Toxic Movie: ‘ತಬಾಹಿ ಅಂತಿಂತ ಪ್ರೇಮಗೀತ ಅಲ್ವೇ ಅಲ್ಲ! ಪ್ರೀತಿಯ ವಿನಾಶ-ಶರಣಾಗತಿ ಇಲ್ಲಿದೆ’; ಸಿಂಗರ್ ವಿಶಾಲ್ ಮಿಶ್ರಾ! | | ACTPnews

ತಬಾಹಿ ಅಂತಿಂತ ಪ್ರೇಮಗೀತ ಅಲ್ವೇ ಅಲ್ಲ!


Last Updated:

ತಬಾಹಿ ಹಾಡಿನ ಆಳದಲ್ಲಿ ಒಂದು ಅಗಾಧ ಪ್ರೀತಿ ಇದೆ. ಯಶ್ ಮತ್ತು ಕಿಯಾರಾ ಆ ಪ್ರೀತಿಯನ್ನ ಕಣ್ಣಲ್ಲಿಯೇ ಹೇಳುವ ಕೆಲಸ ಮಾಡಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ವಿಶಾಲ್ ಮಿಶ್ರಾ ಆ ಪ್ರೀತಿಗೆ ಸಂಗೀತ ಸ್ಪರ್ಶ ಕೊಟ್ಟಿದ್ದಾರೆ. ಈ ಹಾಡು ಎಂದಿನ ಶೈಲಿಯ ಪ್ರೇಮ ಗೀತೆ ಅಲ್ವೇ ಅಲ್ಲ ಅಂತಲೂ ಹೇಳಿದ್ದಾರೆ. ಇವರ ಮಾತಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ತಬಾಹಿ ಅಂತಿಂತ ಪ್ರೇಮಗೀತ ಅಲ್ವೇ ಅಲ್ಲ!
ತಬಾಹಿ ಅಂತಿಂತ ಪ್ರೇಮಗೀತ ಅಲ್ವೇ ಅಲ್ಲ!

ಟಾಕ್ಸಿಕ್ ಚಿತ್ರದ (Toxic Movie) ತಬಾಹಿ (Tabaahi) ಪ್ರೀತಿಯ ಉತ್ತುಂಗವನ್ನೆ ಹೇಳುತ್ತದೆ. ಅನುಮತಿನೇ ಕೇಳದ ಪ್ರೀತಿಯ ವಿನಾಶದಂತೇನೂ ಕಾಣಿಸುತ್ತದೆ. ನಿಗಿ ನಿಗಿ ಬೆಂಕಿ ಅಂತೇನೂ ಇದೆ. ಇಂತಹ ಒಂದು ಹಾಡಿಗೆ ಸಂಗೀತ ಮಾಡುವುದು ಸುಮ್ನೆ ಅಲ್ಲ. ಆದರೆ, ಬಾಲಿವುಡ್ (Bollywood) ಗಾಯಕ ವಿಶಾಲ್ ಮಿಶ್ರಾ (Vishal Mishra) ಇದನ್ನ ಮಾಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಈ ಒಂದು ಹಾಡನ್ನು ಹಾಡಿದ್ದಾರೆ. ತಬಾಹಿ ಹಾಡಿನ ಬಗ್ಗೆನೂ ಈಗ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ತಬಾಹಿ ಹಾಡಿನ ಅನುಭವ

ತಬಾಹಿ ಹಾಡು ಎಲ್ಲ ಪ್ರೇಮ ಗೀತೆಗಳ ರೀತಿ ಇಲ್ಲ. ಇಲ್ಲಿ ಪ್ರೀತಿಯ ಪರಿ ಬೇರೆ ಇದೆ. ಪ್ರೀತಿಗೆ ಶರಣಾಗುವ ರೀತಿ ಬೇರೆ ಇದೆ. ಪ್ರೀತಿಯ ವಿನಾಶವೂ ಕಾಣಿಸುತ್ತದೆ.

toxic movie tabaahi song music director vishal mishra share song experience

ತಬಾಹಿ ಅಂತಿಂತ ಪ್ರೇಮಗೀತ ಅಲ್ವೇ ಅಲ್ಲ

ಅಷ್ಟೆ ಇದು ಅನುಮತಿನೇ ಕೇಳದ ನಿಗಿನಿಗಿ ಅನ್ನುವ ಬೆಂಕಿ ಅಂತೇನೂ ಇದೆ. ಇದಕ್ಕೆ ಸಂಗೀತ ಮಾಡುವುದು ಒಂದು ಸವಾಲಿನ ಕೆಲಸವೇ ಆಗಿತ್ತು. ಹಾಗೆ ಇದು ಅಷ್ಟೆ ಭವ್ಯವಾಗಿಯೂ ಇರಬೇಕಿತ್ತು. ಅಷ್ಟೆ ಅಪ್ತವಾಗಿಯೂ ಇರಬೇಕಿತ್ತು.

ರಾಕಿ ಭಾಯ್ ಪ್ರೀತಿಯ ಅಬ್ಬರ

ಈ ಒಂದು ತಬಾಹಿ ಹಾಡಿಗೆ ಸಂಗೀತ ಮಾಡುವುದು ಸುಲಭವೂ ಅಲ್ಲ. ಕಾರಣ ರಾಕಿ ಭಾಯ್ ಇದರಲ್ಲಿ ಅಷ್ಟು ಇನ್‌ಟೆನ್ಸ್ ಆಗಿಯೇ ಕಾಣಿಸುತ್ತಾರೆ. ಆ ತೀವ್ರತೆಗೆ ಸಾಟಿ ಆಗುವ ರೀತಿಯಲ್ಲಿಯೇ ಟ್ಯೂನ್ ಮಾಡಬೇಕಿತ್ತು. ಅದನ್ನ ಇಲ್ಲಿ ಪ್ರಯತ್ನಿಸಿದ್ದೇನೆ ಅಂತಲೇ ಈ ಹಾಡಿನ ಸಂಗೀತ ನಿರ್ದೇಶಕ ಮತ್ತು ಗಾಯಕ ವಿಶಾಲ್ ಮಿಶ್ರಾ ಹೇಳಿಕೊಂಡಿದ್ದಾರೆ.

ತಬಾಹಿ ಹಾಡು ಮೇಲ್ನೋಟಕ್ಕೆ ಬೋಲ್ಡ್ ಹಾಡು ಅನಿಸುತ್ತದೆ. ಅತೀಯಾದ ಚುಂಬನದ ದೃಶ್ಯಗಳೂ ಇವೆ ಅನಿಸುತ್ತದೆ. ಇದು ಪ್ರೀತಿಯನ್ನ ವ್ಯಕ್ತಪಡಿಸುವ ರೀತಿನೂ ಅಂತಲೇ ಅನಿಸುತ್ತದೆ.

ಯಶ್ ಪಾತ್ರದ ಕಣ್ಣಲ್ಲಿ ಪ್ರೀತಿ

ಯಶ್ ಪಾತ್ರದ ಕಣ್ಣಲ್ಲಿ ಅತೀಯಾದ ಪ್ರೀತಿ ಇದೆ. ಆದರೆ, ಮಾತಲ್ಲಿ ಅದು ಸಿಗೋದೇ ಇಲ್ಲ. ಅದನ್ನ ಈ ತಬಾಹಿ ಹಾಡಿನ ಕೊನೆ ಕೊನೆಯ ದೃಶ್ಯದ ಡೈಲಾಗ್ ಅಲ್ಲಿಯೇ ಅರ್ಥ ಮಾಡಿಕೊಳ್ಳಬಹುದು.

toxic movie tabaahi song music director vishal mishra share song experience

ಪ್ರೀತಿಯ ವಿನಾಶ-ಶರಣಾಗತಿ ಇಲ್ಲಿದೆ

ನಿನ್ನಂತಹ ಸ್ವಾರ್ಥಿಯಗೂ ಪ್ರೀತಿ ಆಗುತ್ತಾ ಅನ್ನುವ ಪ್ರಶ್ನೆಯನ್ನ ಆ ಹುಡುಗಿ ಕೇಳುತ್ತಾಳೆ. ಆಗ ಯಶ್ ಹೇಳ್ತಾರೆ. ಚಾನ್ಸ್ ಇಲ್ವೇ ಇಲ್ಲ ಅನ್ನು ಅರ್ಥದಲ್ಲಿಯೇ ರಿಯಾಕ್ಟ್ ಮಾಡ್ತಾರೆ. ಆದರೆ, ಕಣ್ಣಲ್ಲಿ ಅದೇ ಪ್ರೀತಿ ಇರುತ್ತದೆ.

ಕಿಯಾರಾ ಅಡ್ವಾಣಿ ಪ್ರೀತಿ…

ಕಿಯಾರಾ ಅಡ್ವಾಣಿ ಕೂಡ ಇಲ್ಲಿ ತುಂಬಾನೆ ಚೆನ್ನಾಗಿಯೇ ಅಭಿನಯಿಸಿದ್ದಾರೆ. ರಾಕಿ ಭಾಯ್ ಕ್ರೌರ್ಯ ತುಂಬಿದ ಪ್ರೀತಿಗೆ ಸರಿಯಾಗಿಯೇ ಸಾಥ್ ಕೊಟ್ಟಿದ್ದಾರೆ.

ಮೊದಲು ನೋಡಿದಾಗ..

ಈ ಒಂದು ಹಾಡನ್ನ ಫಸ್ಟ್ ಟೈಮ್ ನೋಡಿದಾಗ ಏನಿದು ಇಷ್ಟು ಬೋಲ್ಡ್ ಅನಿಸುತ್ತದೆ. ಆದರೆ, ಎರಡನೇ ಸಲ ನೋಡಿದಾಗ ಈ ಹಾಡಿನ ತೀವ್ರತೆ ಅರ್ಥ ಆಗುತ್ತದೆ. ಕಣ್ಣಲ್ಲಿಯೇ ಅರಳುವ ಪ್ರೀತಿ ಅರ್ಥ ಆಗುತ್ತದೆ.

ಆದರೆ, ಅದು ಮಾತಿನಲ್ಲಿ ಬರೋದಿಲ್ಲ. ಕಣ್ಣಲ್ಲಿಯೇ ಸಾಗುತ್ತದೆ. ಈ ಒಂದು ಪ್ರೀತಿನೇ ಇಡೀ ಟಾಕ್ಸಿಕ್ ಚಿತ್ರ ಆಗಲು ಕಾರಣ ಆಗುತ್ತಾ ಅನ್ನುವ ಪ್ರಶ್ನೆಗಳೂ ಹುಟ್ಟುತ್ತವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports