Last Updated:
ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇವರ ನಂತರ ಇನ್ನೂ ಕೆಲವು ಕ್ರಿಕೆಟ್ ಆಟಗಾರರು ಸಹ ನಿವೃತ್ತಿ ಆಗಬಹುದು. ಅಂಥ ಐದು ಆಟಗಾರರನ್ನು ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಟೀಮ್ ಇಂಡಿಯಾ (Team India) ಭರವಸೆ ಬ್ಯಾಟರ್ ಅಜಿಂಕ್ಯ ರಹಾನೆ (Ajinkya Rahane) ಅಂತಾರಾಷ್ಟ್ರೀಯ ಕ್ರಿಕೆಟ್(Cricket)ಗೆ ವಿದಾಯ ಹೇಳಿದ್ದಾರೆ. ಅವರು ಮೂರು ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿದ್ದರು. ಹಿಂತಿರುಗುವ ಸಾಧ್ಯತೆ ಕಡಿಮೆಯಾಗುತ್ತಾ ಬಂದಿದ್ದರಿಂದ ಅವರು ನಿವೃತ್ತಿ (Retirement) ತೆಗೆದುಕೊಂಡಿದ್ದಾರೆ. ರಹಾನೆ ಮಾತ್ರವಲ್ಲ, ಟೀಮ್ ಇಂಡಿಯಾಗೆ ಮರಳುವುದು ಕಷ್ಟವಾಗಿರುವ ಮತ್ತು ಶೀಘ್ರದಲ್ಲೇ ನಿವೃತ್ತಿ ಹೊಂದಬಹುದಾದ ಇನ್ನೂ ಐದು ಭಾರತೀಯ ಕ್ರಿಕೆಟಿಗರರಿದ್ದಾರೆ.
ಈ ಐದು ಕ್ರಿಕೆಟಿಗರು 3 ವರ್ಷಗಳಿಗಿಂತ ಹೆಚ್ಚು ಕಾಲ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ದೇಶೀಯ ಪಂದ್ಯಗಳು ಮತ್ತು ಐಪಿಎಲ್ನಲ್ಲಿ ಚೆನ್ನಾಗಿ ಆಡುತ್ತಿದ್ದರೂ ಟೀಮ್ ಇಂಡಿಯಾಗೆ ಆಯ್ಕೆಯಾಗಿಲ್ಲ. ಆದ್ದರಿಂದ ಅಜಿಂಕ್ಯ ರಹಾನೆ ನಂತರ ಇವರು ನಿವೃತ್ತಿ ಘೋಷಿಸಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಭುವನೇಶ್ವರ್ ಕುಮಾರ್ ಹಿಂದೆ ಭಾರತ ತಂಡದ ಮುಖ್ಯ ವೇಗದ ಬೌಲರ್ ಆಗಿದ್ದರು. ಆದರೆ ಈಗ ಅವರು ಭಾರತದ ಭವಿಷ್ಯದ ಯೋಜನೆಗಳ ಭಾಗವಾಗಿಲ್ಲ. ಆದ್ದರಿಂದ ಐಪಿಎಲ್ನಲ್ಲಿ ನಿರಂತರವಾಗಿ ಚೆನ್ನಾಗಿ ಆಡುತ್ತಿದ್ದರೂ ಟೀಮ್ ಇಂಡಿಯಾಗೆ ಅವಕಾಶ ಸಿಗುತ್ತಿಲ್ಲ. ಇದು ಅವರಿಗೆ ಚೆನ್ನಾಗಿ ಗೊತ್ತಿದೆ, ಅದಕ್ಕಾಗಿ ಅವರು ನಿವೃತ್ತಿ ತೆಗೆದುಕೊಳ್ಳಬಹುದು.
ಶಾರ್ದೂಲ್ ಠಾಕೂರ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಮುಗಿಯುವ ಹಂತದಲ್ಲಿದೆ. ಭಾರತ ತಂಡ ಈಗ ಹರ್ಷಿತ್ ರಾಣಾ ಮತ್ತು ಗುರ್ನೂರ್ ಬ್ರಾರ್ರಂತಹ ಹೊಸ ವೇಗದ ಬೌಲರ್ಗಳಿಗೆ ಅವಕಾಶ ನೀಡುತ್ತಿದೆ. ಆದ್ದರಿಂದ ಠಾಕೂರ್ ತಂಡಕ್ಕೆ ಮರಳುವುದು ಕಷ್ಟ. ಅವರು ಈಗ ಕಾಮೆಂಟರ್ ಆಗಿ ಕೆಲಸ ಪ್ರಾರಂಭಿಸಿದ್ದಾರೆ. ಹೀಗಾಗಿ ಬೇಗನೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಬಹುದು.
ಇಶಾಂತ್ ಶರ್ಮಾ ಭಾರತದ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು. ಟೀಮ್ ಇಂಡಿಯಾದ ಹಲವು ಗೆಲುವುಗಳಲ್ಲಿ ಇಶಾಂತ್ ಶರ್ಮಾ ಪ್ರಮುಖ ಪಾತ್ರವಹಿಸಿದ್ದಾರೆ. ಕೆಲವು ವರ್ಷಗಳಿಂದ ಅವರು ತಂಡದಿಂದ ಹೊರಗಿದ್ದಾರೆ. ಈಗ ಅವರಿಗೆ 37 ವರ್ಷ. ಆದ್ದರಿಂದ ಮತ್ತೆ ಟೀಮ್ ಇಂಡಿಯಾಗೆ ಸೇರುವುದು ಕಷ್ಟ. ಬಹುಶಃ ಅವರು ನಿವೃತ್ತಿ ಹೊಂದಬಹುದು.
ಏಳು ವರ್ಷ ಕಾದ ನಂತರ ಕರುಣ್ ನಾಯರ್ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಮತ್ತೆ ಸೇರಿಸಲಾಯಿತು. ಅವರಿಗೆ ನಾಲ್ಕು ಅವಕಾಶಗಳು ಸಿಕ್ಕಿದ್ದರೂ ಅವರು ಯಾವುದೇ ಪರಿಣಾಮ ಬೀರಲಿಲ್ಲ. ಆದ್ದರಿಂದ ಅವರನ್ನು ಟೆಸ್ಟ್ ತಂಡದಿಂದ ಹೊರಗಿಡಲಾಯಿತು. ಈಗ ಮತ್ತೆ ತಂಡಕ್ಕೆ ಬರುವುದು ಕಷ್ಟವಾಗಿದೆ. ಅವರು ಕೂಡ ಬೇಗನೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಬಹುದು.
ಆಯ್ಕೆದಾರರ ಭವಿಷ್ಯದ ಯೋಜನೆಯಲ್ಲಿ ಮೊಹಮ್ಮದ್ ಶಮಿ ಹೆಸರಿಲ್ಲ. ಆದ್ದರಿಂದ ಅವರು ಚೆನ್ನಾಗಿ ಆಡುತ್ತಿದ್ದರೂ ಟೀಮ್ ಇಂಡಿಯಾಗೆ ಮರಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಶಮಿ ಅಂtAರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿ ಕೇವಲ ಐಪಿಎಲ್ಗೆ ಗಮನ ಹರಿಸಬಹುದು.
Jul 30, 2026 12:50 PM IST














