Toxic Movie: ರಾಯ-ರೆಬೆಕ್ಕಾ ಲವ್ ಸ್ಟೋರಿ, ಹೇಳದೇ ಉಳಿದು ಹೋದ ಭಾವಗಳ ಆಳವಾದ ಪ್ರೀತಿಯ ಗಾಯನ! | | ACTPnews

ಹೇಳದೇ ಉಳಿದು ಹೋದ ಭಾವಗಳ ಆಳವಾದ ಪ್ರೀತಿಯ ಗಾಯನ!


Last Updated:

ಟಾಕ್ಸಿಕ್ ಚಿತ್ರದಲ್ಲಿ ಒಂದು ಲವ್ ಸ್ಟೋರಿ ಇದೆ ಅನ್ನೋದು ಗೊತ್ತೇ ಇದೆ. ಆದರೆ, ಮನಮೋಹಕ ಹಾಡು ರಿಲೀಸ್ ಆದ್ಮೇಲೆ ಇನ್ನೂ ಒಂದು ಸತ್ಯ ಅರ್ಥ ಆಗಿದೆ. ಇಲ್ಲಿ ಲವ್ ಸ್ಟೋರಿಗಳೇ ಇವೆ ಅನ್ನೋದು ತಿಳಿದಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಹೇಳದೇ ಉಳಿದು ಹೋದ ಭಾವಗಳ ಆಳವಾದ ಪ್ರೀತಿಯ ಗಾಯನ!
ಹೇಳದೇ ಉಳಿದು ಹೋದ ಭಾವಗಳ ಆಳವಾದ ಪ್ರೀತಿಯ ಗಾಯನ!

ಟಾಕ್ಸಿಕ್ ಚಿತ್ರದಲ್ಲಿ (Toxic Movie) ಸಾಲು ಸಾಲು ಲವ್ ಸ್ಟೋರಿ ಇವೆ ಅನಿಸುತ್ತಿದೆ. ಈ ಚಿತ್ರದ ತಬಾಹಿ (Tabaahi) ಹಾಡಿನಲ್ಲಿ ಕಿಯಾರಾ ಅಡ್ವಾಣಿ ಹಾಗೂ ಯಶ್ ಪಾತ್ರದ ಲವ್‌ ಸ್ಟೋರಿ ಇತ್ತು. ಇದು ಬೇರೆ ಲೆವೆಲ್ ಅಲ್ಲಿಯೇ ಇದೆ ಬಿಡಿ. ಆದರೆ, ಇದೆ ಚಿತ್ರದ ತಾರಾ ಸುತಾರಿಯಾ (Tara Sutaria) ಹಾಗೂ ಯಶ್ (Yash) ಅವರ ಜೋಡಿಯ ಮತ್ತೊಂದು ಲವ್ ಸ್ಟೋರಿ ಇಲ್ಲಿ ಮನಮೋಹಕವಾಗಿಯೇ ಕೇಳಿಸುತ್ತಿದೆ. ಮನಮೋಹಕ ಹಾಡಿನಲ್ಲಿ ಈ ಜೋಡಿಯ ಲವ್ಲಿ ಸ್ಟೋರಿ ರಿವೀಲ್ ಆಗಿದೆ. ಹೇಳದೇ ಹಾಗೆ ಉಳಿದು ಹೋದ ಮನದ ಆಳವಾದ ಮಾತುಗಳ ಚಿತ್ರಣ ಇಲ್ಲಿದೆ. ಈ ಹಾಡಿನ ಲವ್ಲಿ ಮಾತುಗಳು ಇಲ್ಲಿದೆ ಓದಿ.

ಮನಮೋಹಕ ಪ್ರೀತಿ

ಟಾಕ್ಸಿಕ್ ಚಿತ್ರದಲ್ಲಿ ಪ್ರೀತಿಯ ಕತೆ ಇದೆ ಅಂತ ತಬಾಹಿ ಹಾಡು ನೋಡಿದಾಗಲೇ ಫೀಲ್ ಆಗಿತ್ತು. ಆದರೆ, ಇಲ್ಲಿ ಪ್ರೀತಿಯ ಸಾಲು ಸಾಲುಗಳು ಕತೆಗಳೇ ಇವೆ ಅನಿಸುತ್ತಿದೆ.
Toxic Movie Rebecca Raya love story in Manamohaka Song

ರಾಯ-ರೆಬೆಕ್ಕಾ ಲವ್ ಸ್ಟೋರಿ

ಕಿಯಾರ ಅಡ್ವಾಣಿಯ ಜೊತೆಗಿನ ಪ್ರೀತಿಯ ಕತೆ ತುಂಬಾನೆ ವೈಲ್ಡ್ ಆಗಿಯೇ ಇದೆ. ಅದನ್ನ ತಬಾಹಿ ಹಾಡಿನಲ್ಲಿಯೆ ಇಡೀ ಜಗತ್ತು ಆಯಾ ಭಾಷೆಯಲ್ಲಿ ನೋಡಿದೆ.

ಹೇಳದೆ ಉಳಿದ ಮಾತುಗಳು

ಆದರೆ, ಮನಮೋಹಕ ಹಾಡಿನಲ್ಲಿ ಹೇಳದೇ ಉಳಿದ ಪ್ರೀತಿಯ ಮಾತುಗಳು ಇವೆ. ಹೃದಯದಲ್ಲಿ ಅಡಗಿದ ಮೌನವೂ ಕಣ್ಣುಗಳಲ್ಲಿ ಕಾಣಿಸುತ್ತದೆ.

ವೈಲ್ಡ್ ರೋಮ್ಯಾನ್ಸ್

ತಬಾಹಿ ತರವೇ ಇಲ್ಲೂ ವೈಲ್ಡ್ ರೋಮ್ಯಾನ್ಸ್ ಇಲ್ಲೂ ಕಾಣಿಸುತ್ತದೆ. ಆದರೆ, ತಬಾಹಿ ಹಾಡಿನಲ್ಲಿ ಇದು ಅತಿಯಾಗಿಯೆ ಇದೆ.

ತಾರಾ ಸುತಾರಿಯಾ ಇಲ್ಲಿ ರೆಬೆಕ್ಕಾ ಆಗಿಯೇ ಪ್ರೀತಿಸಿದ್ದಾರೆ. ರಾಯ ರಾಕಿ ಭಾಯ್ ತೋಳಿನಲ್ಲಿ ಕಳೆದು ಹೋಗಿದ್ದಾರೆ. ಪ್ರೀತಿಯ ಉತ್ಕಟತೆ ಇಲ್ಲಿ ಉತ್ತುಂಗದಲ್ಲಿಯೇ ಇದೆ.

ಸಿದ್ಧಾರ್ಥ್ ಬಸ್ರೂರು

ಗಾಯಕ ಸಿದ್ಧಾರ್ಥ್ ಬಸ್ರೂರು ಈ ಒಂದು ಲವ್ ಸ್ಟೋರಿಯನ್ನ ತುಂಬಾನೆ ಚೆನ್ನಾಗಿ ಹಾಡಿದ್ದಾರೆ. ಮೋಹಕವಾಗಿಯೇ ಹೇಳಿದ್ದಾರೆ.

Toxic Movie Rebecca Raya love story in Manamohaka Song

ಮನಮೋಹಕ ಪ್ರೀತಿ

ಈ ಹಾಡಿನಲ್ಲಿ ಎಲ್ಲ ಭಾವನೆಗಳನ್ನು ಹೇಳುವ ಕೆಲಸ ಅಷ್ಟು ಸುಲಭವೇನು ಅಲ್ಲ. ಆದರೆ, ಸಿದ್ಧಾರ್ಥ್ ಅದನ್ನ ಸಮರ್ಥವಾಗಿಯೇ ನಿಭಾಹಿಸಿದ್ದಾರೆ. ಅಷ್ಟು ಭಾಷೆಯಲ್ಲೂ ಸಿದ್ಧಾರ್ಥ್ ಬಸ್ರೂರು ಇದನ್ನ ಹಾಡಿದ್ದಾರೆ.

ಸಿದ್ಧಾರ್ಥ್ ಹೇಳೋದೇನು

ಮನಮೋಹಕ ಹಾಡು ಕೇವಲ ಹೃದಯ ಒಡೆದು ಹೋದ ಪ್ರೀತಿಯ ಹಾಡಲ್ಲ. ಇಲ್ಲಿ ಹೇಳಲಾಗದೇ ಉಳಿದು ಹೋದ ವಿಷಯವೂ ಇದೆ.

ನೀವು ನೋಡಿ ಈ ಹಾಡಿನುದ್ದಕ್ಕೂ ಭಾವುಕತೆ ಮತ್ತು ಹಂಬಲ ಹರಿಯುತ್ತಲೇ ಇರುತ್ತದೆ. ನನ್ನ ಗಾಯನದಲ್ಲಿ ಆ ನೋವಷ್ಟೆ ಅಲ್ಲ. ಆ ಪ್ರಾಮಾಣಿಕ ಪ್ರೀತಿಯನ್ನು ಬಿಂಬಿಸೋ ಕೆಲಸ ಮಾಡಿದ್ದೇನೆ.

ಇದರಲ್ಲಿ ತೀವ್ರತೆನೂ ಇದೆ

ಈ ಹಾಡಿನಲ್ಲಿ ಭಾವುಕತೆ ಇದೆ. ಆದರೆ, ಇಲ್ಲೊಂದು ತೀವ್ರತೆನೂ ಇದೆ. ಈ ಭಾವತೀವ್ರತೆ ಹಾಡು ಸಾಗಿದಂತೆ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕೇನೆ ನನಗೆ ಈ ಹಾಡು ಇಷ್ಟ ಅಂತಲೇ ಸಿದ್ಧಾರ್ಥ್ ಬಸ್ರೂರು ಹೇಳಿದ್ದಾರೆ.

ಡೈರೆಕ್ಟರ್ ಗೀತು ಮೋಹನ್‌ದಾಸ್ ಈ ಚಿತ್ರವನ್ನ ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ತಯಾರಿಸಿದ್ದಾರೆ. ಆದರೆ, ಇದು ಇತರ ಭಾಷೆಗೆ ಡಬ್ ಆಗುತ್ತಿದೆ.

ಈ ಮೂಲಕ ಆಗಸ್ಟ್-26 ರಂದು ಎಲ್ಲ ಭಾಷೆಯಲ್ಲಿ ಎಲ್ಲೆಡೆ ಈ ಚಿತ್ರ ತೆರೆ ಕಾಣುತ್ತಿದೆ. ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed