TMC Crisis: ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ನಿರ್ಧರಿಸಿ ಎಂದ ಮಮತಾ ಅತ್ಯಾಪ್ತ! ದೀದಿಗೆ ಖಡಕ್​ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್​ ಬ್ಯಾನರ್ಜಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದೀದಿಗೆ ಖಡಕ್​ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್​ ಬ್ಯಾನರ್ಜಿ?


Last Updated:

TMC Crisis: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮತ್ತು ತಮ್ಮ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಸವಾಲು ಹಾಕಿರುವ ರಾಜಕೀಯ ಬೆಳವಣಿಗೆಯ ವಿವರ ಇಲ್ಲಿದೆ.

ದೀದಿಗೆ ಖಡಕ್​ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್​ ಬ್ಯಾನರ್ಜಿ?
ದೀದಿಗೆ ಖಡಕ್​ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್​ ಬ್ಯಾನರ್ಜಿ?

ಕೊಲ್ಕತ್ತಾ (ಪಶ್ಚಿಮ ಬಂಗಾಳ): 28 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ (Mamata Banerjee) ಅವರು ಹಲವು ಕನಸಿನೊಂದಿಗೆ ಕಾಂಗ್ರೆಸ್​ (Congress) ಪಕ್ಷದೊಂದಿಗೆ ಹೊರ ಬಂದು ತಮ್ಮದೇ ಆದ ತೃಣಮೂಲ ಕಾಂಗ್ರೆಸ್​ ಪಕ್ಷವನ್ನ ಸ್ಥಾಪಿಸಿದರು. ಆದ್ರೆ, ಈಗ ಅದೇ ಪಕ್ಷ ಎರಡು ಹೋಳಾಗುವತ್ತ ಸಾಗುತ್ತಿದೆ. ಒಂದೆಡೆ ಬಹುತೇಕ ಪಕ್ಷದ ಶಾಸಕರು ಹಾಗೂ ಸಂಸದರು ತಮ್ಮದೇ ಆದ ಪ್ರತ್ಯೇಕ ಬಣ ರಚಿಸಿಕೊಂಡು ನಮ್ಮದೇ ನಿಜವಾದ ಟಿಎಂಸಿ (TMC) ಎನ್ನುತ್ತಿದ್ದಾರೆ. ಇದರ ನಡುವೆಯೇ, ದೀದಿ ಅತ್ಯಾಪ್ತರು ಎನಿಸಿಕೊಂಡ ಕೂಡ ಮಮತಾ ಬ್ಯಾನರ್ಜಿ ಅವರ ಬಿಟ್ಟು ಹೋಗುತ್ತಿದ್ದಾರೆ. ಈ ವೇಳೆ, ಬಹುತೇಕ ನಾಯಕರು ನೀಡುತ್ತಿರುವ ಕಾರಣ ಒಂದೇ, ಅದುವೇ, ಅಭಿಷೇಕ್ ಬ್ಯಾನರ್ಜಿ (Abhishek Banerjee)!

ಹೌದು, ಪಕ್ಷ ತೊರೆಯಲು ಸಿದ್ಧವಾಗಿರುವ ಬಹುತೇಕ ನಾಯಕರು ಹೇಳುತ್ತಿರುವುದು ಒಂದೇ ಅದುವೇ ಅಭಿಷೇಕ್ ಬ್ಯಾನರ್ಜಿ ಅವರ ದುರಹಂಕಾರಿ ವರ್ತನೆ! ಆದ್ರೆ, ಇದುವರೆಗೂ ಪಕ್ಷ ಬಿಡುವ ಪಟ್ಟಿಯಲ್ಲಿ ಹೆಸರಿಲ್ಲದ ಕಲ್ಯಾಣ್​ ಬ್ಯಾನರ್ಜಿ ಅವರು ಕೂಡ ಇದೀಗ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತಿರುಗಿ ಬೀಳುವ ಮೂಲಕ ಮಮತಾ ಬ್ಯಾನರ್ಜಿಗೆ ನೇರ ಸವಾಲು ಹಾಕಿದ್ದಾರೆ.! ಅದುವೇ, ನಾನಾ (ಕಲ್ಯಾಣ್ ಬ್ಯಾನರ್ಜಿ) ಅಥವಾ ಅಭಿಷೇಕ್ ಬ್ಯಾನರ್ಜಿ? ಪಕ್ಷದಲ್ಲಿ ಈ ಇಬ್ಬರು ನಾಯಕರ ಪೈಕಿ ಯಾರನ್ನು ಉಳಿಸಿಕೊಳ್ಳಬೇಕು? ಎಂಬುದನ್ನು ದೀದಿಯೇ ನಿರ್ಧರಿಸಲಿ ಎಂದು ಬೇಕು ಎಂದು ನೇರವಾಗಿ ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಕಲ್ಯಾಣ್​ ಬ್ಯಾನರ್ಜಿ ಕೋಪಗೊಂಡಿದ್ಯಾಕೆ?

ಬಹುತೇಕ ನಾಯಕರು ಪಕ್ಷ ತೊರೆಯುತ್ತಿದ್ದರು ಕೂಡ ಪಕ್ಷದ ನಾಯಕತ್ವಕ್ಕೆ ಬದ್ಧರಾಗಿದ್ದ ಕಲ್ಯಾಣ್​ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ವಿರುದ್ಧ ಸಿಡಿದೇಳಲು ಪ್ರಮುಖ ಕಾರಣ ಅಭಿಷೇಕ್ ಬ್ಯಾನರ್ಜಿ ದುರ್ನಡತೆ ಎನ್ನಲಾಗಿದೆ.

ಇದನ್ನೂ ಓದಿ: TMC: ಕಾಂಗ್ರೆಸ್‌ ಜೊತೆ ಟಿಎಂಸಿ ವಿಲೀನ? ಸೋಲಿನ ಬೆನ್ನಲ್ಲೇ ಅತಿದೊಡ್ಡ ನಿರ್ಧಾರ ತೆಗೆದುಕೊಳ್ತಾರಾ ಮಮತಾ ಬ್ಯಾನರ್ಜಿ?

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಪುರ ಕ್ಷೇತ್ರದ ಸಂಸದ ಕಲ್ಯಾಣ್ ಬ್ಯಾನರ್ಜಿ, “ಮಮತಾ ಬ್ಯಾನರ್ಜಿ ಅವರು ತಮ್ಮನ್ನು ಅಥವಾ ತಮ್ಮ ಸೋದರಸಳಿಯ ಅಭಿಷೇಕ್ ಬ್ಯಾನರ್ಜಿ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವದ ಶೈಲಿಯ ಬಗ್ಗೆ ಅಸಮಾಧಾನ ಹೊಂದಿರುವ ಪಕ್ಷದ ಹಳೆಯ ತಲೆಮಾರಿನ ನಾಯಕರ ಮನಸ್ಥಿತಿಯನ್ನು ಕಲ್ಯಾಣ್ ಅವರ ಈ ಮಾತುಗಳು ಬಿಂಬಿಸುತ್ತಿವೆ. ಒಂದು ವೇಳೆ ಮಮತಾ ಬ್ಯಾನರ್ಜಿ ಅವರು ಅಭಿಷೇಕ್ ಅವರ ಬೆಂಬಲಕ್ಕೆ ನಿಂತರೆ, ತಾವು ಪಕ್ಷದಲ್ಲಿ ಉಳಿಯುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ತಿಳಿಸಿದ್ದಾರೆ.

ಈ ಆಕ್ರೋಶಕ್ಕೆ ಕಾರಣವೇನು?

ಟಿಎಂಸಿ ಶಾಸಕರ ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೂ ಅಧಿಕಾರಿಗಳು ಭೇಟಿ ನೀಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಕೀಲರಾಗಿ ಕಲ್ಯಾಣ್ ಬ್ಯಾನರ್ಜಿ ಅವರನ್ನ ನೇಮಕ ಮಾಡಿಕೊಳ್ಳಲಾಗಿತ್ತು. ಆದ್ರೆ, ರಾತ್ರಿ 11 ಗಂಟೆಗೆ ವಕೀಲ ಸ್ಥಾನದಿಂದ ಕಲ್ಯಾಣ್ ಬ್ಯಾನರ್ಜಿ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಅದುವೇ, ಕಲ್ಯಾಣ್ ಬ್ಯಾನರ್ಜಿ ಕೋಪಕ್ಕೆ ಕಾರಣವಾಗಿದೆ. ಅದರಂತೆ, ಈ ಕೃತ್ಯವನ್ನು ಅವರು “ಅವಮಾನಕರ” ಎಂದು ಬಣ್ಣಿಸಿದ್ದಾರೆ.

ಏತನ್ಮಧ್ಯೆ, ಟಿಎಂಸಿ ಶಾಸಕರ ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೂ ಅಧಿಕಾರಿಗಳು ಭೇಟಿ ನೀಡಿದ್ದರು. ಸದ್ಯ ಐದು ಸದಸ್ಯರ ವಿಶೇಷ ತನಿಖಾ ತಂಡ ರಚನೆಯಾಗಿದ್ದು, ಈಗಾಗಲೇ ಹದಿನಾಲ್ಕು ಶಾಸಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೇ ಆರರ ಸಭೆಯ ನಡಾವಳಿ ಪುಸ್ತಕದಲ್ಲಿ ಇರುವ ಸಹಿಗಳು ತಮಗೆ ಸೇರಿದ್ದಲ್ಲ ಎಂದು ಮೂವರು ಶಾಸಕರು ತನಿಖಾಧಿಕಾರಿಗಳಿಗೆ ತಿಳಿಸಿದ್ದು, ಈ ಪ್ರಕರಣ ಪಕ್ಷದ ಆಂತರಿಕ ಭಿನ್ನಮತವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಮಮತಾ ಬ್ಯಾನರ್ಜಿ ದೆಹಲಿಯಲ್ಲಿದ್ದು, ಈ ಬೆಳವಣಿಗೆಗಳ ನಡುವೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕನ್ನಡ ಸುದ್ದಿ/ ನ್ಯೂಸ್/ದೇಶ-ವಿದೇಶ/

TMC Crisis: ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ನಿರ್ಧರಿಸಿ ಎಂದ ಮಮತಾ ಅತ್ಯಾಪ್ತ! ದೀದಿಗೆ ಖಡಕ್​ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್​ ಬ್ಯಾನರ್ಜಿ?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports