Last Updated:
Viral Video: ಲಿಕ್ಕರ್ ವರ್ಲ್ಡ್ ಅಂಗಡಿಯ ಹೊರಗಿನ ಸ್ಟಾಲ್‌ನಲ್ಲಿ ವೋಡ್ಕಾ ಜೊತೆ ಐಸ್‌ಗೋಲಾ ನೀಡಲಾಗಿದೆ. ಐಸ್ ಬಾಲ್‌ಗಳ ಮೇಲೆ ಮದ್ಯವನ್ನು ಸುರಿದು ಜನರಿಗೆ ವಿತರಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Ice Vodka Balls Chandigarh: ನೀವೂ ಹಲವು ಬಗೆಯ ಐಸ್ಕ್ರೀಂ, ಜ್ಯೂಸ್, ಫುಡ್ ತಿಂದಿರಬಹುದು. ತಿನ್ನದೇ ಇದ್ರೂ ನೋಡಿಯಾದರೂ ಇರ್ತೀರಿ, ಆದರೆ ಇಲ್ಲೊಂದು ಹೊಸ ಐಟಂ ಬಂದಿದೆ. ಇದನ್ನು ಕೇಳೋದಲ್ಲ ನೋಡಿದ್ರೆ ನಿಮಗೆ ಅಚ್ಚರಿ ಅನ್ನಿಸುತ್ತೆ. ಮದ್ಯದಿಂದ ತಯಾರಿಸುವ ಈ ಐಟಂ ಈಗ ದೇಶದ ಕೆಲ ಮಾರ್ಕೆಟ್‌ಗಳಲ್ಲಿ ಸದ್ದು ಮಾಡ್ತಿದೆ.
ಸದ್ಯಕ್ಕಂತೂ ಚಂಡೀಗಢದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಈ ಹೊಸ ಟ್ರೆಂಡ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಇದರ ವಿಡಿಯೋ ಕೂಡ ವೈರಲ್ ಆಗ್ತಿದೆ. ಚಂಡೀಗಢದ ಸೆಕ್ಟರ್ 9 ರ ಹೈ-ಪ್ರೊಫೈಲ್ ಮಾರುಕಟ್ಟೆಯಲ್ಲಿರುವ ಲಿಕ್ಕರ್ ವರ್ಲ್ಡ್ ಅಂಗಡಿಯ ಹೊರಗಿನ ಸ್ಟಾಲ್‌ನಲ್ಲಿ ವೋಡ್ಕಾ ಜೊತೆ ಐಸ್‌ಗೋಲಾ ನೀಡಲಾಗಿದೆ. ಐಸ್ ಬಾಲ್‌ಗಳ ಮೇಲೆ ಮದ್ಯವನ್ನು ಸುರಿದು ಜನರಿಗೆ ವಿತರಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂದಹಾಗೆ, ಜನರಿಗೆ ಉಚಿತವಾಗಿ ವೋಡ್ಕಾ ಜೊತೆ ಐಸ್‌ಗೋಲಾ (ಸ್ಥಳೀಯವಾಗಿ ವೋಡ್ಕಾ ಮತ್ತು ಜಾಮೂನ್ ಚುಸ್ಕಿ) ವಿತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಆದರೆ, ಮದ್ಯದ ಬಾಟಲಿಗಳು ನೈಜವೋ ಅಥವಾ ಸುಳ್ಳೋ ಅನ್ನೋದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ವಿಡಿಯೋದಲ್ಲಿ ಮದ್ಯದ ಅಂಗಡಿಯ ಹೊರಗೆ ಜನರು ಗುಂಪುಗೂಡಿರುವುದನ್ನು ಮತ್ತು ಹಲವರು ಐಸ್ ಕ್ರೀಮ್ ಕಪ್ ತೆಗೆದುಕೊಳ್ಳಲು ಮುಗಿಬೀಳುವುದನ್ನು ಕಾಣಬಹುದು.
ಈ ಇಡೀ ಘಟನೆಯ ದೃಶ್ಯಗಳು ನಗರದಲ್ಲಿ ವ್ಯಾಪಕವಾಗಿ ಶೇರ್ ಆಗ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಈ ರೀತಿಯ ಘಟನೆಯನ್ನು ಟೀಕಿಸುತ್ತಿದ್ದಾರೆ, ಇದನ್ನು ಕೆಟ್ಟ ಅಭ್ಯಾಸ ಎಂದು ಕರೆಯುತ್ತಿದ್ದಾರೆ. ಪ್ರಸ್ತುತ, ಈ ವಿಷಯದ ಬಗ್ಗೆ ಆಡಳಿತ ಅಥವಾ ಅಬಕಾರಿ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆಯೂ ಬಂದಿಲ್ಲ.
May 25, 2026 11:48 AM IST













