Last Updated:
Trisha: ತಮಿಳಿನ ಸ್ಟಾರ್ಗಳಿಗೆ ತ್ರಿಶಾ ಲಕ್ಕಿ ಚಾರ್ಮ್? ವಿಜಯ್ ಲಿಯೋ ಸಿನಿಮಾನ ಈಗ ನೆನಪಿಸಿಕೊಂಡಿದ್ದೇಕೆ ನಟಿ?
ನಟಿ ತ್ರಿಶಾ ಅಭಿನಯದ ಕರುಪ್ಪು ಸಿನಿಮಾ (Karuppu Movie) ಸೂಪರ್ ಹಿಟ್ ಆಗುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆ ಮಾಡುತ್ತಿದೆ. ಸಿನಿಮಾ ಉತ್ತಮ ಪ್ರಶಂಸೆ ಗಳಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿರುವಾಗಲೇ ತ್ರಿಶಾ (Trisha) ಒಂದು ಇನ್ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದಾರೆ.
ನಟಿ ತ್ರಿಶಾ ಅವರು ಚಿತ್ರರಂಗದಲ್ಲಿ 20 ವರ್ಷಗಳಿಂದಲೂ ಹೀರೋಯಿನ್ ಆಗಿಯೇ ಇದ್ದಾರೆ. ಅವರು ಇನ್ನೂ ಪೋಷಕ ಪಾತ್ರಕ್ಕೆ ಶಿಫ್ಟ್ ಆಗಿಲ್ಲ. ಹೀರೋಯಿನ್ ಆಗಿಯೇ ಬೇಡಿಕೆ ಉಳಿಸಿಕೊಂಡಿರುವ ಕೆಲವೇ ನಟಿಯರಲ್ಲಿ ತ್ರಿಶಾ ಕೂಡಾ ಒಬ್ಬರು.
ಅವರ ಕರುಪ್ಪು ಸಿನಿಮಾ ಹಿಟ್ ಆಗಿದೆ. ಹಿಟ್ ಇಲ್ಲದೆ ಕಂಗೆಟ್ಟಿದ್ದ ಸೂರ್ಯಗೆ ತ್ರಿಶಾ ಲಕ್ಕಿ ಚಾರ್ಮ್ ಆಗಿದ್ದಾರೆ. ಇನ್ನು ಅಜಿತ್ ಅವರ ಗುಡ್ಬ್ಯಾಡ್ ಅಗ್ಲಿ ಸಿನಿಮಾ ಹಿಟ್ ಆಗದಿದ್ದರೂ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಕಮಾಲ್ ಮಾಡಿದೆ. ವಿಜಯ್ ಅವರ ಕೆರಿಯರ್ನ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾ ಲಿಯೋದಲ್ಲಿಯೂ ತ್ರಿಶಾ ಇದ್ದಾರೆ. ಟಾಪ್ ಹೀರೋಗಳ ಅತ್ಯಧಿಕ ಕಲೆಕ್ಷನ್ ಸಿನಿಮಾಗಳಲ್ಲಿ ತ್ರಿಶಾ ಅವರೇ ಹೀರೋಯಿನ್. ಇದು ನಟಿಗೆ ಲಕ್ಕಿ ಚಾರ್ಮ್ ಫೇಮ್ ತಂದುಕೊಟ್ಟಿದೆ.
ನಟಿ ತ್ರಿಶಾ ಅವರು ಈಗ ಇನ್ಸ್ಟಾಗ್ರಾಮ್ನಲ್ಲಿ ಒಂದು ಸ್ಟೋರಿ ಹಾಕಿಕೊಂಡಿದ್ದಾರೆ. ಆ ಸ್ಟೋರಿಯಲ್ಲಿ ಅಜಿತ್, ಸೂರ್ಯ, ವಿಜಯ್ ಸಿನಿಮಾಗಳ ಬಗ್ಗೆ ಇದೆ. ಈ ಮೂವರು ಹೀರೋಗಳ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ತ್ರಿಶಾ ಇದ್ದಾರೆ ಎನ್ನುವುದು ಹೈಲೈಟ್.

ವಿಜಯ್ ಹೈಯೆಸ್ಟ್ ಗ್ರಾಸರ್-ಲಿಯೋ, ಅಜಿತ್ ಹೈಯೆಸ್ಟ್ ಗ್ರಾಸರ್-ಜಿಬಿಯು, ಸೂರ್ಯ ಹೈಯೆಸ್ಟ್ ಗ್ರಾಸರ್ ಕರುಪ್ಪು, ಕಾಮನ್ ಫ್ಯಾಕ್ಟರ್ ಎಂದು ತ್ರಿಶಾ ಅವರ ಫೋಟೋಗಳನ್ನು ಹಾಕಲಾಗಿದೆ.

ಅಂತೂ ತ್ರಿಶಾ ಅವರ ಕ್ರೇಜ್ ಅನ್ನು ಈ ಒಂದು ಪೋಸ್ಟ್ ರಿವೀಲ್ ಮಾಡುತ್ತದೆ. 43 ವರ್ಷವಾದರೂ ತ್ರಿಶಾ ಅವರು ಹೀರೋಯಿನ್ ಆಗಿ ಕ್ರೇಜ್ ಉಳಿಸಿಕೊಂಡಿದ್ದಾರೆ ಎನ್ನುವುದು ನಿಜಕ್ಕೂ ಮೆಚ್ಚುವ ಸಂಗತಿ.
‘ಕರುಪ್ಪು’ ಚಿತ್ರದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಲಾಗಿತ್ತು. ನ್ಯೂಸ್18 ವರದಿಯ ಪ್ರಕಾರ ಆರ್.ಜೆ. ಬಾಲಾಜಿ ಕರುಪ್ಪು ಚಿತ್ರದ ಕಥೆಯನ್ನು 2023ರ ಆಗಸ್ಟ್ನಲ್ಲಿ ಶುರು ಮಾಡಿದ್ದು ಈ ಸಿನಿಮಾ ಸ್ಕ್ರಿಪ್ಟ್ ಕೇಳಿದ ಮೊದಲ ಹೀರೋ ಸೂರ್ಯ ಅಲ್ಲ, ಬದಲಾಗಿ ದಳಪತಿ ವಿಜಯ್!
ವಿಜಯ್ ಅವರ ಬಳಿ ಈ ಸ್ಕ್ರಿಪ್ಟ್ ಅನ್ನು ವಿವರಿಸಿದ್ದ ಬಾಲಾಜಿ. ಆ ಸಂದರ್ಭವನ್ನು ನೆನಪಿಸಿಕೊಂಡು ಮಾತನಾಡಿದ ಬಾಲಾಜಿ “ವಿಜಯ್ ಸರ್ಗೆ ಕಥೆ ಹೇಳಲು ಶುರು ಮಾಡಿದಾಗ, ಅವರು ಇದನ್ನು ತುಂಬಾ ಹೊಗಳಿದರು. ತಕ್ಷಣ, ‘ಈ ಸಿನಿಮಾವನ್ನು ನಾವೇ ಮಾಡೋಣವೇ?” ಎಂದು ಕೇಳಿದರು ಎಂದಿದ್ದಾರೆ.
ವಿಜಯ್ ಅವರ ಮಾತಿಗೆ ಉತ್ತರಿಸಿದ ಬಾಲಾಜಿ ಸ್ಕ್ರೀನ್ ಪ್ಲೇ ಇನ್ನಷ್ಟು ಕರೆಕ್ಷನ್ ಹೊಂದಿದ್ದು ಇದಕ್ಕಾಗಿ ಇನ್ನು ಸ್ವಲ್ಪ ಸಮಯ ಬೇಕು ಎಂದು ಕೇಳಿದ್ದರು. “ಸ್ಕ್ರಿಪ್ಟ್ ಅನ್ನು ಇನ್ನಷ್ಟು ಎಡಿಟ್ ಮಾಡುವುದಿದೆ. ನನಗೆ ಇನ್ನು ಸಮಯ ಬೇಕು ಎಂದು ಅವರಿಗೆ ಹೇಳಿದೆ” ಎಂದು ಬಾಲಾಜಿ ನೆನಪಿಸಿಕೊಂಡಿದ್ದಾರೆ.
Bangalore,Karnataka
May 25, 2026 11:01 AM IST













