Last Updated:
TN Sitharam: ಹೊಸ ಸಿರೀಸ್ ಒಂದು ಯೂಟ್ಯೂಬ್ಗೆ ಬರಲಿದೆ. ಹೊಸ ಸಿರೀಸ್ ಅನ್ನು ಯೂಟ್ಯೂಬ್ನಲ್ಲಿ ನೋಡಬಹುದು ಎನ್ನುವುದು ಇನ್ನೊಂದು ವಿಶೇಷ.
ಅಂದು ಹೇಗೆ ಧಾರಾವಾಹಿ (Serial) ಪ್ರೇಕ್ಷಕರಿಗೆ ಫೇವರಿಟ್ ಆಗಿದ್ದವೋ ಇಂದು ಯುವಜನರು ವೆಬ್ ಸಿರೀಸ್ (Web Series) ನೋಡುತ್ತಾರೆ. ಅದರಲ್ಲೂ ಟಿವಿ ಜಮಾನ ಸ್ವಲ್ಪ ಹಳೆಯದಾಗಿ ಜನ ಬರೀ ಯಟ್ಯೂಬ್ (Youtube), ಒಟಿಟಿ ಮೊರೆ ಹೋಗುತ್ತಿದ್ದಾರೆ. ಈ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ (Streaming Platform)ಗಳು ಪ್ರೇಕ್ಷಕರಿಗೆ ತರಹೇವಾರಿ ಕಂಟೆಂಟ್ ನೀಡುತ್ತವೆ. ಇದೀಗ ಕನ್ನಡ ಪ್ರಸಿದ್ಧ ನಿರ್ದೇಶಕ ಟಿಎನ್ ಸಿತಾರಾಮ್ ಅವರ ವೆಬ್ ಸಿರೀಸ್ ಒಂದು ಪ್ರೇಕ್ಷಕರ ಮುಂದೆ ಬರಲಿದೆಯಂತೆ.














