Train News: ಬೆಂಗಳೂರಿಗೆ ಹೋಗುವ ಹೊಸಪೇಟೆ ಮಂದಿಗೆ ಹಬ್ಬವೋ ಹಬ್ಬ, ರೈಲ್ವೆ ಇಲಾಖೆಯ ಈ ನಿರ್ಧಾರ ಕೇಳಿದ್ರೆ ಖುಷಿ ಪಡ್ತೀರಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ವಿಜಯಪುರ ರೈಲು ಹೆಚ್ಚುವರಿ ಕೋಚ್‌ಗಳು


Last Updated:

ಬೆಂಗಳೂರು ವಿಜಯಪುರ ರೈಲಿಗೆ ಮೇ 8ರಿಂದ 5 ಹೆಚ್ಚುವರಿ ಬೋಗಿ, ಎಸಿ, ಸ್ಲೀಪರ್ ಮತ್ತು ಜನರಲ್ ಸೇರಿಕೆ, ಪ್ರಯಾಣಿಕರ ದಟ್ಟಣೆ ಕಡಿಮೆ, ಉತ್ತರ ಕರ್ನಾಟಕ ಸಂಪರ್ಕ ಬಲಪಡಿಕೆ

ಬೆಂಗಳೂರು ವಿಜಯಪುರ ರೈಲು ಹೆಚ್ಚುವರಿ ಕೋಚ್‌ಗಳು
ಬೆಂಗಳೂರು ವಿಜಯಪುರ ರೈಲು ಹೆಚ್ಚುವರಿ ಕೋಚ್‌ಗಳು

ಬೆಂಗಳೂರು (Bengaluru) ಮತ್ತು ವಿಜಯಪುರ (Vijayapura) ನಡುವೆ ಸಂಚರಿಸುವ ರೈಲಿನಲ್ಲಿ (Train) ಜಾಗ ಸಿಗದೆ ಒದ್ದಾಡುತ್ತಿದ್ದೀರಾ? ಕನ್ಫರ್ಮ್ ಟಿಕೆಟ್ (Ticket) ಇಲ್ಲದೇ ಪ್ರಯಾಣ ಮಾಡುವುದು ನಿಮಗೆ ನರಕದಂತೆ ಅನಿಸುತ್ತಿದೆಯೇ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಇದೆ. ನೈಋತ್ಯ ರೈಲ್ವೆಯು (Railway) ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈಗ ಒಂದು ದೊಡ್ಡ ನಿರ್ಧಾರ ಮಾಡಿದೆ.

ಏನಿದು ಹೊಸ ಅಪ್‍ಡೇಟ್?

ಬೆಂಗಳೂರು-ವಿಜಯಪುರ ರೈಲಿಗೆ ಬರೋಬ್ಬರಿ 5 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರಲ್ಲಿ ಒಂದು ಎಸಿ ಕೋಚ್, ಮೂರು ಸ್ಲೀಪರ್ ಕೋಚ್‍ಗಳು ಮತ್ತು ಒಂದು ಜನರಲ್ ಬೋಗಿ ಇರಲಿವೆ. ಈ ಹೊಸ ವ್ಯವಸ್ಥೆಯು ಮೇ 8 ರಿಂದಲೇ ಜಾರಿಗೆ ಬರಲಿದೆ. ಇದರಿಂದಾಗಿ ವಾರಾಂತ್ಯದಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಟಿಕೆಟ್ ಸಿಗದೆ ಪರದಾಡುತ್ತಿದ್ದ ಸಾವಿರಾರು ಪ್ರಯಾಣಿಕರಿಗೆ ಈಗ ನೆಮ್ಮದಿ ಸಿಗಲಿದೆ ಎಂದು ಹೊಸಪೇಟೆ. ಆನ್‍ಲೈನ್ ವೆಬ್ ಸೈಟ್ ವರದಿ ಮಾಡಿದೆ.
ಯಾರಿಗೆಲ್ಲಾ ಈ ಯೋಜನೆಯಿಂದ ಲಾಭ

ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಹೊಸಪೇಟೆಯಿಂದ ಬೆಂಗಳೂರಿಗೆ ಪ್ರತಿನಿತ್ಯ ಓಡಾಡುವ ನೂರಾರು ಜನರಿಗೆ ಇದು ವರದಾನವಾಗಲಿದೆ. ಯುನೆಸ್ಕೋ ಪಾರಂಪರಿಕ ತಾಣ ಹಂಪಿಗೆ ಹೋಗುವ ಪ್ರವಾಸಿಗರಿಗೆ ಈಗ ರೈಲು ಪ್ರಯಾಣ ಮತ್ತಷ್ಟು ಆರಾಮದಾಯಕವಾಗಲಿದೆ. ಇದು ಸ್ಥಳೀಯ ಪ್ರವಾಸೋದ್ಯಮಕ್ಕೂ ಬೂಸ್ಟ್ ನೀಡಲಿದೆ.ರೈಲಿನಲ್ಲಿ ಕಿಕ್ಕಿರಿದು ತುಂಬುತ್ತಿದ್ದ ಜನದಟ್ಟಣೆ ಇನ್ಮುಂದೆ ಕಡಿಮೆಯಾಗಲಿದ್ದು, ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕೆ ದಾರಿಯಾಗಲಿದೆ.
ಕೈಗಾರಿಕಾ ಹಬ್ ಹೊಸಪೇಟೆಗೆ ಹೊಸ ಚೈತನ್ಯ

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಹೊಸಪೇಟೆಗೆ ಈ ರೈಲು ಸಂಪರ್ಕ ಬಹಳ ಮುಖ್ಯವಾಗಿದೆ. ಗಣಿಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಈಗ ರೈಲ್ವೆ ಇಲಾಖೆಯ ಈ ಸಮಯೋಚಿತ ನಿರ್ಧಾರದಿಂದ ಉತ್ತರ ಕರ್ನಾಟಕ ಮತ್ತು ರಾಜಧಾನಿ ನಡುವಿನ ಕೊಂಡಿ ಮತ್ತಷ್ಟು ಗಟ್ಟಿಯಾದಂತಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed