Last Updated:
ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ವಿರುದ್ಧ ತಂಡ 265 ರನ್ಗಳಿಸಿತ್ತು. ಶ್ರೀಲಂಕಾ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 265 ರನ್ಗಳಿಸಿ ಟೈ ಮಾಡಲಷ್ಟೇ ಶಕ್ತವಾಗಿತ್ತು.
ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka) ತಂಡಗಳ ನಡುವಿನ ಪಂದ್ಯ ಸೂಪರ್ ಓವರ್ನಲ್ಲಿ ರೋಚಕ ಅಂತ್ಯಕಂಡಿದೆ. ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ವಿರುದ್ಧ ತಂಡ 265 ರನ್ಗಳಿಸಿತ್ತು. ಶ್ರೀಲಂಕಾ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 265 ರನ್ಗಳಿಸಿ ಟೈ ಮಾಡಲಷ್ಟೇ ಶಕ್ತವಾಯಿತು. ಕೊನೆಯ ಓವರ್ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು ಕೇವಲ 5 ರನ್ ಅಗತ್ಯವಿತ್ತು. ಆದರೆ ಅರ್ಷದ್ ಖಾನ್ ಕೇವಲ 4 ರನ್ ನೀಡಿ ಪಂದ್ಯವನ್ನ ಟೈ ಮಾಡಲು ನೆರವಾದರು. ನಂತರ ಫಲಿತಾಂಶಕ್ಕಾಗಿ ಸೂಪರ್ ಓವರ್ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅರ್ಷದ್ ಖಾನ್ ಬೌಲಿಂಗ್ನಲ್ಲಿ 17 ರನ್ಗಳಿಸಿತು. ಭಾರತ ತಂಡ ಸೂಪರ್ ಓವರ್ನಲ್ಲಿ 9 ರನ್ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಭಾರತ ನೀಡಿದ್ದ 265 ರನ್ಗಳ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ ಆವಿಷ್ಕಾ ಫರ್ನಾಂಡೊ ಹಾಗೂ ನಿರೋಷನ್ ಡಿಕ್ವೆಲ್ಲಾ 5 ಓವರ್ಗಳಲ್ಲೇ 56 ರನ್ಗಳ ಜೊತೆಯಾಟ ನಡೆಸಿದರು. ಫರ್ನಾಂಡೊ 33 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 37 ರನ್ಗಳಿಸಿದರು. 3ನೇ ಕ್ರಮಾಂಕದಲ್ಲಿ ಬಂದ 11 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 17 ರನ್ಗಳಿಸಿದರು. ನಂತರ ಬಂದ ನಾಯಕ ಸಹನ್ ಅರಾಚ್ಚಿಗೆ 8, ಅಹಾನ್ ವಿಕ್ರಮಸಿಂಘೆ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಶ್ರೀಲಂಕಾ ತಂಡ 21.2 ಓವರ್ಗಳಲ್ಲಿ 143 ರನ್ಗಳಿಸಿ 5 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಈ ಹಂತದಲ್ಲಿ 6ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಸಮರವಿಕ್ರಮ ಹಾಗೂ ವನುಜಾ ಸಹನ್ 51 ರನ್ ಸೇರಿಸಿದರು. ಸಹನ್ 25 ರನ್ಗಳಿಸಿ ಬದೋನಿಗೆ ವಿಕೆಟ್ ಒಪ್ಪಿಸಿದರು. ನಂತರ ಸಮರವಿಕ್ರಮ ಬಾಲಂಗೋಚಿಗಳಾದ ವಿಜಯಕಾಂತ್ ಜೊತೆ ಸೇರಿ 35, ಚಮಿಕಾ ಗುಣಶೇಖರ ಜೊತೆ 32 ರನ್ ಸೇರಿಸಿ ಗೆಲುವಿನ ಸನಿಹ ತಂದರು. ಗೆಲುವಿಗೆ 5 ರನ್ಗಳ ಅಗತ್ಯವಿದ್ದಾಗ ಕೊನೆಯ ಓವರ್ನಲ್ಲಿ ಸಮರವಿಕ್ರಮ ವಿಕೆಟ್ ಒಪ್ಪಿಸಿದರು. 113 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 93 ರನ್ಗಳಿಸಿದರು. ಅರ್ಷದ್ ಖಾನ್ ಕೊನೆ 4 ಎಸೆತಗಳಲ್ಲಿ 4 ರನ್ಗಳಿಸಿ ಪಂದ್ಯವನ್ನ ಟೈ ಮಾಡಿಕೊಂಡರು.
ಭಾರತ ತಂಡ ಈ ಪಂದ್ಯವನ್ನ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ವಿಪ್ರಜ್ ನಿಗಮ್ ವಾರ್ನಿಂಗ್ ನಂತರವೂ ಪಿಚ್ ಮೇಲೆ ರನ್ನಿಂಗ್ ಮಾಡಿದ್ದರಿಂದ ಅಂಪೈರ್ 10 ರನ್ಗಳ ಪೆನಾಲ್ಟಿ ವಿಧಿಸಿದರು. ಇದರಿಂದ ಶ್ರೀಲಂಕಾ ತಂಡ ಮೈದಾನಕ್ಕಿಳಿಯುವ ಮುನ್ನವೇ 10 ರನ್ ಪಡೆದುಕೊಂಡು ಇನ್ನಿಂಗ್ಸ್ ಶುರು ಮಾಡಿತು. ಒಂದು ವೇಳೆ ವಿಪ್ರಜ್ ಪಿಚ್ ಮೇಲೆ ರನ್ ಮಾಡದಿದ್ದರೆ, ಆ 10 ರನ್ ಪೆನಾಲ್ಟಿ ಉಳಿದಿದ್ದರೆ ಭಾರತ ತಂಡ ಸುಲಭವಾಗಿ ಗೆಲುವು ಸಾಧಿಸುತ್ತಿತ್ತು.













