Last Updated:
ಉನ್ಮಾಧಮ್ ಸಿನಿಮಾದಲ್ಲಿ ಮಲಯಾಳಂನ ಜನಪ್ರಿಯ ನಟ ಕುಂಚಾಕೊ ಬೋಬನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಬನ್, ಪೊಲೀಸ್ ಕಾನ್‌ಸ್ಟೆಬಲ್ ಆಗಿ ನಟಿಸಿದ್ದು, ಪಾತ್ರಕ್ಕೆ ತಕ್ಕಂತೆ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
ಮಲಯಾಳಂ ಚಿತ್ರರಂಗವು ವಿಭಿನ್ನ ಕಥಾಹಂದರ, ಊಹಿಸಲು ಸಾಧ್ಯವಾಗದ ತಿರುವುಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗಳಿಗೆ ಮಲಯಾಳಂನಲ್ಲಿ ವಿಶೇಷ ಅಭಿಮಾನಿ ಬಳಗವಿದೆ. ಇದೇ ಸಾಲಿಗೆ ಸೇರುವ ಉನ್ಮಾಧಮ್ (Unmadham) ಸಿನಿಮಾ ಇದೀಗ ಚಿತ್ರಮಂದಿರಗಳ ಬಳಿಕ OTT ವೇದಿಕೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಕುಂಚಾಕೊ ಬೋಬನ್ (Kunchacko Boban) ಮತ್ತು ಲಿಜೋಮೋಲ್ ಜೋಸ್ (Lijomol Jose) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಜುಲೈ 31, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಸೆಪ್ಟೆಂಬರ್‌ನಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆರಂಭವಾಗಲಿದೆ.














