ಹೂಡಿಕೆಗೆ ಸೂಕ್ತವಾಗಿರುವ 7 ಕಾರಿಡಾರ್ಗಳು!
ದೇವನಹಳ್ಳಿ ಕಾರಿಡಾರ್: ದೀರ್ಘಕಾಲದ ಹೂಡಿಕೆಗೆ ಈ ಪ್ರದೇಶ ಅತ್ಯುತ್ತಮ ಎಂದು ಹೇಳಬಹುದು. ಏಕೆಂದರೆ ಈ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಏರೋಸ್ಪೇಸ್ ವರ್ಕ್, ಔಟರ್ ರಿಂಗ್ ರೋಡ್ ಸೇರಿದಂತೆ ಹಲವು ಯೋಜನೆಗಳು ಅಭಿವೃದ್ಧಿಗೆ ಕಾರಣವಾಗಿದೆ. ಇಲ್ಲಿ ಭೂಮಿ ಮೇಲೆ ಹೂಡಿಕೆ ಮಾಡುವುದು ಸೇಫ್ & ಬೆಸ್ಟ್ ಅಂತ ಹೇಳಲಾಗಿದೆ.
ಸರ್ಜಾಪುರ ಕಾರಿಡಾರ್: ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಯಂತಹ ಐಟಿ ಹಬ್ ಗಳನ್ನು ಹೊಂದಿರುವ ಈ ಪ್ರದೇಶವು ಭಾರೀ ವೇಗದಲ್ಲಿ ಬೆಳೆಯುತ್ತಿದೆ. ಈ ಹಿಂದೆ ಇಲ್ಲಿ ಒಂದು ಚದರ ಅಡಿ 4,500 ರೂಪಾಯಿ ಇದ್ದರೆ, ಈಗ ಇದು 8-16 ಸಾವಿರದ ವರೆಗೂ ಹೆಚ್ಚಾಗಿದೆ. ಐಟಿ ಉದ್ಯೋಗಿಗಳಿಂದ ಇಲ್ಲಿ ಬಾಡಿಗೆಗೆ ಭಾರೀ ಬೇಡಿಕೆ ಇದೆ.
ದೊಡ್ಡಬಳ್ಳಾಪುರ ಕಾರಿಡಾರ್: ವಿಮಾನ ನಿಲ್ದಾಣಕ್ಕೆ ಹತ್ತಿರದ ಪ್ರದೇಶ ಆಗಿರುವುದರಿಂದ ಈ ಪ್ರದೇಶದಲ್ಲಿ ಕಳೆದ ಐದು ವರ್ಷಗಳಿಂದ ಫ್ಲಾಟ್ ಬೆಲೆಗಳು ಶೇಕಡಾ 80-85ರಷ್ಟು ಹೆಚ್ಚಾಗಿದೆ. ಟೆಕ್ಸ್ಟೈಲ್ ಪಾರ್ಕ್, ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿಗಳು ಭಾರೀ ಪ್ರಮಾಣದಲ್ಲಿ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ.
ನೆಲಮಂಗಲ ಕಾರಿಡಾರ್: ಇ-ಕಾಮರ್ಸ್, ಗೋಡೌನ್ ಗಳಿಗೆ ನೆಲಮಂಗಲ ಕೇರಾಫ್ ಅಡ್ರೆಸ್ ಆಗಿ ಖ್ಯಾತಿ ಪಡೆದಿದೆ. ಇಂಡಸ್ಟ್ರಿಯಲ್ ಭೂಮಿ ಖರೀದಿ ಮಾಡುವವರಿಗೆ ಈ ಪ್ರದೇಶ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ತಂದುಕೊಡುವ ಉತ್ತಮ ಆಯ್ಕೆಯಾಗಿದೆ.
ಕನಕಪುರ ರೋಡ್ ಕಾರಿಡಾರ್: ಮೆಟ್ರೋ ಗ್ರೀನ್ ಲೈನ್ ಎಕ್ಸ್ ಟೆನ್ಷನ್ ಆಗುತ್ತಿರುವುದರಿಂದ ಫ್ಯಾಮಿಲಿಸ್ ಇರೋದಕ್ಕೆ ಇದು ಬೆಸ್ಟ್ ಆಯ್ಕೆ. ಇಲ್ಲಿ ಫ್ಲಾಟ್, ವಿಲ್ಲಾ ದರಗಳು ಚದರ ಅಡಿಗೆ 7 ಸಾವಿರ ರೂಪಾಯಿಯಿಂದ 14 ಸಾವಿರ ರೂಪಾಯಿ ವರೆಗೂ ಮಾರಾಟ ಆಗ್ತಿದೆ.
ಹೊಸಕೋಟೆ ಕಾರಿಡಾರ್: ವೈಟ್ ಫೀಲ್ಡ್, ಕೆಆರ್ ಪುರ, ಚೆನ್ನೈ ಎಕ್ಸ್ ಪ್ರೆಸ್ ವೇ ಬಳಿಯೇ ಇರುವುದರಿಂದ ಇದು ಲಾಜಿಸ್ಟಿಕ್ಸ್, ಇಂಡಸ್ಟ್ರಿಯಲ್ ಹಬ್ ಆಗಿ ಬದಲಾವಣೆ ಆಗ್ತಿದೆ. ಇಲ್ಲಿ ಭೂಮಿಯ ಒಂದು ಚದರ ಅಡಿ ಬೆಲೆ 2500 ರೂಪಾಯಿ ಯಿಂದ 6500 ರೂಪಾಯಿ ಇದೆ.
ರಿಯಲ್ ಎಸ್ಟೇಟ್ ಗೆ ಹೊಸ ರೆಕ್ಕೆಗಳನ್ನು ನೀಡುತ್ತಿರುವ ಈ ಮೆಗಾ ಪ್ರಾಜೆಕ್ಟ್ ಗಳು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳು ಈ ರೀತಿ ಅಭಿವೃದ್ಧಿ ಆಗಲು ಕಾರಣ ಆಗುತ್ತಿರೋದು ಭಾರೀ ಮೂಲಸೌಕರ್ಯ ಯೋಜನೆಗಳು. ಫೇಜ್ 2, ಫೇಜ್ 3 ಅಡಿ ಸುಮಾರು 175 ಕಿಲೋ ಮೀಟರ್ ದೂರ ನಡೆಯುತ್ತಿರುವ ಮೆಟ್ರೋ ವಿಸ್ತರಣೆ ಇತರೇ ಪ್ರದೇಶಗಳಿಗೆ ಸಂಪರ್ಕ ಸಾಧಿಸುತ್ತಿದೆ. ಇದಕ್ಕೆ ಪೂರಕವಾಗಿ 73 ಕಿಲೋ ಮೀಟರ್ ಪೆರಿಫೆರಲ್ ರಿಂಗ್ ರೋಡ್ (ಒಆರ್ಆರ್) ಹಾಗೂ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ 400 ಕಿಲೋ ಮೀಟರ್ ದೂರದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್ಟಿಆರ್ಆರ್) ಯೋಜನೆಗಳು ಸಾರಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಲಿವೆ.
(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)












