Last Updated:
ಟಾಕ್ಸಿಕ್ ಚಿತ್ರದ ಫ್ಯಾನ್ಸ್ ಶೋ ಡಿಟೈಲ್ಸ್ ರಿವೀಲ್ ಆಗಿದೆ. ಬೆಂಗಳೂರಿನ ಯಾವ ಥಿಯೇಟರ್ ಅಲ್ಲಿ ಎಷ್ಟೊತ್ತಿಗೆ ಫ್ಯಾನ್ ಶೋ ಇರುತ್ತದೆ ಅಂತ ಚಿತ್ರ ತಂಡವೇ ಹೇಳಿಕೊಂಡಿದೆ. ಇದರ ವಿವರ ಇಲ್ಲಿದೆ ಓದಿ.
ಬೆಂಗಳೂರಿನಲ್ಲಿ ಟಾಕ್ಸಿಕ್ ಚಿತ್ರದ (Toxic Movie) ಶೋ ಬೆಳಗ್ಗೆ 6 ಗಂಟೆ ಶುರು ಆಗುತ್ತಿವೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಸಿಂಗಲ್ ಥಿಯೇಟರ್ (Single Theater) ಅಲ್ಲೂ ಶೋಗಳು ಪ್ಲಾನ್ ಆಗಿವೆ. 500 ಕ್ಕೂ ಹೆಚ್ಚು ಥಿಯೇಟರ್ (Theater) ಅಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಕಪಾಲಿ ಮಾಲ್‌ನ (Kapali Mall) ಎಎಂಬಿ ಸಿನಿಮಾಸ್ ಅಲ್ಲಿ 23 ಶೋಗಳು ಇರೋ ಮಾಹಿತಿ ಇದೆ. ಇದರೊಟ್ಟಿಗೆ ಫ್ಯಾನ್ಸ್ ಶೋಗಳು ಪ್ಲಾನ್ ಆಗಿವೆ. ಮಾಧ್ಯಮ ಮಿತ್ರರಿಗೂ ಒಂದು ಶೋ ಇದೆ. ಈ ಎಲ್ಲದರ ಒಂದಷ್ಟು ವಿವರ ಇಲ್ಲಿದೆ ಓದಿ.














