UPSC: ತಪ್ಪು ಉತ್ತರಕ್ಕೆ ಕಟ್‌ ಆಗುತ್ತೆ ಇಷ್ಟು ಮಾರ್ಕ್ಸ್! ಯುಪಿಎಸ್‌ಸಿ ಕೀ ಉತ್ತರ ಡೌನ್‌ಲೋಡ್ ಮಾಡುವ ಮುನ್ನ ಇದನ್ನು ತಿಳಿಯಿರಿ! | | ACTPnews

ಸಾಂಕೇತಿಕ ಚಿತ್ರ!


Last Updated:

UPSC Prelims Answer Key: ಯುಪಿಎಸ್‌ಸಿ ಕೀ ಉತ್ತರ ನೋಡಿ ಖುಷಿಪಡುವ ಮುನ್ನವೇ ಕಾಯುತ್ತಿದೆ ಶಾಕ್. ನೀವು ಬರೆದ ಒಂದು ತಪ್ಪು ಉತ್ತರ ನಿಮ್ಮ ಒಟ್ಟಾರೆ ರಿಸಲ್ಟ್ ಅನ್ನೇ ಬದಲಾಯಿಸಬಹುದು. ಅಷ್ಟಕ್ಕೂ ಈ ಬಾರಿ ನೆಗೆಟಿವ್ ಮಾರ್ಕಿಂಗ್‌ನಲ್ಲಿ ಆಗಿರುವ ಆ ದೊಡ್ಡ ಬದಲಾವಣೆ ಏನು? ಡೌನ್‌ಲೋಡ್ ಮಾಡುವ ಮುನ್ನವೇ ಈ ರಹಸ್ಯ ಲೆಕ್ಕಾಚಾರ ತಿಳಿದುಕೊಳ್ಳಿ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಭಾರತೀಯ ಲೋಕಸೇವಾ ಆಯೋಗ (UPSC) 2026ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀ (Provisional Answer Key) ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ವರ್ಷ ಮೊದಲ ಬಾರಿಗೆ ಪರೀಕ್ಷೆಯ ನಂತರವೇ ತಾತ್ಕಾಲಿಕ ಉತ್ತರ ಕೀ ಪ್ರಕಟಿಸುವ ಹೊಸ ಕ್ರಮವನ್ನು UPSC ಅನುಸರಿಸುತ್ತಿದೆ. ಇದರಿಂದ ಅಭ್ಯರ್ಥಿಗಳಿಗೆ ತಮ್ಮ ಉತ್ತರಗಳನ್ನು ಪರಿಶೀಲಿಸಿ ಅಂಕಗಳನ್ನು ಅಂದಾಜಿಸಲು ಸುಲಭವಾಗಲಿದೆ.

ಕೀ ಉತ್ತರ ವೆಬ್​ಸೈಟ್​ನಲ್ಲಿ ಲಭ್ಯ!

ಈ ಉತ್ತರ ಕೀ ಯುಪಿಎಸ್ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಅಭ್ಯರ್ಥಿಗಳು ಸಾಮಾನ್ಯ ಜ್ಞಾನ (General Studies) Paper-1 ಹಾಗೂ CSAT Paper-2 ಎರಡರ ಉತ್ತರ ಕೀಗಳನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ಮೊದಲು UPSC ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ನಂತರ “Examinations” ವಿಭಾಗಕ್ಕೆ ಹೋಗಿ “Answer Keys” ಆಯ್ಕೆಮಾಡಬೇಕು. ಅಲ್ಲಿ “Civil Services Preliminary Examination 2026” ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಉತ್ತರ ಕೀ ತೆರೆದುಕೊಳ್ಳುತ್ತದೆ.

ನೆಗೆಟಿವ್​ ಮಾರ್ಕಿಂಗ್​ ಕಥೆ ಏನು?

ಈ ಉತ್ತರ ಕೀ ಪ್ರಕಟವಾದ ನಂತರ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿ ಅಂದಾಜು ಅಂಕಗಳನ್ನು ಲೆಕ್ಕ ಹಾಕಬಹುದು. GS Paper-1 ನಲ್ಲಿ ಸರಿಯಾದ ಪ್ರತಿಯೊಂದು ಉತ್ತರಕ್ಕೆ 2 ಅಂಕಗಳು ಸಿಗುತ್ತವೆ. ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಅನ್ವಯವಾಗುತ್ತದೆ. CSAT ಪೇಪರ್ ಕೇವಲ ಅರ್ಹತಾ ಪೇಪರ್ ಆಗಿದ್ದು, ಕನಿಷ್ಠ 33 ಶೇಕಡಾ ಅಂಕ ಗಳಿಸಬೇಕು.

ಆಕ್ಷೇಪಣೆ ಸಲ್ಲಿಸಲು ಅವಕಾಶ!

ಯಾವುದೇ ಪ್ರಶ್ನೆಯ ಉತ್ತರದಲ್ಲಿ ತಪ್ಪಿದೆ ಎಂದು ಅಭ್ಯರ್ಥಿಗಳಿಗೆ ಅನಿಸಿದರೆ, ಅವರು ಆಕ್ಷೇಪಣೆ ಸಲ್ಲಿಸಬಹುದು. UPSC ಇದರಿಗಾಗಿ ವಿಶೇಷ “QPRep Portal” ಅನ್ನು ತೆರೆಯಲಿದೆ. ಅಭ್ಯರ್ಥಿಗಳು ಪ್ರಶ್ನೆ ಸಂಖ್ಯೆ, ತಮ್ಮ ಆಕ್ಷೇಪಣೆ ಮತ್ತು ಆಧಾರ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸಾಮಾನ್ಯವಾಗಿ ಮೂರು ವಿಶ್ವಾಸಾರ್ಹ ಮೂಲಗಳ ಆಧಾರ ನೀಡುವುದು ಕಡ್ಡಾಯವಾಗಿರುತ್ತದೆ. ನಿಗದಿತ ದಿನಾಂಕದೊಳಗೆ ಮಾತ್ರ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ.

ಯಾರಿಂದ ನಡೆಯಲಿದೆ ಆಕ್ಷೇಪಣೆ ಪರಿಶೀಲನೆ!

ತಜ್ಞರ ಸಮಿತಿ ಈ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಉತ್ತರ ಕೀ ಬಿಡುಗಡೆ ಮಾಡಲಿದೆ. ಅಂತಿಮ ಉತ್ತರ ಕೀ ಆಧಾರದ ಮೇಲೆಯೇ ಮೌಲ್ಯಮಾಪನ ನಡೆಯುತ್ತದೆ. ಹೀಗಾಗಿ ಅಭ್ಯರ್ಥಿಗಳು ಸರಿಯಾದ ದಾಖಲೆಗಳೊಂದಿಗೆ ಮಾತ್ರ ಆಕ್ಷೇಪಣೆ ಸಲ್ಲಿಸುವುದು ಉತ್ತಮ.

ಶಿಕ್ಷಣ ತಜ್ಞರು ಹೇಳುವುದೇನು?

ಈ ಹೊಸ ಕ್ರಮದಿಂದ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ. ಇದುವರೆಗೆ ಅಭ್ಯರ್ಥಿಗಳು ಕೋಚಿಂಗ್ ಸಂಸ್ಥೆಗಳ ಅನೌಪಚಾರಿಕ ಉತ್ತರ ಕೀಗಳನ್ನೇ ಅವಲಂಬಿಸಬೇಕಾಗುತ್ತಿತ್ತು. ಆದರೆ ಈಗ ಅಧಿಕೃತ ಉತ್ತರ ಕೀ ಸಿಗುವುದರಿಂದ ಗೊಂದಲ ಕಡಿಮೆಯಾಗಲಿದೆ. ಯುಪಿಎಸ್​​ಸಿ ಪ್ರಿಲಿಮ್ಸ್ ಬರೆದಿರುವ ಅಭ್ಯರ್ಥಿಗಳು ಉತ್ತರ ಕೀ ಬಿಡುಗಡೆಯಾದ ಕೂಡಲೇ ತಮ್ಮ ಅಂಕಗಳನ್ನು ಅಂದಾಜಿಸಿ, ಅಂಕಗಳು ಕಟ್‌ಆಫ್ ಸಮೀಪದಲ್ಲಿದ್ದರೆ ತಕ್ಷಣ ಮುಖ್ಯ ಪರೀಕ್ಷೆಯ ತಯಾರಿಯನ್ನು ಆರಂಭಿಸುವಂತೆ ಸಲಹೆ ನೀಡಲಾಗಿದೆ. ಇದು ಮುಂದಿನ ಹಂತದ ಸಿದ್ಧತೆಗೆ ಹೆಚ್ಚು ಸಮಯ ಒದಗಿಸುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed