Last Updated:
CARRYMEN: ನಿಮ್ಮ ಶಾಪಿಂಗ್ ಬ್ಯಾಗ್ ಹೊರೋಕೆ, ಬಿಲ್ ಕಟ್ಟೋಕೆ ಕ್ಯೂನಲ್ಲಿ ನಿಲ್ಲೋಕೆ, ಕಾರ್ ತನಕ ಸಾಮಾನು ತಲುಪಿಸೋಕೆ ರಾಷ್ಟ್ರ ರಾಜಧಾನಿಯಲ್ಲಿ ‘ಪ್ರೊಫೆಶನಲ್ ಹೆಲ್ಪರ್ಸ್’ ಸಪ್ಲೈ ಮಾಡ್ತಿದೆ. ಹಾಗಾದ್ರೆ, ಈ ಪ್ರೊಫೆಶನಲ್ ಹೆಲ್ಪರ್ಸ್ ಕಂಪನಿಯ ಹಸರೇನು? ಗಂಟೆಗೆ ಅವರಿಗೆ ಎಷ್ಟು ರೂಪಾಯಿ? ನಮ್ಮ ಬೆಂಗಳೂರಿನಲ್ಲಿಯೂ ಈ ಸೇವೆ ಇದೆಯಾ? ಎಂಬುದರ ಕುರಿತ ವಿವರ ಇಲ್ಲಿದೆ.
ನವದೆಹಲಿ: ಶಾಪಿಂಗ್ಗೆ (Shopping) ಹೋಗೋಣ ಬಾ ಅಂತ ಫ್ರೆಂಡ್ ಕರೆದ್ರೆ ‘ಸುಸ್ತಾಗುತ್ತೆ, ಬ್ಯಾಗ್ ಹೊರೋಕೆ ಆಗಲ್ಲ’ ಅಂತ ನೆಪ ಹೇಳ್ತಾರಾ? ಹಾಗಾದ್ರೆ, ಈ ಸುದ್ದಿ ನಿಮಗಾಗಿ! ಯಾಕಂದ್ರೆ, ದೆಹಲಿಯ ಒಂದು ಸ್ಟಾರ್ಟಪ್ ಇದಕ್ಕೊಂದು ಸೊಲ್ಯೂಶನ್ ಕಂಡುಹಿಡಿದಿದ್ದಾರೆ. ಹೌದು, ನಿಮ್ಮ ಶಾಪಿಂಗ್ ಬ್ಯಾಗ್ ಹೊರೋಕೆ (Shopping Bag), ಬಿಲ್ ಕಟ್ಟೋಕೆ ಕ್ಯೂನಲ್ಲಿ ನಿಲ್ಲೋಕೆ, ಕಾರ್ ತನಕ ಸಾಮಾನು ತಲುಪಿಸೋಕೆ ರಾಷ್ಟ್ರ ರಾಜಧಾನಿಯಲ್ಲಿ ‘ಪ್ರೊಫೆಶನಲ್ ಹೆಲ್ಪರ್ಸ್’ (Professional Helpers) ಸಪ್ಲೈ ಮಾಡ್ತಿದೆ. ಹಾಗಾದ್ರೆ, ಈ ಪ್ರೊಫೆಶನಲ್ ಹೆಲ್ಪರ್ಸ್ ಕಂಪನಿಯ ಹಸರೇನು? ಗಂಟೆಗೆ ಅವರಿಗೆ ಎಷ್ಟು ರೂಪಾಯಿ? ನಮ್ಮ ಬೆಂಗಳೂರಿನಲ್ಲಿಯೂ ಈ ಸೇವೆ ಇದೆಯಾ? ಎಂಬುದರ ಕುರಿತ ವಿವರ ಇಲ್ಲಿದೆ.
ದೆಹಲಿಯ ಲಜಪತ್ ನಗರ ಮಾರುಕಟ್ಟೆಯಲ್ಲಿ ಜನರು ಮಾರುಕಟ್ಟೆಗೆ ಭೇಟಿ ನೀಡುವ ಸಮಯದಲ್ಲಿ ತಮ್ಮ ಬ್ಯಾಗ್ಗಳನ್ನು ಹೊತ್ತುಕೊಂಡು ಹೋಗಲು ಸಾರ್ವಜನಿಕರಿಗೆ ಸಹಾಯವಾಗುವಂತೆ, ಒಂದು ಸ್ಟಾರ್ಟ್ ಆಫ್ ಪ್ರಾರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ @YesKhush_5 ಎಂಬ ಬಳಕೆದಾರರು ಶೇರ್ ಮಾಡಿರುವ ಪೋಸ್ಟ್ ಪ್ರಕಾರ, “CARRYMEN” ಎಂದು ಲೇಬಲ್ ಮಾಡಲಾದ ಟಿ-ಶರ್ಟ್ ಧರಿಸಿದ ಪುರುಷನ ಜೊತೆಗೆ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವ ಚಿತ್ರವಿದೆ.
ಸರಳವಾಗಿ ಹೇಳುವುದಾದರೆ, ನೀವು ಮಾಲ್ಗಳಲ್ಲಿ ಅಥವಾ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವಾಗ ನಿಮ್ಮ ಭಾರವಾದ ಬ್ಯಾಗ್ಗಳನ್ನು ಹೊರಲು ಒಬ್ಬ ವ್ಯಕ್ತಿಯನ್ನು ಬಾಡಿಗೆಗೆ ಪಡೆಯಬಹುದು.

- ಇವರು ನಿಮ್ಮೊಂದಿಗೆ ಅಂಗಡಿಯಿಂದ ಅಂಗಡಿಗೆ ಬರುತ್ತಾರೆ.
- ನೀವು ಖರೀದಿಸಿದ ವಸ್ತುಗಳನ್ನು ಇವರೇ ಹಿಡಿದುಕೊಳ್ಳುತ್ತಾರೆ.
- ನಿಮ್ಮ ಕೈಗಳು ಮುಕ್ತವಾಗಿರುವುದರಿಂದ ನೀವು ಆರಾಮವಾಗಿ ಶಾಪಿಂಗ್ ಮುಂದುವರಿಸಬಹುದು.
ಗ್ರಾಹಕರು ಗಂಟೆಯ ಆಧಾರದ ಮೇಲೆ ಈ ಸಹಾಯಕರನ್ನು ಬುಕ್ಮಾಡಬಹುದು. ದೆಹಲಿಯಂತಹ ನಗರಗಳಲ್ಲಿ ಗಂಡ-ಹೆಂಡತಿ ಅಥವಾ ಸ್ನೇಹಿತರು ಶಾಪಿಂಗ್ಗೆ ಹೋದಾಗ, ಬ್ಯಾಗ್ ಹಿಡಿಯುವುದು ಒಂದು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಅದರಲ್ಲೂ, ವಿಶೇಷವಾಗಿ ಗಂಡಸರು ತಮ್ಮ ಸಂಗಾತಿಯ ಶಾಪಿಂಗ್ ಬ್ಯಾಗ್ಗಳನ್ನು ಹೊತ್ತು ಸುಸ್ತಾಗುವುದನ್ನು ನಾವು ನೋಡುತ್ತೇವೆ. ಹಾಗಾಗಿ, ಈ ಕ್ಯಾರಿಮೆನ್ ಆ ಸಮಸ್ಯೆಗೆ ಪರಿಹಾರವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿರುವ ಪೋಸ್ಟ್ ಪ್ರಕಾರ, ನಿಮ್ಮ ಸೇವೆಗೆ ಸಹಾಯಕರಾಗಿ ಬರುವ ವ್ಯಕ್ತಿಗೆ ಗಂಟೆಗೆ 149 ರೂಪಾಯಿಗಳಾಗಿದೆ. ಅದರಂತೆ, ಈ ಅಮೌಂಟ್ ಪಾವತಿಸುವ ಮೂಲಕ ಸೇವೆಯನ್ನ ಪಡೆಯಬಹುದಾಗಿದೆ.
In Lajpat, you can now pay ₹149/hr for someone to carry your bags, wait in food queues, walk you to the metro, find you a place to sit, and even set up a foldable chair.
interesting biz !! pic.twitter.com/zS5lmi5E4w— Khush Mahajan (@YesKhush_5) May 23, 2026
ಸದ್ಯ ಈ ಸೇವೆ ದೆಹಲಿಯಲ್ಲಿ ಮಾತ್ರವೇ ಇದೆ. ಆದರೆ, ಇದೇನಾದರೂ ಯಶಸ್ವಿಯಾದರೆ, ಭವಿಷ್ಯದಲ್ಲಿ ಬೆಂಗಳೂರಿನಲ್ಲಿಯೂ ಬರುವುದನ್ನು ಅಲ್ಲಗಳೆಯೋಕೆ ಸಾಧ್ಯವಿಲ್ಲ!
ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ಕೆಲವರು ತರಹವೇರಿ ಕಾಂಮೆಂಟ್ಗಳನ್ನು ನೀಡಿದ್ದಾರೆ. ಅದರಂತೆ, ಒಬ್ಬ ಬಳಕೆದಾರರು ತಮಾಷೆಯಾಗಿ, “ಇದನ್ನ ಶೇರ್ ಮಾಡಬೇಡಿ, ಅಮ್ಮನಿಗೆ ಗೊತ್ತಾದ್ರೆ, ಅವರು ನನ್ನನ್ನು ಬದಲಾಯಿಸುತ್ತಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರನಂತು, “ಇದು ಸ್ಟಾರ್ಟ್ಅಪ್ ಅಥವಾ ಮಿಲಿಯನ್ ಡಾಲರ್ ಐಡಿಯಾ ಆಗಿ ಅರ್ಹತೆ ಪಡೆಯುತ್ತದೆಯೇ ಎಂದು ಖಚಿತವಿಲ್ಲ, ಆದರೆ ಇದು ಮಾನವಶಕ್ತಿಯನ್ನು ತಪ್ಪು ದಿಕ್ಕಿನಲ್ಲಿ ತಳ್ಳುತ್ತಿದೆ!” ಎಂದು ಬರೆದಿದ್ದಾರೆ. ಇದರ ನಡುವೆ, ಕೆಲವು ಬಳಕೆದಾರರು ಭಾರತದಲ್ಲಿ ವ್ಯವಹಾರ ಮಾದರಿ ಯಶಸ್ವಿಯಾಗಬಹುದೇ ಎಂದು ಅನುಮಾನಿಸಿದ್ದಾರೆ? ಅದರಂತೆ, “ಚಿಂಡಿಚೋರ್ ಜನರಿಂದಾಗಿ ಈ ವ್ಯವಹಾರ ಭಾರತದಲ್ಲಿ ನಡೆಯುವುದಿಲ್ಲ, ಬಡ ಸಬ್ಜಿವಾಲಾ (ತರಕಾರಿಯ ಮಾರುವ ವ್ಯಕ್ತಿ) ಮತ್ತು ಸೇವಕಿಯನ್ನು ಸಹ ಬಿಡಲು ಸಾಧ್ಯವಿಲ್ಲ” ಎಂದು ಟೀಕಿಸಿದ್ದಾರೆ.
New Delhi,Delhi













