Last Updated:
ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ, ಇದೀಗ ಅಧಿಕೃತ ಮಾಹಿತಿ ಹೊರ ಬಂದಿದೆ. ಆಗಸ್ಟ್-8 ರಂದು ಈ ಟ್ರೈಲರ್ ಹೊರ ಬರ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ಇದನ್ನ ರಿಲೀಸ್ ಮಾಡುವ ಪ್ಲಾನ್ ಇದೆ. ಆಗಸ್ಟ್-8 ರಂದು ಈ ಟ್ರೈಲರ್ ರಿಲೀಸ್ (Trailer Release) ಆಗುತ್ತಿದೆ. ಕೆ.ವಿ.ಎನ್. ಸಂಸ್ಥೆ ಇದನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ. ಈ ಒಂದು ವಿಷಯ ಹೇಳೋಕೆ ಒಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ಯಶ್ (Yash) ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಹಾಲಿವುಡ್ (Hollywood) ಫೀಲ್ ಅಲ್ಲಿಯೇ ಈ ಒಂದು ಪೋಸ್ಟರ್ ಇದೆ. ಇದು ಕಪ್ಪು ಮತ್ತು ಬಿಳುಪಿನಲ್ಲಿಯೇ ಇದೆ. ಇದರೊಟ್ಟಿಗೆ ಟ್ರೈಲರ್ ರಿಲೀಸ್ ಮಾಹಿತಿ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಟ್ರೈಲರ್ ರಿಲೀಸ್ ನ್ಯೂಸ್
ದೊಡ್ಡ ಮಟ್ಟದಲ್ಲಿಯೇ ಇದು ರಿಲೀಸ್ ಆಗುತ್ತಿದೆ. ಈ ಒಂದು ಟ್ರೈಲರ್ ಸುದ್ದಿ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಟ್ರೈಲರ್ ಅಲ್ಲಿ ಇನ್ನು ಏನೆಲ್ಲ ಇದೆ ಅನ್ನುವ ಕ್ಯೂರಿಯೋಸಿಟಿ ಮೂಡಿಸಿದೆ.
ಟಾಕ್ಸಿಕ್ ಚಿತ್ರದ ಟ್ರೈಲರ್ ಬೆಂಗಳೂರಿನಲ್ಲಿಯೇ ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಇದನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಟಾಕ್ಸಿಕ್ ಚಿತ್ರದ ಟ್ರೈಲರ್ ಆಗಸ್ಟ್-8 ರಂದು ರಿಲೀಸ್ ಆಗುತ್ತಿದೆ. ಇದಕ್ಕೆ ಕಾರಣವೂ ಇದೆ. ಟಾಕ್ಸಿಕ್ ಚಿತ್ರದ ಮುಹೂರ್ತ ಬೆಂಗಳೂರಿನಲ್ಲಿಯೇ ಆಗಸ್ಟ್-8 ರಂದು ಆಗಿತ್ತು.
ಆಗಸ್ಟ್-26 ರಂದು ರಿಲೀಸ್
ಈ ಹಿನ್ನೆಲೆಯಲ್ಲಿಯೇ ಚಿತ್ರದ ಟ್ರೈರಲ್ ಅನ್ನ ಆಗಸ್ಟ್-8 ರಂದು ರಿಲೀಸ್ ಮಾಡುತ್ತಿದ್ದಾರೆ. ಹಾಗೆ ಈ ಚಿತ್ರದ ಕೆಲಸ ಶುರು ಆಗಿ ಆಗಸ್ಟ್-8ಕ್ಕೆ ಎರಡು ವರ್ಷವೇ ಆಗುತ್ತದೆ ಅಂತಲೇ ಹೇಳಬಹುದು.
ಟಾಕ್ಸಿಕ್ ಚಿತ್ರ ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ಇದು ತೆರೆ ಕಾಣುತ್ತಿದೆ. ಗೀತು ಮೋಹನ್ದಾಸ್ ಇದನ್ನ ಡೈರೆಕ್ಷನ್ ಮಾಡಿದ್ದಾರೆ. ಯಶ್ ಹಾಗೂ ಕೆವಿಎನ್ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಅಲ್ಲಿಯೇ ಇದು ತಯಾರಾಗುತ್ತಿದೆ. ಆದರೆ, ಇದು ಡಬ್ ಆಗಿ ತೆಲುಗು, ತಮಿಳು, ಮಲೆಯಾಳಂ ಹೀಗೆ ಬಹು ಭಾಷೆಯಲ್ಲಿಯೇ ಇದು ರಿಲೀಸ್ ಆಗುತ್ತಿದೆ. ಹಾಗೆ ಇದೀಗ ಚಿತ್ರದ ಟ್ರೈಲರ್ ರಿಲೀಸ್ ಪೋಸ್ಟರ್ ಅಷ್ಟೆ ಕುತೂಹಲವನ್ನು ಮೂಡಿಸಿದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Aug 01, 2026 12:14 PM IST














