Tri-Nation Series 2026: ಶ್ರೀಲಂಕಾ ಎ ವಿರುದ್ಧ ಸೂಪರ್​ ಓವರ್​​​ನಲ್ಲಿ ಸೋಲು ಕಂಡ ಭಾರತ! ಗೆಲ್ಲುವ ಪಂದ್ಯ ಕೈಚೆಲ್ಲಿದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ವಿರುದ್ಧ ತಂಡ 265 ರನ್​ಗಳಿಸಿತ್ತು. ಶ್ರೀಲಂಕಾ ತಂಡ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 265 ರನ್​​​​ಗಳಿಸಿ ಟೈ ಮಾಡಲಷ್ಟೇ ಶಕ್ತವಾಗಿತ್ತು.

ಭಾರತ ತಂಡ
ಭಾರತ ತಂಡ

ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka) ತಂಡಗಳ ನಡುವಿನ ಪಂದ್ಯ ಸೂಪರ್​​ ಓವರ್​​ನಲ್ಲಿ ರೋಚಕ ಅಂತ್ಯಕಂಡಿದೆ. ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ವಿರುದ್ಧ ತಂಡ 265 ರನ್​ಗಳಿಸಿತ್ತು. ಶ್ರೀಲಂಕಾ ತಂಡ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 265 ರನ್​​​​ಗಳಿಸಿ ಟೈ ಮಾಡಲಷ್ಟೇ ಶಕ್ತವಾಯಿತು. ಕೊನೆಯ ಓವರ್​​​ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು ಕೇವಲ 5 ರನ್​ ಅಗತ್ಯವಿತ್ತು. ಆದರೆ ಅರ್ಷದ್ ಖಾನ್ ಕೇವಲ 4 ರನ್​ ನೀಡಿ ಪಂದ್ಯವನ್ನ ಟೈ ಮಾಡಲು ನೆರವಾದರು. ನಂತರ ಫಲಿತಾಂಶಕ್ಕಾಗಿ ಸೂಪರ್ ಓವರ್​ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅರ್ಷದ್ ಖಾನ್ ಬೌಲಿಂಗ್​​ನಲ್ಲಿ 17 ರನ್​ಗಳಿಸಿತು. ಭಾರತ ತಂಡ ಸೂಪರ್​ ಓವರ್​​ನಲ್ಲಿ 9 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಭಾರತ ನೀಡಿದ್ದ 265 ರನ್​ಗಳ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ ಆವಿಷ್ಕಾ ಫರ್ನಾಂಡೊ ಹಾಗೂ ನಿರೋಷನ್ ಡಿಕ್ವೆಲ್ಲಾ 5 ಓವರ್​​​ಗಳಲ್ಲೇ 56 ರನ್​​​ಗಳ ಜೊತೆಯಾಟ ನಡೆಸಿದರು. ಫರ್ನಾಂಡೊ 33 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 37 ರನ್​​ಗಳಿಸಿದರು. 3ನೇ ಕ್ರಮಾಂಕದಲ್ಲಿ ಬಂದ 11 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 17 ರನ್​ಗಳಿಸಿದರು. ನಂತರ ಬಂದ ನಾಯಕ ಸಹನ್ ಅರಾಚ್ಚಿಗೆ 8, ಅಹಾನ್ ವಿಕ್ರಮಸಿಂಘೆ 6 ರನ್​​ಗಳಿಸಿ ವಿಕೆಟ್ ಒಪ್ಪಿಸಿದರು.

ಶ್ರೀಲಂಕಾ ತಂಡ 21.2 ಓವರ್​ಗಳಲ್ಲಿ 143 ರನ್​ಗಳಿಸಿ 5 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಈ ಹಂತದಲ್ಲಿ 6ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಸಮರವಿಕ್ರಮ ಹಾಗೂ ವನುಜಾ ಸಹನ್​ 51 ರನ್​ ಸೇರಿಸಿದರು. ಸಹನ್ 25 ರನ್​ಗಳಿಸಿ ಬದೋನಿಗೆ ವಿಕೆಟ್ ಒಪ್ಪಿಸಿದರು. ನಂತರ ಸಮರವಿಕ್ರಮ ಬಾಲಂಗೋಚಿಗಳಾದ ವಿಜಯಕಾಂತ್ ಜೊತೆ ಸೇರಿ 35, ಚಮಿಕಾ ಗುಣಶೇಖರ ಜೊತೆ 32 ರನ್​ ಸೇರಿಸಿ ಗೆಲುವಿನ ಸನಿಹ ತಂದರು. ಗೆಲುವಿಗೆ 5 ರನ್​​​ಗಳ ಅಗತ್ಯವಿದ್ದಾಗ ಕೊನೆಯ ಓವರ್​​ನಲ್ಲಿ ಸಮರವಿಕ್ರಮ ವಿಕೆಟ್ ಒಪ್ಪಿಸಿದರು. 113 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 93 ರನ್​​ಗಳಿಸಿದರು. ಅರ್ಷದ್ ಖಾನ್ ಕೊನೆ 4 ಎಸೆತಗಳಲ್ಲಿ 4 ರನ್​ಗಳಿಸಿ ಪಂದ್ಯವನ್ನ ಟೈ ಮಾಡಿಕೊಂಡರು.

10 ರನ್​ ಪೆನಾಲ್ಟಿಯಿಂದ ಸೋತ ಭಾರತ

ಭಾರತ ತಂಡ ಈ ಪಂದ್ಯವನ್ನ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ವಿಪ್ರಜ್ ನಿಗಮ್​ ವಾರ್ನಿಂಗ್ ನಂತರವೂ ಪಿಚ್​​ ಮೇಲೆ ರನ್ನಿಂಗ್ ಮಾಡಿದ್ದರಿಂದ ಅಂಪೈರ್ 10 ರನ್​ಗಳ ಪೆನಾಲ್ಟಿ ವಿಧಿಸಿದರು. ಇದರಿಂದ ಶ್ರೀಲಂಕಾ ತಂಡ ಮೈದಾನಕ್ಕಿಳಿಯುವ ಮುನ್ನವೇ 10 ರನ್​ ಪಡೆದುಕೊಂಡು ಇನ್ನಿಂಗ್ಸ್ ಶುರು ಮಾಡಿತು. ​​ ಒಂದು ವೇಳೆ ವಿಪ್ರಜ್ ಪಿಚ್​​ ಮೇಲೆ ರನ್​ ಮಾಡದಿದ್ದರೆ, ಆ 10 ರನ್​ ಪೆನಾಲ್ಟಿ ಉಳಿದಿದ್ದರೆ ಭಾರತ ತಂಡ ಸುಲಭವಾಗಿ ಗೆಲುವು ಸಾಧಿಸುತ್ತಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed