Toll Plaza: ನಿಮ್ಮ ಊರ ಹತ್ತಿರವೇ ಟೋಲ್ ಇದ್ಯಾ? ಹಾಗಾದ್ರೆ ತಕ್ಷಣ ಈ ಕೆಲಸ ಮಾಡಿ, ಇನ್ಮೇಲೆ ಹಣ ಉಳಿಸುವುದು ಗ್ಯಾರಂಟಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

NHAI ಡಿಜಿಟಲ್ ಪಾಸ್


Last Updated:

NHAI ನಿಂದ ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಡಿಜಿಟಲ್ ಪಾಸ್ ಸೌಲಭ್ಯ. ‘ರಾಜಮಾರ್ಗಯಾತ್ರಾ’ ಆ್ಯಪ್ ಮೂಲಕ ಸುಲಭವಾಗಿ ಪಡೆಯಬಹುದು. ಅನಿಯಮಿತ ಪ್ರಯಾಣ, ಸಮಯ ಮತ್ತು ಹಣ ಉಳಿತಾಯ.

NHAI ಡಿಜಿಟಲ್ ಪಾಸ್
NHAI ಡಿಜಿಟಲ್ ಪಾಸ್

ಬೆಂಗಳೂರು: ನೀವು ಟೋಲ್ ಪ್ಲಾಜಾದ (Toll Plaza) ಅಕ್ಕ-ಪಕ್ಕದಲ್ಲೇ ವಾಸಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಸಂಪೂರ್ಣವಾಗಿ ನಿಮ್ಮ ಗಮನಕ್ಕೆ. ಪ್ರತಿದಿನ ಟೋಲ್ ಗೇಟ್ ದಾಟಲು ಹೈರಾಣಾಗಿ ಹೋಗಿರುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಅತ್ಯಂತ ಮಹತ್ವದ ಹಾಗೂ ಖುಷಿಯ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ನೀವು ಟೋಲ್ ಶುತಿ ಕಟ್ಟಿ ಸುಸ್ತಾಗಬೇಕಿಲ್ಲ, ಬದಲಿಗೆ ಸರಳವಾಗಿ ಡಿಜಿಟಲ್ (Digital) ಪಾಸ್ (Pass) ಪಡೆಯುವ ಮೂಲಕ ಹಣ ಉಳಿಸಬಹುದು.

ಟೋಲ್ ಪ್ಲಾಜಾಗಳ ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲು NHAI ವತಿಯಿಂದ ಅದ್ಭುತ ಅವಕಾಶವೊಂದನ್ನು ಕಲ್ಪಿಸಲಾಗಿದೆ. ಇನ್ಮೇಲೆ ಸ್ಥಳೀಯರು ಕಚೇರಿಗಳಿಗೆ ಅಲೆದಾಡಿ ಆಫ್‍ಲೈನ್‍ನಲ್ಲಿ ಪಾಸ್‍ಗಳನ್ನು ಪಡೆಯಲು ಪರದಾಡುವ ಅಗತ್ಯವೇ ಇಲ್ಲ ಎಂದು economictimes ವರದಿ ಮಾಡಿದೆ.
‘ರಾಜಮಾರ್ಗಯಾತ್ರಾ’ ಆ್ಯಪ್‌ನಿಂದ ಸಿಗಲಿದೆ ಬಿಗ್ ರಿಲೀಫ್

ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಮನೆಯಲ್ಲಿದ್ದುಕೊಂಡು ಅತ್ಯಂತ ಸುಲಭವಾಗಿ ‘ರಾಜಮಾರ್ಗಯಾತ್ರಾ’ ಮೊಬೈಲ್ ಆ್ಯಪ್ ಬಳಸಿ ನೀವು ‘ಸ್ಥಳೀಯ ಪಾಸ್’ ಅನ್ನು ಪಡೆದುಕೊಳ್ಳಬಹುದು. ಈ ಡಿಜಿಟಲ್ ಸೌಲಭ್ಯದಿಂದಾಗಿ ಸಾರ್ವಜನಿಕರ ಅಮೂಲ್ಯ ಸಮಯ ಉಳಿಯುವುದಲ್ಲದೆ, ಕ್ಯೂ ನಿಲ್ಲುವ ಕಿರಿಕಿರಿಯಿಂದಲೂ ಮುಕ್ತಿ ಸಿಗಲಿದೆ.
ಈ ಪಾಸ್‍ನ ವಿಶೇಷತೆಗಳೇನು?

ಅನಿಯಮಿತ ಪ್ರಯಾಣ: ಒಮ್ಮೆ ಸ್ಥಳೀಯ ಪಾಸ್ ಪಡೆದರೆ, ಒಂದು ತಿಂಗಳ ಪೂರ್ತಿ ಸಂಬಂಧಿತ ಟೋಲ್ ಪ್ಲಾಜಾದ ಮೂಲಕ ಯಾವುದೇ ಅಡೆತಡೆಯಿಲ್ಲದೆ ಅನಿಯಮಿತವಾಗಿ ಸಂಚರಿಸಬಹುದು.

ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ: ಸಾಪ್ರದಾಯಿಕವಾಗಿ ದೀರ್ಘ ಸಾಲುಗಳಲ್ಲಿ ನಿಂತು ದಾಖಲೆಗಳನ್ನು ನೀಡಿ ಪಾಸ್ ನವೀಕರಿಸುವ ತಾಪತ್ರಯದಿಂದ ಸಂಪೂರ್ಣ ಮುಕ್ತಿ ಸಿಕ್ಕಿದೆ.

ಹಣ ಮತ್ತು ಸಮಯ ಉಳಿತಾಯ: ಹತ್ತಿರದಲ್ಲೇ ವಾಸಿಸುವ ನಿವಾಸಿಗಳಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಉಪಶಮನ ದೊರೆಯಲಿದೆ.

ಪ್ರಯಾಣಿಕರಿಗೆ ಪ್ರಮುಖ ಸಲಹೆ

ನೀವು ಕೂಡ ಟೋಲ್ ಪ್ಲಾಜಾದ 20 ಕಿ.ಮೀ ಸುತ್ತಮುತ್ತಲಿನ ನಿವಾಸಿಯಾಗಿದ್ದರೆ, ತಡಮಾಡದೆ ಕೂಡಲೇ ನಿಮ್ಮ ಮೊಬೈಲ್‍ನಲ್ಲಿ ‘ರಾಜಮಾರ್ಗಯಾತ್ರಾ’ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ನಿಮ್ಮ ‘ಸ್ಥಳೀಯ ಪಾಸ್’ ಅನ್ನು ಆನ್‍ಲೈನ್‍ನಲ್ಲೇ ಸಕ್ರಿಯಗೊಳಿಸಿ ಹಾಗೂ ನಿಮ್ಮ ದೈನಂದಿನ ಮಾಸಿಕ ಪ್ರಯಾಣವನ್ನು ಸಂಪೂರ್ಣ ತೊಂದರೆರಹಿತ ಮತ್ತು ಸುಲಭವಾಗಿಸಿಕೊಳ್ಳಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed