Team India: ಗಂಭೀರ್-ಗಿಲ್ ಹಠಮಾರಿತನಕ್ಕೆ ಆತನ ಕರಿಯರ್ ನಾಶ! 194 ವಿಕೆಟ್ ಪಡೆದವನಿಗೆ ಈ ರೀತಿ ಅನ್ಯಾಯವೇಕೆ? | ಕ್ರೀಡಾ ಸುದ್ದಿ | ACTPnews

ಕುಲ್ದೀಪ್ ಯಾದವ್​​


Last Updated:


ಇಂಗ್ಲೆಂಡ್ ಏಕದಿನ ಸರಣಿಯ ಮೊದಲ ಪಂದ್ಯದಿಂದಲೂ, ಟೀಮ್ ಇಂಡಿಯಾ ವಿಕೆಟ್ ಪಡೆಯುವ ಮತ್ತು ರನ್ ನಿಯಂತ್ರಿಸುವಲ್ಲಿ ಹೆಸರಾಗಿರುವ ಮಧ್ಯಮ ಓವರ್ ಬೌಲರ್ ಕೊರತೆಯನ್ನು ಎದುರಿಸುತ್ತಿದೆ. ಈ ಪಾತ್ರಕ್ಕೆ ಕುಲ್ದೀಪ್ ಯಾದವ್ ಗಿಂತ ಉತ್ತಮ ಆಟಗಾರ ಭಾರತದಲ್ಲಿಲ್ಲ.

ಕುಲ್ದೀಪ್ ಯಾದವ್​​
ಕುಲ್ದೀಪ್ ಯಾದವ್​​

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ಪ್ರತಿಭಾನ್ವಿತ ಬೌಲರ್​ ಕುಲದೀಪ್ ಯಾದವ್​​ರನ್ನ ಪದೇ ಪದೇ ಕಡೆಗಣನೆ ಮಾಡ್ತಿರೋದು ಮ್ಯಾನೇಜ್​ಮೆಂಟ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗುತ್ತಿದೆ. ತಮ್ಮ ಸ್ಪಿನ್‌ನಿಂದ ವಿಶ್ವಾದ್ಯಂತ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಕುಲದೀಪ್ ಯಾದವ್​​ಗೆ ಇಡೀ ಸರಣಿಯಲ್ಲಿ ಒಂದೇ ಒಂದು ಅವಕಾಶ ಸಿಗಲಿಲ್ಲ. ಗಾಯದ ಕಾರಣದಿಂದಾಗಿ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದರು. ಇದರ ಹೊರತಾಗಿಯೂ, ನಾಯಕ ಶುಭ್​ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕುಲದೀಪ್ ಅವರನ್ನು ಪ್ಲೇಯಿಂಗ್​ ಇಲೆವೆನ್​ಗೆ ಪರಿಗಣಿಸದಿರುವುದು ವಿವಾದಕ್ಕೆ ಕಾರಣವಾಗಿದೆ.

ಇಂಗ್ಲೆಂಡ್ ಏಕದಿನ ಸರಣಿಯ ಮೊದಲ ಪಂದ್ಯದಿಂದಲೂ, ಟೀಮ್ ಇಂಡಿಯಾ ವಿಕೆಟ್ ಪಡೆಯುವ ಮತ್ತು ರನ್ ನಿಯಂತ್ರಿಸುವಲ್ಲಿ ಹೆಸರಾಗಿರುವ ಮಧ್ಯಮ ಓವರ್ ಬೌಲರ್ ಕೊರತೆಯನ್ನು ಎದುರಿಸುತ್ತಿದೆ. ಈ ಪಾತ್ರಕ್ಕೆ ಕುಲದೀಪ್ ಯಾದವ್ ಗಿಂತ ಉತ್ತಮ ಆಟಗಾರ ಭಾರತದಲ್ಲಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ, 80 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡರೂ, ಇಂಗ್ಲಿಷ್ ತಂಡ 258 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ನಂತರ, ಎರಡನೇ ಏಕದಿನ ಪಂದ್ಯದಲ್ಲಿ, 53 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡರೂ, ಅವರು 234 ರನ್ ಗಳ ಗುರಿಯನ್ನು ಸುಲಭವಾಗಿ ಸಾಧಿಸಿತು. ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ, ಜಸ್ಪ್ರೀತ್ ಬುಮ್ರಾ ಆಡದ ಮೊದಲ ವಿಕೆಟ್ 192 ರನ್ ದಾಖಲಾಯಿತು. ಇಂತಹ ಪರಿಸ್ಥಿತಿಯಲ್ಲಿ ಕುಲದೀಪ್ ಇದ್ದಿದ್ದರೆ ಪಂದ್ಯದ ಗತಿಯೇ ಬೇರೆಯಾಗಿರುತ್ತಿತ್ತು. ಆದರೆ ಅವರನ್ನ ಬ್ಯಾಟಿಂಗ್ ಮಾಡದ ಕಾರಣ ಪದೇ ಪದೇ ಕಡೆಗಣಿಸಲಾಗುತ್ತಿದೆ.

ಕುಲದೀಪ್ ಕರಿಯರ್ ಮುಗಿಯಿತಾ?

ಕುಲದೀಪ್ ಯಾದವ್ ಅವರನ್ನ ಸತತವಾಗಿ ಬೆಂಚ್ ಕಾಯುವಂತೆ ಮಾಡುತ್ತಿರುವುದು ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಕೂಡ ಇದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಎಕ್ಸ್ ಮೂಲಕ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಅವರು, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ವಾಷಿಂಗ್ಟನ್ ಸುಂದರ್ ಅನುಪಸ್ಥಿತಿಯ ಹೊರತಾಗಿಯೂ ಲಾರ್ಡ್ಸ್ ಪಂದ್ಯಕ್ಕಾಗಿ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಸಿಗದ ಕಾರಣ ಕುಲದೀಪ್ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಿರಬಹುದು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಕುಲದೀಪ್ ಯಾದವ್ ಅವರ ಅದ್ಭುತ ದಾಖಲೆ

ಕುಲದೀಪ್ ಯಾದವ್ ಮೂರು ಮಾದರಿಯಲ್ಲೂ ಆಡಬಲ್ಲ ಭಾರತದ ಟಾಪ್​ ಬೌಲರ್​​ಗಳಲ್ಲಿ ಒಬ್ಬರು. ಅವರು ಏಕದಿನ ಮಾದರಿಯಲ್ಲಿ ತಮ್ಮನ್ನು ತಾವು ಈಗಾಗಲೇ ಸಾಬೀತುಪಡಿಸಿದ್ದಾರೆ. 121 ಏಕದಿನ ಪಂದ್ಯಗಳನ್ನಾಡಿರುವ ಅವರು 118 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿ 194 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಕೊನೆಯ ಏಕದಿನ ಪಂದ್ಯ ಅಫ್ಘಾನಿಸ್ತಾನ ವಿರುದ್ಧವಾಗಿತ್ತು. ಅಲ್ಲಿ ಅವರು 10 ಓವರ್‌ಗಳ ಅವಧಿಯಲ್ಲಿ 42 ರನ್‌ಗಳಿಗೆ ವಿಕೆಟ್ ಪಡೆಯಲಿಲ್ಲ. ಆದರೆ, ತಂಡದ ಆಡಳಿತವು ಒಂದು ಪಂದ್ಯದ ಪ್ರದರ್ಶನವನ್ನ ಆಧರಿಸಿ ಕುಲದೀಪ್ ಅವರ ಪ್ರತಿಭೆಯನ್ನ ನಿರ್ಣಯಿಸುತ್ತಿರುವುದಕ್ಕೆ ಗಂಭೀರ್​-ಗಿಲ್ ಮೇಲೆ ಅಸಮಾಧಾನವನ್ನುಂಟು ಮಾಡಿದೆ.

ಗಂಭೀರ್​-ಗಿಲ್ ಹಠ

ಗಂಭೀರ್​ ಕೋಚ್​ ಆದಾಗಿನಿಂದ ಬೌಲಿಂಗ್ ಮಾತ್ರ ಮಾಡುವ ಆಟಗಾರರನ್ನ ಕಡೆಗಣಿಸುತ್ತಿದ್ದಾರೆ. ಇದೇ ಕಾರಣದಿಂದ ಯುಜ್ವೇಂದ್ರ ಚಹಲ್​​ರನ್ನ ತಂಡದಿಂದ ದೂರ ಮಾಡಲಾಯಿತು. ಇವರ ಬದಲಾಗಿ ಅಕ್ಷರ್ ಪಟೇಲ್, ವಾಷಿಂಗ್ಟನ್​ ಸುಂದರ್​​ರನ್ನ ತಂಡದಲ್ಲಿ ಖಾಯಂ ಮಾಡಲಾಯಿತು. ಜಡೇಜಾರನ್ನ ತಂಡದಿಂದ ದೂರ ಇಟ್ಟಿರುವ ಮ್ಯಾನೇಜ್​ಮೆಂಟ್ ನಿಧಾನವಾಗಿ ಚೈನಾಮನ್ ಕುಲದೀಪ್​ ಯಾದವ್​​ರನ್ನ ಕೂಡ ಒಂದೊಂದೆ ಸ್ವರೂಪದಿಂದ ದೂರ ಮಾಡುತ್ತಿದ್ದಾರೆ.

ಆಲ್​ರೌಂಡರ್​ಗಳಿದ್ದರೆ ಬ್ಯಾಟಿಂಗ್ ತುಂಬಾ ಆಳವಾಗಿರಲಿದೆ ಎಂಬ ಕಾರಣ ನೀಡಿ ಆಲ್​ರೌಂಡರ್​ಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಆದರೆ ಅಕ್ಷರ್ ಪಟೇಲ್ ಹಾಗೂ ಸುಂದರ್​ ಬ್ಯಾಟಿಂಗ್ ಹಾಗೂ ಬೌಲಿಂಗ್​​​ ಎರಡರಲ್ಲೂ ನೆರವಾಗುತ್ತಿಲ್ಲ. ಅದರಲ್ಲೂ ಸುಂದರ್ ಬೌಲಿಂಗ್​​ನಿಂದ ತಂಡಕ್ಕೆ ಯಾವುದೇ ಲಾಭವಿಲ್ಲ. ಈಗಾಗಲೇ ತಂಡದಲ್ಲಿ ಇವರಿಬ್ಬರು ಆಲ್​ರೌಂಡರ್ ಇರುವಾಗಲೇ ಹರ್ಷ್ ದುಬೆಯನ್ನ ತಂಡಕ್ಕೆ ಬ್ಯಾಕ್ ಅಪ್ ಮಾಡಿಕೊಳ್ಳಲಾಗುತ್ತಿದೆ. ಅಂದರೆ ಅಕ್ಷರ್​-ಸುಂದರ್ ವಿಫಲರಾದರೆ, ಆ ಸ್ಥಾನಕ್ಕೆ ದುಬೆಯನ್ನ ಸೇರಿಸುವ ಆಲೋಚನೆ ಮ್ಯಾನೇಜ್​ಮೆಂಟ್​​ನಲ್ಲಿದೆ. ಹಾಗಾಗಿ ಕೇವಲ 31 ವರ್ಷಕ್ಕೆ ಕುಲದೀಪ್ ಯಾದವ್ ವೃತ್ತಿಜೀವನ ಚಹಲ್​ನಂತೆಯೇ ಅಂತ್ಯವಾಗಲಿದೆಯೇ ಎನ್ನುವ ಅನುಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕುಲದೀಪ್ ಅಂಕಿ ಅಂಶ

ಕುಲದೀಪ್ ಯಾದವ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಆಡಿರುವ 18 ಟೆಸ್ಟ್ ಪಂದ್ಯಗಳಿಂದ 22.35 ರ ಸರಾಸರಿಯಲ್ಲಿ 79 ವಿಕೆಟ್, 121 ಏಕದಿನ (ODI) ಪಂದ್ಯಗಳಲ್ಲಿ 27.05ರ ಸರಾಸರಿಯಲ್ಲಿ 194 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 54 ಪಂದ್ಯಗಳಿಂದ 13.75 ರ ಅದ್ಭುತ ಸರಾಸರಿಯಲ್ಲಿ 95 ವಿಕೆಟ್ ಪಡೆದಿರುವ ಅವರು, ಐಪಿಎಲ್‌ನ ಒಟ್ಟು 110 ಪಂದ್ಯಗಳಲ್ಲಿ 112 ವಿಕೆಟ್‌ಗಳನ್ನು ದಾಖಲಿಸುವ ಮೂಲಕ ಮೂರೂ ಸ್ವರೂಪದ ಕ್ರಿಕೆಟ್‌ ಹಾಗೂ ದೇಶೀಯ ಟೂರ್ನಿಗಳಲ್ಲಿ ಭಾರತದ ಪ್ರಮುಖ ಮ್ಯಾಚ್-ವಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed