Team India: ರೋಹಿತ್ ಶರ್ಮಾ ನಿವೃತ್ತಿ ಹೈಡ್ರಾಮಾ! ಟೀಮ್ ಇಂಡಿಯಾ ಕೋಚ್ ಸ್ಫೋಟಕ ಹೇಳಿಕೆ | ಕ್ರೀಡಾ ಸುದ್ದಿ | ACTPnews

ರೋಹಿತ್ ಶರ್ಮಾ


Last Updated:

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಚೆನ್ನಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಅವರು ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ಇದೇ ಸಮಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಮಹತ್ವದ ಹೇಳಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ ಏಕದಿನ (ODI) ಸರಣಿಯ ಎರಡು ಪಂದ್ಯಗಳಲ್ಲಿ ಭಾರತ(India)ದ ಪರ ರೋಹಿತ್ ಶರ್ಮಾ (Rohit Sharma) ಚೆನ್ನಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ. ಕಾರ್ಡಿಫ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಎಲ್ಲರ ಗಮನ ರೋಹಿತ್ ಶರ್ಮಾ ಅವರ ಮೇಲೆಯೇ ಇತ್ತು. ಆದರೆ ಅವರು 47 ಎಸೆತಗಳಲ್ಲಿ ಕೇವಲ 26 ರನ್‌ಗಳಿಸಿ ಔಟಾದರು. ರೋಹಿತ್ ಪೆವಿಲಿಯನ್‌ಗೆ ಹಿಂದಿರುಗಿದ ತಕ್ಷಣ ಅವರ ನಿವೃತ್ತಿ(Retirement)ಯ ಬಗ್ಗೆ ಊಹಾಪೋಹಗಳು ಹೆಚ್ಚಾದವು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯವೇ ರೋಹಿತ್ ಶರ್ಮಾ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಹೇಳಲಾಗುತ್ತಿದೆ. ಇದೇ ಸಮಯದಲ್ಲಿ, ಕಾರ್ಡಿಫ್ ಏಕದಿನ ಪಂದ್ಯದ ನಂತರ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಅವರು ರೋಹಿತ್ ಶರ್ಮಾ ಬಗ್ಗೆ ಮಹತ್ವ ಹೇಳಿಕೆ ನೀಡಿದ್ದಾರೆ. ಇದು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.

ಕೋಚ್ ಸ್ಪೋಟಕ ಹೇಳಿಕೆ!

ಕಾರ್ಡಿಫ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಲ್ಕು ವಿಕೆಟ್‌ಗಳಿಂದ ಸೋತಿತು. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಅವರನ್ನು ರೋಹಿತ್ ಶರ್ಮಾ ಮೇಲಿನ ಒತ್ತಡದ ಬಗ್ಗೆ ಕೇಳಿದಾಗ ಪ್ರಶ್ನೆಗೆ ಉತ್ತಿರಿಸಿದರು. “ರೋಹಿತ್ ಅಂತಹ ದೊಡ್ಡ ಆಟಗಾರನ ಮೇಲೆ ಯಾವುದೇ ಒತ್ತಡವಿಲ್ಲ. ಅವರು ಬಹಳ ಅನುಭವಿ. ಅಂತಹ ವಿಷಯಗಳು ಅವರನ್ನು ತೊಂದರೆಗೊಳಿಸುವುದಿಲ್ಲ ಎಂದು ಹೇಳಿದರು.

ರೋಹಿತ್ ಕೊನೆಯ ಪಂದ್ಯ?

ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಅವರ ಹೇಳಿಕೆ ರೋಹಿತ್ ಶರ್ಮಾ ಅವರ ನಿವೃತ್ತಿ ಬಗ್ಗೆ ಇದ್ದ ಊಹಾಪೋಹಗಳನ್ನು ಕಡಿಮೆ ಮಾಡಿದೆ. ಕಾರಣ, ರೋಹಿತ್ ಅವರಿಗೆ ಭಾರತ ತಂಡದಲ್ಲಿ ಸ್ವತಂತ್ರವಾಗಿ ಆಡಲು ಪೂರ್ಣ ಅವಕಾಶ ನೀಡಿರುವುದಾಗಿ ಕೋಚ್ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ರೋಹಿತ್ ಶರ್ಮಾ ನಿವೃತ್ತಿ ತೆಗೆದುಕೊಳ್ಳುವುದು ಇನ್ನೂ ದೂರ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಪಿಟಿಐ ವರದಿ ಪ್ರಕಾರ, 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುವ ಯೋಜನೆ ಇಲ್ಲ ಎಂದು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅವರಿಗೆ ತಿಳಿಸಿದೆ. ಆದ್ದರಿಂದ, ಜುಲೈ 19 ರಂದು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುವ ಮೂರನೇ ಏಕದಿನ ಪಂದ್ಯವು ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಕೊನೆಯ ಪಂದ್ಯವಾಗಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed