Pavithra Gowda: ‘ನನ್ನ ಮೇಲಿನ ಆರೋಪಗಳೆಲ್ಲ ಸುಳ್ಳು’ ಎಂದ ಪವಿತ್ರಾ ಗೌಡ, ಇಂದೇ ಜಾಮೀನು ಅರ್ಜಿ ವಿಚಾರಣೆ, ಏನಾಗುತ್ತೆ ಬೇಲ್ ಭವಿಷ್ಯ? | Renukaswamy case darshan pavithra | | ACTPnews

ರೇಣುಕಾಸ್ವಾಮಿ-ಪವಿತ್ರಾ ಗೌಡ


Last Updated:

Pavithra Gowda: ಪವಿತ್ರಾ ಗೌಡ ಅರೆಸ್ಟ್ ಆಗಿ 1 ವರ್ಷವಾಗಿದೆ. ಇನ್ನಾದರೂ ಬೇಲ್ ಸಿಗುತ್ತಾ? ನನ್ನ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದ ಪವಿತ್ರಾ ಬೇಲ್ ಭವಿಷ್ಯ ಏನಾಗುತ್ತೆ?

ರೇಣುಕಾಸ್ವಾಮಿ-ಪವಿತ್ರಾ ಗೌಡ
ರೇಣುಕಾಸ್ವಾಮಿ-ಪವಿತ್ರಾ ಗೌಡ

ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ಪವಿತ್ರಾ ಗೌಡಗೆ (Pavithra Gowda) ಸ್ವಲ್ಪ ರಿಲೀಫ್ ಸಿಕ್ಕಿದೆ. ಪರಪ್ಪನ ಅಗ್ರಹಾರದಲ್ಲಿ 30 ಮಂದಿ ಕೈದಿಗಳ ನಡುವೆ ಸಂಕಷ್ಟಕ್ಕೆ ಸಿಲುಕಿದ್ದ ಪವಿತ್ರಾ ಗೌಡಗೆ ಇದೀಗ ಆ ಬ್ಯಾರಕ್​ನಿಂದ ಬಿಡುಗಡೆ ಭಾಗ್ಯ ಲಭಿಸಿದೆ. ಇದೀಗ ಆರೋಪಿಯನ್ನ ಜೈಲು ಅಧಿಕಾರಿಗಳು ಮತ್ತೊಂದು ಬ್ಯಾರಕ್​​ಗೆ ಶಿಫ್ಟ್ ಮಾಡಿದ್ದು, ಪವಿತ್ರಾ ಗೌಡ ಫುಲ್​ ಖುಷ್ ಆಗಿದ್ದಾರೆ. ಆದರೆ ಚಿಂತೆ ಇನ್ನೂ ಮುಗಿದಿಲ್ಲ!

ಹೌದು ಪವಿತ್ರಾ ಗೌಡಗೆ ಇಷ್ಟಪಟ್ಟಂತೆ ಬ್ಯಾರಕ್ ಸಿಕ್ಕಿರಬಹುದು. ಆದರೆ ಬ್ಯಾರಕ್ ಸಿಕ್ಕಿದಷ್ಟು ಸುಲಭವಾ ಬೇಲ್ ಸಿಗೋದು? ಸದ್ಯ ಪವಿತ್ರಾ ಗೌಡ ಸಲ್ಲಿಸಿದ ಅರ್ಜಿಯ ವಿಚಾರಣೆಯೂ ಇಂದೇ ನಡೆಯಲಿದೆ.

ರೇಣುಕಾಸ್ವಾಮಿಯ ಕೊಲೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪವಿತ್ರಾ ಗೌಡ ಅರೆಸ್ಟ್ ಆಗಿ ಒಂದು ವರ್ಷ ಕಳೆದ ಹಿನ್ನಲೆ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ನೀಡಿದ ಕಾರಣಗಳೇನು?

ತಾಯಿ ಆರೋಗ್ಯದ ಸಮಸ್ಯೆ, ಮಗಳ ಆರೈಕೆ ಮಾಡುವುದಿದೆ. ಹಾಗಾಗಿ ಜಾಮೀನು ನೀಡಬೇಕು ಎಂದು ಕೇಳಿದ್ದಾರೆ.

ತನ್ನ ಆರೋಗ್ಯ ಸಮಸ್ಯೆಯೂ ಇದೆ. ಹಾಗೆಯೇ ತನ್ನ ಮೇಲಿನ ಆರೋಪಗಳೆಲ್ಲವು ಸುಳ್ಳು ಎಂದು ಅರ್ಜಿಯಲ್ಲಿ ಪವಿತ್ರಾ ಗೌಡ ಹೇಳಿದ್ದಾರೆ. ಈ ಅರ್ಜಿಯನ್ನು 59ನೇ ಸೆಷನ್ಸ್ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ಪ್ರಜ್ವಲ್ ರೇವಣ್ಣ ಬಳಿ ಫೋನ್​ ಪತ್ತೆಯಾದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಹಾಗೂ ಕೈದಿ ಬ್ಯಾರಕ್​​ಗಳನ್ನ ಬದಲಿಸಲಾಯ್ತು. ಈ ವೇಳೆ ಪವಿತ್ರಾ ಗೌಡ ಅವರನ್ನ 30 ಮಂದಿ ಇರುವ ಸೆಲ್​​ಗೆ ಶಿಫ್ಟ್ ಮಾಡಿದ್ರು. ಅಲ್ಲೇ ಪವಿತ್ರಾ ಗೌಡಗೆ ನಿಜ ನರಕದ ದರ್ಶನವಾಗಿದೆ. ಬೇಸತ್ತ ಪವಿತ್ರಾ ಬೇರೆ ಸೆಲ್​​ಗೆ ಶಿಫ್ಟ್ ಮಾಡುವಂತೆ ಕೋರ್ಟ್​ ಮೊರೆ ಹೋಗಿದ್ರು.

ಇದೀಗ ಬೇರೆ ಬ್ಯಾರಕ್​ಗೆ ಪವಿತ್ರಾ ಶಿಫ್ಟ್​

ಪವಿತ್ರಾ ಗೌಡ ಅವರನ್ನ ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿತ್ತು. ಕೋರ್ಟ್ ಸೂಚನೆಯಂತೆ ನಾಲ್ಕೈದು ಮಂದಿ ಕೈದಿಗಳಿರುವ ಬ್ಯಾರಕ್​​ಗೆ ಪವಿತ್ರಾ ಗೌಡ ಅವರನ್ನ ಶಿಫ್ಟ್ ಮಾಡಲಾಗಿದೆ. ಕೋರ್ಟ್ ಆದೇಶದಂತೆ ಕಡಿಮೆ ಜನಸಾಂದ್ರತೆ ಇರುವ ಬ್ಯಾರಕ್​ಗೆ ಇದೀಗ ಪವಿತ್ರಾ ಗೌಡ ಅವರನ್ನ ಶಿಫ್ಟ್ ಮಾಡಲಾಗಿದ್ದು, ದರ್ಶನ್ ಗೆಳತಿಗೆ ಇದು ಕೊಂಚ ಸಮಾಧಾನ ತಂದಿದೆ.

ವರದಿ: ಮುನಿರಾಜು ಕೆಜಿ, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed