Thriller Manju Movie: ಥ್ರಿಲ್ಲರ್ ಮಂಜು ‘ಡೆಡ್ಲಿ ಕಿಲ್ಲರ್’ ಸಿನಿಮಾ; 3 ವರ್ಷ ಹಿಂದಿನ ಈ ಚಿತ್ರ ಈಗ ರೆಡಿ ಫಾರ್ ರಿಲೀಸ್! | | ACTPnews

Thriller Manju Abhay Veer Deadly Killer Movie Latest Updates


ಡೆಡ್ಲಿ ಕಿಲ್ಲರ್ ಸಿನಿಮಾ

ಡೆಡ್ಲಿ ಕಿಲ್ಲರ್ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇವೆ. ಒಂದಲ್ಲ, ಎರಡಲ್ಲ. ಬರೋಬ್ಬರಿ 6 ಆ್ಯಕ್ಷನ್‌ ದೃಶ್ಯಗಳು ಇವೆ. ಈ ಒಂದು ಆ್ಯಕ್ಷನ್ ದೃಶ್ಯದಲ್ಲಿ ರೇನ್ ಫೈಟ್ ಕೂಡ ಇದೆ.

ಚಿತ್ರದ ಹಾಡಿಗೆ ಹೆಂಡ್ತಿ ಸ್ಪೂರ್ತಿ

(ಚಿತ್ರ ಕೃಪೆ: ಥ್ರಿಲ್ಲರ್ ಮಂಜು ಇನ್‌ಸ್ಟಾಗ್ರಾಮ್)

ಆದರೆ, ಚಿತ್ರದ ನಾಯಕ ಅಭಯ ವೀರ್ ಅವರಿಗೆ ಇದನ್ನ ಮಾಡೋದು ತುಂಬಾನೆ ಕಷ್ಟ ಕೂಡ ಆಗಿತ್ತು. ಆಗ ಡೈರೆಕ್ಟರ್ ಥ್ರಿಲ್ಲರ್ ಮಂಜು ಒಂದು ಮಾತು ಹೇಳಿದರು. ಹುಡುಗಿಯರು ಸಖತ್ ಆಗಿಯೇ ಆ್ಯಕ್ಷನ್ ಮಾಡ್ತಿದ್ದಾರೆ. ನೋಡಪ್ಪ ಏನ್ ಮಾಡ್ತೀಯಾ ಅಂದ್ರು.
ನೆಕ್ಸ್ಟ್ ಶಾಟ್ ಓಕೆ

ಥ್ರಿಲ್ಲರ್ ಮಂಜು ಮೇಲೆ ಹೇಳಿದ ಮಾತು ಹೇಳಿದ್ಮೇಲೆ ಅಭಯ ನೆಕ್ಸ್ಟ್ ಶಾಟ್ ಓಕೆ ಆಗಿದೆ. ಅಂದ್ರೆ, ನಾಯಕ ನಟ ಅಭಯ್ ವೀರ್‌ಗೆ ಥ್ರಿಲ್ಲರ್ ಮಂಜು ತಮ್ಮದೇ ರೀತಿಯಲ್ಲಿಯೇ ಸಪೋರ್ಟ್ ಮಾಡಿದ್ದಾರೆ. ಗೆಳೆಯನಾಗಿ, ಗುರು ಆಗಿ ಅಭಯ್ ವೀರ್‌ ಅವರ ಜೊತೆಗಿದ್ದಾರೆ.

ಚಿತ್ರದ ಹಾಡಿನ ವಿಚಾರದಲ್ಲಿ ಥ್ರಿಲ್ಲರ್ ಮಂಜು ಒಂದು ವಿಷಯ ಹಂಚಿಕೊಂಡಿದ್ದಾರೆ. ಆ ದಿನ ಹಬ್ಬ ಇತ್ತು. ಪತ್ನಿ ಮನೆಯಲ್ಲಿ ಹಬ್ಬಕ್ಕೆ ರೆಡಿ ಆಗಿ ಓಡಾಡ್ತಿದ್ದರು. ಪೂಜೆ ಮಾಡ್ತಾ ಇದ್ದರು.

ಚಿತ್ರದ ಹಾಡಿಗೆ ಹೆಂಡ್ತಿ ಸ್ಪೂರ್ತಿ

ಡೆಡ್ಲಿ ಕಿಲ್ಲರ್ ಚಿತ್ರದ ಹಾಡನ್ನ ಕೂಡ ಥ್ರಿಲ್ಲರ್ ಮಂಜು ಬರೆದಿದ್ದಾರೆ. ಅದರಲ್ಲಿ ಒಂದು ಹಾಡನ್ನ ಪತ್ನಿಯ ಸ್ಪೂರ್ತಿಯಿಂದಲೇ ಬರೆದಿದ್ದಾರೆ.

Thriller Manju Abhay Veer Deadly Killer Movie Latest Updates

3 ವರ್ಷದ ಹಿಂದಿನ ಈ ಚಿತ್ರ ಈಗ ರೆಡಿ ಫಾರ್ ರಿಲೀಸ್

(ಚಿತ್ರ ಕೃಪೆ: ಥ್ರಿಲ್ಲರ್ ಮಂಜು ಇನ್‌ಸ್ಟಾಗ್ರಾಮ್)

ಆ ಹಾಡಿನ ಪಲ್ಲವಿ ಬರೆದ ಮೇಲೆ ಪತ್ನಿಗೂ ತೋರಿಸಿದ್ದಾರೆ. ಸಾಮಾನ್ಯವಾಗಿ ಪತ್ನಿ ತಪ್ಪುಗಳನ್ನೆ ಕಂಡು ಹಿಡಿಯುತ್ತಾರೆ. ಆದರೆ, ಈ ಹಾಡಿನ ಪಲ್ಲವಿಯನ್ನ ಒಂದೇ ಏಟಿಗೆ ಓಕೆ ಅಂದಿದ್ದಾರೆ.

ಯಾರ ಸ್ಪೂರ್ತಿಯಿಂದ ಇದನ್ನ ಬರೆದಿರಿ ಅಂತಲೂ ಕೇಳಿದ್ದಾರೆ. ಆಗ ನೀನೇ ಅಂತಲೇ ಥ್ರಿಲ್ಲರ್ ಮಂಜು ಹೇಳಿದ್ದಾರೆ. ಇದನ್ನ ಕೇಳಿ ಥ್ರಿಲ್ಲರ್ ಮಂಜು ಅವರ ಪತ್ನಿ ಶಾಕ್ ಆಗಿರೋದು ಇದೆ. ಚಿತ್ರದ ದೆವ್ವದ ಹಾಡನ್ನು ಥ್ರಿಲ್ಲರ್ ಮಂಜು ಅವರೇ ಬರೆದಿದ್ದಾರೆ.

ಡೆಡ್ಲಿ ಕಿಲ್ಲರ್ ಯಾವಾಗ ರಿಲೀಸ್

ಡೆಡ್ಲಿ ಕಿಲ್ಲರ್ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಕಾರಣಾಂತರದಿಂದಲೇ ಇದು ಲೇಟ್ ಆಗಿದೆ. ಹೆಚ್ಚು ಕಡಿಮೆ 3 ವರ್ಷಗಳೇ ಆಗಿವೆ. ಆದರೆ, ಇನ್ನೇನು ಈ ಚಿತ್ರ ರಿಲೀಸ್ ಕೂಡ ಆಗುತ್ತದೆ.

ಕಾಡಿಗೆ ನುಗ್ಗಿದ ಗ್ಯಾಂಗ್‌ಸ್ಟರ್ ಗುಂಪೊಂದನ್ನ ಹಿಡಿಯೋದೇ ಕತೆ ಆಗಿದೆ. ತುಂಬಾನೆ ಫಾಸ್ಟ್ ಆಗಿಯೇ ಕತೆ ಹೋಗುತ್ತದೆ. ಎಲ್ಲೂ ಬೋರ್ ಆಗೋದಿಲ್ಲ ಅಂತಲೇ ಡೈರೆಕ್ಟರ್ ಥ್ರಿಲ್ಲರ್ ಮಂಜು ಹೇಳಿದ್ದಾರೆ. ಈ ಚಿತ್ರಕ್ಕೆ ವಿನು ಮನಸು ಸಂಗೀತ ಕೊಟ್ಟಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿವೆ. ಮಲ್ಲಿಕಾರ್ಜುನ್ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *