ಮೇಲೆ ಹಾರುತ್ತಿದ್ದಾನೆ. ಅವನು ತನಗಿಂತ ದೊಡ್ಡವರು ಎನಿಸುವವರಿಗೆ ಬಕೆಟ್ ಹಿಡಿಯುತ್ತಾನೆ ಎಂದಿದ್ದಾರೆ.
Bangalore [Bangalore],Bangalore,Karnataka













