Last Updated:
ಟಾಕ್ಸಿಕ್ ಚಿತ್ರವನ್ನ ಉಪೇಂದ್ರ ಮೆಚ್ಚಿಕೊಂಡಿದ್ದಾರೆ. ಹೊಸ ಲೋಕ ಮತ್ತು ಹೊಸ ಅನುಭವ ಅಂತಲೂ ಬರೆದುಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಟಾಕ್ಸಿಕ್ ಚಿತ್ರ (Toxic Movie) ನೋಡಿದ್ದಾರೆ. ಇವರು ಸಾಕಷ್ಟು ಪ್ರಯೋಗಳನ್ನ ಸಿನಿಮಾದಲ್ಲಿ ಮಾಡಿದ್ದಾರೆ. ಯಶ್ ಮತ್ತು ಗೀತು ಮೋಹನ್ದಾಸ್ ಕಲ್ಪನೆಯ ಈ ಚಿತ್ರದಲ್ಲೂ ಒಂದು ಹೊಸ ಪ್ರಯೋಗ ಆಗಿದೆ. ಹಾಗಾಗಿಯೆ ಉಪೇಂದ್ರ (Upendra) ಅವರಿಗೆ ಈ ಚಿತ್ರ ಹೊಸ ಅನುಭವ ಕೊಟ್ಟಿದೆ. ಚಿತ್ರ ನೋಡಿದ್ಮೇಲೆ ಉಪೇಂದ್ರ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. ಯಶ್ಗೂ (Yash) ವಿಶ್ ಮಾಡಿದ್ದಾರೆ. ಇಡೀ ತಂಡಕ್ಕೂ ಮನಸಾರೆ ವಿಶ್ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














