Team India: ಶಮಿ, ಭುವಿ ಕಮ್​​ಬ್ಯಾಕ್, ಪಂತ್​ಗೂ ಚಾನ್ಸ್! 2027ರ ಏಕದಿನ ವಿಶ್ವಕಪ್​​​ಗೆ ಭಾರತ ತಂಡ ಘೋಷಿಸಿದ ಶಾಸ್ತ್ರಿ | ಕ್ರೀಡಾ ಸುದ್ದಿ | ACTPnews

ಭುವನೇಶ್ವರ್ ಕುಮಾರ್- ಮೊಹಮ್ಮದ್ ಶಮಿ


Last Updated:


2027ರ ವಿಶ್ವಕಪ್​ಗೆ ರವಿಶಾಸ್ತ್ರಿ ಶುಭಮನ್ ಗಿಲ್​ಗೆ ನಾಯಕತ್ವವನ್ನು ವಹಿಸಿದ್ದಾರೆ . ಭಾರತದ ಮಾಜಿ ಹೆಡ್​ ಕೋಚ್​, ಯುವ ಆಟಗಾರ ಗಿಲ್ ಅವರನ್ನು ಭವಿಷ್ಯದ ನಾಯಕ ಎಂದು ಪರಿಗಣಿಸುತ್ತಾರೆ. 2027 ರ ವಿಶ್ವಕಪ್‌ಗೆ ನಾಯಕತ್ವಕ್ಕೆ ಅವರೇ ಅತ್ಯಂತ ಸೂಕ್ತ ಆಯ್ಕೆ ಎಂದು ಕರೆದಿದ್ದಾರೆ.

ಭುವನೇಶ್ವರ್ ಕುಮಾರ್- ಮೊಹಮ್ಮದ್ ಶಮಿ
ಭುವನೇಶ್ವರ್ ಕುಮಾರ್- ಮೊಹಮ್ಮದ್ ಶಮಿ

ಐಸಿಸಿ ಏಕದಿನ ವಿಶ್ವಕಪ್ 2027 (World Cup) ಇನ್ನೂ ಒಂದು ವರ್ಷಕ್ಕಿಂತ ಹೆಚ್ಚು ಸಮಯವಿದೆ, ಆದರೆ ತಂಡಗಳು ಈಗಾಗಲೇ ತಮ್ಮ ಸಿದ್ಧತೆಗಳನ್ನು ಆರಂಭಿಸಿವೆ. ಇಂಗ್ಲೆಂಡ್ ವಿರುದ್ಧದ (India vs England) ಏಕದಿನ ಸರಣಿ ಸೋಲಿನ ನಂತರ, ಟೀಮ್ ಇಂಡಿಯಾದ ಆಯ್ಕೆ ಮತ್ತು ಕಾರ್ಯತಂತ್ರದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಗೌತಮ್ ಗಂಭೀರ್​ ನೇತೃತ್ವದ ಮ್ಯಾನೇಜ್​ಮೆಂಟ್ ಮಾಡುತ್ತಿರುವ ಪ್ರಯೋಗಗಳು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿವೆ. ತಂಡದ ಆಯ್ಕೆಯಲ್ಲೂ ಮ್ಯಾನೇಜ್​ಮೆಂಟ್ ಎಡವುತ್ತಿದೆ. ಇದರ ಮಧ್ಯೆ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ 2027 ರ ವಿಶ್ವಕಪ್‌ಗಾಗಿ ತಮ್ಮ ಇಷ್ಟದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿ ಎಂದರೆ ತಂಡದಿಂದ ಹೊರಬಿದ್ದಿರುವ ಅನುಭವಿ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಈ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಅಲ್ಲದೆ ಏಕದಿನ ತಂಡದಿಂದ ಹೊರಗುಳಿದಿರುವ ರಿಷಭ್ ಪಂತ್ ಅವರನ್ನು ಸಹ ಈ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

2027ರ ವಿಶ್ವಕಪ್​ಗೆ ರವಿಶಾಸ್ತ್ರಿ ಶುಭಮನ್ ಗಿಲ್​ಗೆ ನಾಯಕತ್ವವನ್ನು ವಹಿಸಿದ್ದಾರೆ. ಭಾರತದ ಮಾಜಿ ಹೆಡ್​ ಕೋಚ್​, ಯುವ ಆಟಗಾರ ಗಿಲ್ ಅವರನ್ನು ಭವಿಷ್ಯದ ನಾಯಕ ಎಂದು ಪರಿಗಣಿಸುತ್ತಾರೆ. 2027 ರ ವಿಶ್ವಕಪ್‌ಗೆ ನಾಯಕತ್ವಕ್ಕೆ ಅವರೇ ಅತ್ಯಂತ ಸೂಕ್ತ ಆಯ್ಕೆ ಎಂದು ಕರೆದಿದ್ದಾರೆ. ಗಿಲ್ ಅವರ ಬ್ಯಾಟಿಂಗ್ ಸಾಲಿನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಶಮಿ ಮತ್ತು ಭುವನೇಶ್ವರ್ ಆಯ್ಕೆ

ಶಾಸ್ತ್ರಿ ತಂಡದ ಅತ್ಯಂತ ಚರ್ಚಾಸ್ಪದ ಅಂಶವೆಂದರೆ ಅನುಭವಿ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನ ಏಕದಿನ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಪ್ರಸ್ತುತ ಇಬ್ಬರೂ ಬೌಲರ್‌ಗಳು ಏಕದಿನ ತಂಡದ ಭಾಗವಾಗಿಲ್ಲ ಮತ್ತು ಬಹಳ ಸಮಯದಿಂದ ಹೊರಗಿದ್ದಾರೆ. ಆದರೆ ದೊಡ್ಡ ಟೂರ್ನಮೆಂಟ್​​ಗಳಲ್ಲಿ ಅವರ ಅನುಭವವು ತಂಡಕ್ಕೆ ನಿರ್ಣಾಯಕವಾಗಲಿದೆ ಎಂದು ಶಾಸ್ತ್ರಿ ನಂಬುತ್ತಾರೆ. ಅವರು ವೇಗದ ಬೌಲಿಂಗ್ ದಾಳಿಯಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಸೇರಿಸಿಕೊಂಡಿದ್ದಾರೆ. ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಸ್ಪಿನ್ ವಿಭಾಗಕ್ಕೆ ಆಯ್ಕೆ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಅವರನ್ನು ತಂಡದ ಪ್ರಮುಖ ಆಲ್​ರೌಂಡರ್​ಗಳಾಗಿ ಉಲ್ಲೇಖಿಸಿದ ರವಿಶಾಸ್ತ್ರಿ, ಇವರು ತಂಡಕ್ಕೆ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯಾವುದೇ ತಂಡಕ್ಕೆ ಬಲಿಷ್ಠ ಆಲ್‌ರೌಂಡರ್‌ಗಳು ಪ್ರಮುಖ ಶಕ್ತಿಯಾಗಿದ್ದು, ಈ ವಿಭಾಗದಲ್ಲಿ ಭಾರತಕ್ಕೆ ಅತ್ಯುತ್ತಮ ಆಯ್ಕೆಗಳಿವೆ ಎಂದು ತಿಳಿಸಿದ್ದಾರೆ.

2019ರ ವಿಶ್ವಕಪ್​​ನಲ್ಲಿದ್ದ 10 ಆಟಗಾರರಿಗೆ ಚಾನ್ಸ್

ಕುತೂಹಲಕಾರಿಯಾಗಿ, ಶಾಸ್ತ್ರಿ ಅವರ 15 ಸದಸ್ಯರ ತಂಡದಲ್ಲಿ 2019 ರ ODI ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ 10 ಆಟಗಾರರು ಸೇರಿದ್ದಾರೆ. ಅಕ್ಷರ್ ಪಟೇಲ್ ಮತ್ತು ಅರ್ಶ್‌ದೀಪ್ ಸಿಂಗ್ ಇನ್ನೂ ODI ವಿಶ್ವಕಪ್‌ನಲ್ಲಿ ಆಡದ ಇಬ್ಬರು ಆಟಗಾರರು. ರವಿಶಾಸ್ತ್ರಿ ಅವರ ತಂಡವು ಅನುಭವಿ ಆಟಗಾರರನ್ನು ಭವಿಷ್ಯದ ತಾರೆಗಳೊಂದಿಗೆ ಸಂಯೋಜಿಸುತ್ತದೆ. ಆದಾಗ್ಯೂ, 2027 ರ ವಿಶ್ವಕಪ್ ಇನ್ನೂ ಬಹಳ ದೂರದಲ್ಲಿದೆ ಮತ್ತು ಆಟಗಾರರ ಫಾರ್ಮ್, ಫಿಟ್‌ನೆಸ್ ಮತ್ತು ಪ್ರದರ್ಶನವು ತಂಡದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ರವಿಶಾಸ್ತ್ರಿ ಅವರ 15 ಸದಸ್ಯರ ತಂಡ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports